ಅಂತಿಮ ಪರೀಕ್ಷೆ : ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್!

0
230
Tap to know MORE!

ನವದೆಹಲಿ : ಇಂದು ಉಚ್ಚ ನ್ಯಾಯಾಲಯವು, ಯುಜಿಸಿ ಮಾರ್ಗಸೂಚಿಗಳ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಿದೆ. ಇದಲ್ಲದೆ, ಯಾವುದೇ ಮಧ್ಯಂತರ ಆದೇಶವನ್ನು ರವಾನಿಸಲು ನಿರಾಕರಿಸಿದೆ.

ಎಸ್‌ಜಿ ಮೆಹ್ತಾ ಅವರಿಗೆ ಗೃಹ ಸಚಿವಾಲಯದ ನಿರ್ಧಾರವನ್ನು ಸ್ಪಷ್ಟಪಡಿಸುವಂತೆ ತಿಳಿಸಲಾಗಿದೆ. ಆಗಸ್ಟ್ 7 ರೊಳಗೆ ಅಫಿಡವಿಟ್‌ಗಳನ್ನು ಸಲ್ಲಿಸಲು ಕೇಳಲಾಗಿದೆ. ಮರು ಜೋಡಣೆಗಾಗಿ ಒಂದು ದಿನವನ್ನು ನಿಗದಿಪಡಿಸಿ, ಆಗಸ್ಟ್ 10 ರಂದು ಮುಂದಿನ ವಿಚಾರಣೆ ನಡೆಸಲಾಗುವುದೆಂದು ನ್ಯಾಯಾಲಯ ಆದೇಶಿಸಿದೆ.

ಇಂದು ನಡೆದ ವಿಚಾರಣೆಯ ಮುಖ್ಯಾಂಶಗಳು :

 • ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು, ಯುಜಿಸಿ ಮಾರ್ಗಸೂಚಿಗಳನ್ನು ಪ್ರಶ್ನಿಸಿದ ಅರ್ಜಿಯನ್ನು ಆಲಿಸಿತು.
 • ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಯಶ್ ದುಬೆ ಪರವಾಗಿ ವಾದ ಸಲ್ಲಿಸಿದರು.
  • ಸಿಂಘ್ವಿ : ದೇಶಾದ್ಯಂತ ಕೋವಿಡ್-19 ಪ್ರಕರಣಗಳು 16 ಲಕ್ಷ ದಾಟಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನೂ ಗಮನಿಸದೆ, ಯುಜಿಸಿಯ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ.
 • ನ್ಯಾಯಮೂರ್ತಿ ಭೂಷಣ್ : ಯುಜಿಸಿಯು ಯಾವಾಗ ಬೇಕಾದರೂ ತನ್ನ ಮಾರ್ಗಸೂಚಿಗಳನ್ನು ಪುನಃ ಪರಿಶೀಲಿಸಬಹುದು
 • ಸಿಂಘ್ವಿ : ಹೌದು, ಆದರೆ ಆ ‘ ಮರುಪರಿಶೀಲನೆಯು’ ಅನಿಯಂತ್ರಿತವಾಗಿರುತ್ತದೆ.
 • ಮುಂದುವರೆಸುತ್ತಾ…. ಆನ್‌ಲೈನ್ ಪರೀಕ್ಷೆಗಳನ್ನು ನಡೆಸಲು ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಪರೀಕ್ಷೆಯ ಆನ್‌ಲೈನ್ ಮೋಡ್ ಅನ್ನು ಅಳವಡಿಸಿಕೊಳ್ಳುವುದು ಕಾರ್ಯಸಾಧ್ಯವಲ್ಲ.
 • ನ್ಯಾಯಮೂರ್ತಿ : ಮಾರ್ಗಸೂಚಿಗಳು, ಆನ್‌ಲೈನ್ ಮತ್ತು ಆಫ್‌ಲೈನ್ ಎರಡನ್ನೂ ಒದಗಿಸುತ್ತವೆ
 • ಸಿಂಘ್ವಿ : ಹೌದು, ಆದರೆ, ಈ ಮಾರ್ಗಸೂಚಿಗಳು ಕೋವಿಡ್-19 ಮಧ್ಯೆ ವಿದ್ಯಾರ್ಥಿಗಳನ್ನು ಮತ್ತಷ್ಟು ಕಷ್ಟಕ್ಕೆ ದೂಡುತ್ತವೆ.
  • ಅದಲ್ಲದೆ ಪರೀಕ್ಷೆಯು ಸಮಸ್ಯಾತ್ಮಕವಾಗಿದೆ. ಯಾರಾದರೂ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದಿದ್ದರೆ ಮತ್ತು ಅವರಿಗೆ ನಂತರದ ಆಯ್ಕೆಯನ್ನು ನೀಡಿದರೆ ಅದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ!
 • ನ್ಯಾಯಮೂರ್ತಿ : ಆದರೆ ಈ ಎಲ್ಲಾ ವ್ಯವಸ್ಥೆಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ.
 • ಸಿಂಘ್ವಿ : ಅನೇಕ ವಿಶ್ವವಿದ್ಯಾಲಯಗಳನ್ನು ಕೋವಿಡ್-19 ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಬಹುತೇಕ ಸಂಸ್ಥೆಗಳು ಕೋವಿಡ್ ಆರೈಕೆ ಕೇಂದ್ರಗಳಾಗಿದೆ. ಬಾರ್ ಕೌನ್ಸಿಲ್ ಕೂಡ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಯುಜಿಸಿಯ ಜುಲೈ 6 ರ ಮಾರ್ಗಸೂಚಿಗಳು ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಸಹ ನಿರ್ಲಕ್ಷಿಸುತ್ತವೆ.
 • ನ್ಯಾಯಮೂರ್ತಿ : ಜುಲೈ 20ರಂದು ಮಾರ್ಗಸೂಚಿಗಳು ಪ್ರಕಟಗೊಂಡಿವೆ. ಜುಲೈ 6 ನ್ನು ಹೇಗೆ ಗಣನೆಗೆ ತೆಗೆದುಕೊಳ್ಳಬಹುದು? ಆ ಮಾರ್ಗಸೂಚಿಯ ಉದ್ದೇಶವು ಪರೀಕ್ಷೆಗಳಿಗೆ ಸಂಬಂಧಿಸಿಲ್ಲ.

