ಅಂಬೇಡ್ಕರ್‌ ಒಬ್ಬ ಮಹಾನ್‌ ಮಾನವತಾವಾದಿ: ಡಾ. ದಯಾನಂದ ನಾಯ್ಕ್

0
149
Tap to know MORE!

ಮಂಗಳೂರು: ಅಂಬೇಡ್ಕರ್‌ ಓರ್ವ ರಾಜನೀತಿಜ್ಞ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಇವೆಲ್ಲಕ್ಕೂ ಮಿಗಿಲಾಗಿ ಅವರೊಬ್ಬ ಮಹಾನ್‌ ಮಾನವತಾವಾದಿ. ʼಶರಣರ ಬದುಕನ್ನು ಮರಣದಲ್ಲಿ ನೋಡುʼ ಎಂಬುದಕ್ಕೆ ಅಂಬೇಡ್ಕರ್‌ ಉತ್ತಮ ಉದಾಹರಣೆ, ಎಂದು ಮಂಗಳಗಂಗೋತ್ರಿಯ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ನಾಯ್ಕ್‌ ಅವರು ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಭಾನುವಾರ ನಡೆದ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನ ಅಥವಾ 64 ನೇ ಪುಣ್ಯತಿಥಿಯ ಸಂಧರ್ಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಅವರ ನಿಲುವುಗಳನ್ನು ಕೆಲವರು ಒಪ್ಪದೇ ಇರಬಹುದು, ಆದರೆ ದೇಶವೆಂಬ ಮನೆಯೊಳಗಿನ ವ್ಯತ್ಯಾಸಗಳನ್ನು ತೂಗಿಸಿಕೊಂಡು ಹೋಗೋಣ. ಸಂವಿಧಾನ ಇಂದು ದೇಶವನ್ನು ಕಾಪಾಡುತ್ತಿದೆ, ಅದನ್ನು ತಿರಸ್ಕರಿಸುವ ಬದಲು ಕಾಲಕ್ಕೆ ತಕ್ಕಂತೆ ಅದನ್ನು ಬದಲಿಸುತ್ತಾ, ಬೆಳೆಸುತ್ತಾ ಸಾಗೋಣ, ಎಂದರು.

ಇದನ್ನೂ ಓದಿ: ಮಂಗಳೂರು : ವಿವಿ ಕಾಲೇಜಿನಲ್ಲಿ ಜಗದೀಶ್ ಚಂದ್ರ ಬೋಸ್ ಜನ್ಮದಿನಾಚರಣೆ

ಅಂಬೇಡ್ಕರ್, ಮಂಗಳೂರು, Mangalore university

ಮಂಗಳೂರು ವಿಶ್ವವಿದ್ಯಾನಿಲಯದ ಎನ್‌.ಎಸ್‌.ಎಸ್‌ ಅಧಿಕಾರಿ ಡಾ. ಕೆ ಎ ನಾಗರತ್ನ ಮಾತನಾಡಿ, ಅಂಬೇಡ್ಕರ್‌ ಸಮಾಜದ ಎಲ್ಲಾ ವರ್ಗದವರಿಗಾಗಿ ದುಡಿದರೂ ಒಂದು ಸಮಾಜದ ನಾಯಕರಾಗಿ ಗುರುತಿಸಿಕೊಳ್ಳುವುದು ದುರ್ದೈವ, ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಎ ಹರೀಶ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here