ಅಂಗೈಯಲ್ಲಿದೆ ನಮ್ಮ ಆರೋಗ್ಯ

0
5475
Tap to know MORE!

ಇಡೀ ದೇಶವೇ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ದೇಶದ ಜನತೆಯ ಸುರಕ್ಷತೆಗಾಗಿ ಸರ್ಕಾರವೇನೋ ಕೊರೋನಾ ಲಸಿಕೆ ಕಂಡುಹಿಡಿಯಲು ತನ್ನ ಕೈಲಾದ ಪ್ರಯತ್ನ ಮಾಡುತ್ತಿದೆ. ಆದರೆ ನಮ್ಮ ಅರೋಗ್ಯವನ್ನು ನಾವು ಕಾಪಾಡುವ ಪ್ರಯತ್ನ ಮಾಡೋಣ. ಎಲ್ಲವನ್ನು ಸರ್ಕಾರದ ಹೆಗಲಿಗೆ ಹೊರಿಸುವ ಬದಲು ನಮ್ಮ ಜವಾಬ್ದಾರಿಯನ್ನೂ ಅರಿಯೋಣ.

ಕೊರೋನಾ ಮಹಾಮಾರಿ ನಮ್ಮ ಬಳಿಗೆ ಸುಳಿಯಬಾರದು ಎಂದರೆ ನಾವು ಸ್ವಚ್ಛವಾಗಿರಬೇಕು. ಅದು ಹೊಸದೇನೂ ಅಲ್ಲ. ನಮ್ಮ ಹಿರಿಯರು ಹೇಳಿಕೊಟ್ಟ ನಮ್ಮನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳುವ ಕ್ರಮವಷ್ಟೆ. ನಮ್ಮ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಮ್ಮ ಅಂಗೈಯಲ್ಲಿ ಅದೃಷ್ಟರೇಖೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿದೆ.

ಆಹಾರ ತಿನ್ನುವ ಮೊದಲು, ಸ್ನಾನದ ಕೋಣೆಗೆ ಹೋಗಿಬಂದ ಬಳಿಕ ನಮ್ಮ ಅಂಗೈ ತೊಳೆಯುವ ಅಭ್ಯಾಸವಿರಲಿ. ಕೈಗಳನ್ನು ತೊಳೆದುಕೊಳ್ಳುವುದೆಂದರೆ ಕಾಯಿಲೆಗಳನ್ನ ತೊಳೆದುಹಾಕಿದಂತೆ. ಶುಭ್ರವಿಲ್ಲದ ಕೈಗಳಿಂದ ಎಲ್ಲರೂ ಬಳಸುವ ವಸ್ತುಗಳನ್ನು ಮುಟ್ಟಿದರೆ ಕಾಯಿಲೆಗಳನ್ನೂ ಇತರರಿಗೆ ಹಂಚಿದ ಪಾಪ ನಮ್ಮದಾಗುತ್ತದೆ. ನಾವು ಧರಿಸುವ ಬಟ್ಟೆಯನ್ನು ಒಮ್ಮೆ ಬಳಸಿ ಒಗೆಯುವುದು (ಈಗ ಮಾಸ್ಕ್ ಸೇರಿ) ಕೂಡ ಮುಖ್ಯ. ಎಲ್ಲರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ. ಅವರು ಒಳ್ಳೆಯವರೇ ಇರಬಹುದು. ಆದರೆ ಖಾಯಿಲೆ ಅದನ್ನೆಲ್ಲಾ ನೋಡೋದಿಲ್ಲ ಎಂಬುದಷ್ಟೇ ಸತ್ಯ!

ನಮ್ಮಂತೆಯೇ ನಾವು ತಿನ್ನುವ ಆಹಾರವೂ ಶುಭ್ರವಾಗಿರಲಿ. ನೋಡಿದಾಗ ಚೆಂದಕ್ಕಿದ್ದರೂ ಈ ಕಾಣದ ಶತ್ರು ಕೊರೋನಾ ಇರಲ್ಲಾ ಅನ್ನೋ ಗ್ಯಾರಂಟಿಯಿಲ್ಲ. ಹಾಗಾಗಿ ಉಗುರುಬೆಚ್ಚಗಿನ ನೀರಲ್ಲಿ ಸ್ಪಲ್ಪ ಉಪ್ಪುಬೆರೆಸಿದ ನೀರಲ್ಲಿ ತೊಳೆದು ಉಪಯೋಗಿಸೋಣ. ಇಷ್ಟಾದ್ರೂ ನಮ್ಮ ಗ್ರಹಚಾರಕ್ಕೆ ಕೊರೋನಾ ಲಕ್ಷಣ ಬಂದುಬಿಟ್ಟರೆ ಚಿಂತೆಬೇಡ. ಸರ್ಕಾರ ಕೊಟ್ಟಿರುವ ಟಾಲ್ ಪ್ರೀ ನಂಬರ್ಗಳಿಗೆ ಕಾಲ್ ಮಾಡಿ ತಿಳಿಸೋಣ. ಕೊವಿಡ್ ಬಂದಿರುವುದು ಖಾತ್ರಿಯಾದರೆ ಸ್ವಲ್ಪ ದಿನ ಐಸೋಲೇಶನ್ನಲ್ಲಿ ಕಳೆಯೋಣ. 6-7 ದಿನದ ಬಳಿಕವು ಲಕ್ಷಣ ಕಡಿಮೆಯಾಗದಿದ್ದರಷ್ಟೇ ಆಸ್ಪತ್ರೆಗೆ ಬೇಟಿ.

ನಾವು ಪಾಲಿಸಬಹುದಾದ ಇನ್ನೊಂದು ದೊಡ್ಡ ಸ್ವರಕ್ಷಣೆಯ ತಂತ್ರವೆಂದರೆ ಸೂಕ್ತ ಆಹಾರದ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು. ಕೊರೋನದಂತಹ ಕಾಯಿಲೆಗೆ ನಮ್ಮ ಬಳಿ ಲಸಿಕೆ ಇಲ್ಲ. ಆದರೆ ಕಾಯಿಲೆ ಬರದಂತೆ ತಡೆಯೋಕೇ ನಮ್ಮ ಕೈಗಳಿಂದ ಸಾಧ್ಯವಿದೆ. ಕಾಳಜಿ ವಹಿಸುವುದರ ಮೂಲಕ ಕೊರೋನ ಮಹಾಮಾರಿಯಿಂದ ನಮ್ಮ ಹಾಗೂ ಕುಟುಂಬದವರ ಆರೋಗ್ಯವನ್ನು ಕಾಪಾಡೋಣ

ಪ್ರಮೀಳಾ
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here