ಚೆನ್ನೈ : ನಿನ್ನೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಚೆನ್ನೈನ ಸತ್ಯಂ ಥಿಯೇಟರ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್ಪಿಬಿ ಅಂತ್ಯಕ್ರಿಯೆ ನಡೆಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಿಗ್ಗೆ 11 ಗಂಟೆಗೆ ರೆಡ್ ಹಿಲ್ಸ್ ಫಾರಂ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಈಗಾಗಲೇ ಚೆನ್ನೈನಲ್ಲಿ ಸಾವಿರಾರು ಅಭಿಮಾನಿಗಳು ಎಸ್ ಪಿ ಬಿ ಅಂತಿಮ ದರ್ಶನಕ್ಕೆ ಚೆನ್ನೈನ ರಸ್ತೆಯಲ್ಲಿ ಕ್ಯೂ ನಿಂತಿದ್ದಾರೆ. ರಾತ್ರಿಯಿಂದಲೇ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 11 ಗಂಟೆಗೆ ಎಸ್ ಪಿ ಬಿ ನೆಚ್ಚಿನ ರೆಡ್ ಹಿಲ್ಸ್ ಫಾರಂ ನಲ್ಲಿ ಅವರ ಮೃತ ದೇಹದ ಅಂತ್ಯಕ್ರಿಯೆ ನೆರವೇರಲಿದೆ.