ಗೃಹ ಸಚಿವಾಲಯದ ನಿಲುವನ್ನು ಸ್ಪಷ್ಟಪಡಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂ ಕೋರ್ಟ್ ಹೇಳುತ್ತದೆ.

 • ಎಸ್‌ಜಿ ತುಷಾರ್ ಮೆಹ್ತಾ : ಸೋಮವಾರರದೊಳಗೆ ನಾವು ಮಾಡುತ್ತೇವೆ. ಪರೀಕ್ಷೆಗೆ ತಯಾರಿ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯದಲ್ಲಿ ಯಾರೂ ಇರಬಾರದು. ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಬೇಕು.
 • ನ್ಯಾಯಮೂರ್ತಿ : ನಾವು ಯಾವುದೇ ಮಧ್ಯಂತರ ಆದೇಶವನ್ನು ಅಂಗೀಕರಿಸಿಲ್ಲ. ಆಗಸ್ಟ್ 7 ರೊಳಗೆ ಅಫಿಡವಿಟ್ಗಳನ್ನು ಸಲ್ಲಿಸಬೇಕು. ಆಗಸ್ಟ್ 10 ರಂದು ಮುಂದಿನ ವಿಚಾರಣೆ ನಡೆಯಲಿದೆ.
 • ವಕೀಲ ಅಲಖ್ : ಬಿಹಾರ ಮತ್ತು ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅನೇಕ ವಿದ್ಯಾರ್ಥಿಗಳು ಸಿಲುಕಿಕೊಂಡಿರುವುದರಿಂದ, ಮಧ್ಯಂತರ ಆದೇಶ ಹೊರಡಿಸಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಆ ವಿದ್ಯಾರ್ಥಿಗಳು ಹೇಗೆ ಪ್ರಯಾಣ ಬೆಳೆಸುತ್ತಾರೆ
 • ನ್ಯಾಯಮೂರ್ತಿ : ನಾವು ಈಗ ಯಾವುದೇ ಮಧ್ಯಂತರ ಆದೇಶಗಳನ್ನು ರವಾನಿಸುತ್ತಿಲ್ಲ. ಆಗಸ್ಟ್ 10 ರಂದು ಮುಂದಿನ ವಿಚಾರಣೆ.

(ಇನ್ನೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ)

LEAVE A REPLY

Please enter your comment!
Please enter your name here