ಬೆಂಗಳೂರು : ʼಅಕ್ಕಿ ಎಟಿಎಂʼ ತೆರೆಯಲು ಸರ್ಕಾರ ಚಿಂತನೆ!

0
193
ಅಕ್ಕಿ ಎಟಿಎಂ, ಕರ್ನಾಟಕ,
ವಿಯೇಟ್ನಾಂ ದೇಶದಲ್ಲಿ ಈಗಾಗಲೇ ಬಳಕೆಯಲ್ಲಿರುವ ಅಕ್ಕಿ ಎಟಿಎಂ
Tap to know MORE!

ಎಟಿಎಂ ನಿಂದ ಹಣ ತೆಗೆದಿರುತ್ತೀರ. ಅದೇ ಒಂದು ಎಟಿಎಂನಿಂದ ಅಕ್ಕಿ ಪಡೆಯುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ! “ಅಕ್ಕಿ ಎಟಿಎಂ” ಮೂಲಕ ಕರ್ನಾಟಕ ಸರ್ಕಾರವು ನಿರ್ಗತಿಕರಿಗೆ ಸಹಾಯ ಮಾಡಲು ಯೋಜಿಸುತ್ತಿದೆ. ನೀರಿನ ವಿತರಣಾ ಯಂತ್ರಗಳಂತೆಯೇ, ಈ ಯಂತ್ರಗಳೂ ಕೆಲಸ ಮಾಡಲಿದೆ. ಮೆಷೀನ್‌ಗೆ ನಾಣ್ಯಗಳನ್ನು ಹಾಕಿದರೆ, ನಿರ್ದಿಷ್ಟ ಪ್ರಮಾಣದ ಅಕ್ಕಿಯನ್ನು ವಿತರಿಸುತ್ತವೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ (ಪಿಡಿಎಸ್) ಅಕ್ಕಿ ಪಡೆಯುವ ಜನರು, ಅಂತಹ ಕೇಂದ್ರಗಳಲ್ಲಿ ಯಾವುದೇ ಸಮಯದಲ್ಲಿ ಅಕ್ಕಿ ಪಡೆಯಬಹುದಾಗಿದೆ. ಅದಕ್ಕಾಗಿ, ಪಡಿತರ ಅಂಗಡಿಗಳಿಗೆ ಭೇಟಿ ನೀಡಬೇಕಾಗಿರಲ್ಲ.

ಪ್ರಸ್ತುತ, ಇಂಡೋನೇಷ್ಯಾ ಮತ್ತು ವಿಯೆಟ್ನಾಂ ಇದೇ ರೀತಿಯ ವ್ಯವಸ್ಥೆಯನ್ನು ಹೊಂದಿವೆ. ಕೊರೋನವೈರಸ್ ಸಾಂಕ್ರಾಮಿಕ ರೋಗವು ತನ್ನ ಆರ್ಥಿಕತೆಗೆ ಭಾರಿ ನಷ್ಟವನ್ನುಂಟು ಮಾಡಿದ ಕಾರಣ, ಮೇ ತಿಂಗಳಲ್ಲಿ, ದೇಶದ ಜನರು, ತಮ್ಮ ಕುಟುಂಬಗಳನ್ನು ಪೋಷಿಸಲು ಹೆಣಗಾಡುತ್ತಿರುವವರಿಗೆ ಸಹಾಯ ಮಾಡಲು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಾದ್ಯಂತ ಅಕ್ಕಿ ಎಟಿಎಂಗಳನ್ನು ತೆರೆದಿತ್ತು.

“ಬಡವರಿಗೆ ಸಹಾಯ ಮಾಡಲು ವಿವಿಧ ಸ್ಥಳಗಳಲ್ಲಿ ಅಕ್ಕಿ ಎಟಿಎಂ ಅಳವಡಿಸುವ ಪ್ರಸ್ತಾಪವಿದೆ. “100 ಕೆಜಿ, 200 ಕೆಜಿ ಮತ್ತು 500 ಕೆಜಿ ಸಾಮರ್ಥ್ಯದ ವಿವಿಧ ಗಾತ್ರಗಳಲ್ಲಿ ಇವು ಬರುತ್ತವೆ.  ನಿರ್ದಿಷ್ಟ ಪ್ರಮಾಣದ ನಾಣ್ಯಗಳನ್ನು ಹಾಕಿದರೆ, ನಿರ್ದಿಷ್ಟ ಪ್ರಮಾಣದ ಅಕ್ಕಿಯನ್ನು ವಿತರಿಸುತ್ತದೆ ” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಗೋಪಾಲಯ್ಯ ಅವರು ಹೇಳಿದರು. “ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಇನ್ನು ಪರಿಶೀಲಿಸಬೇಕು ಮತ್ತು ಕಂಟೇನರ್ ಖಾಲಿಯಾದಾಗಲೆಲ್ಲಾ ಅಕ್ಕಿಯನ್ನು ಪುನಃ ತುಂಬಿಸುವ ವ್ಯವಸ್ಥೆಯನ್ನು ಮಾಡಬೇಕಾಗಿದೆ. ನಾವು ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದ್ದೇವೆ” ಎಂದರು.

ಪ್ರಯೋಗಾತ್ಮಕವಾಗಿ, ಒಂದು ಅಥವಾ ಎರಡು ಸ್ಥಳಗಳಲ್ಲಿ ಈ ಯಂತ್ರವನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ. ಇದರಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆದರೆ, ಮುಂದಿನ ದಿನಗಳಲ್ಲಿ ನಾವು ಎಟಿಎಂ ಅನ್ನು ವಿವಿಧ ಸ್ಥಳಗಳಲ್ಲಿ ಸ್ಥಾಪಿಸುತ್ತೇವೆ’’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದ ಹೆಚ್ಚಿನ ಫಲಾನುಭವಿಗಳು ದೈನಂದಿನ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುವವರಾಗಿದ್ದರೆ. ಪಡಿತರ ಅಂಗಡಿಗಳಿಗೆ ಭೇಟಿ ನೀಡಲು ಅವರು ಕೆಲಸದಿಂದ ಹೊರಹೋಗಬೇಕು ಅಥವಾ ಅನುಮತಿ ಪಡೆಯಬೇಕಾಗುತ್ತದೆ” ಎಂದು ಹೇಳಿದರು.

ಪಡಿತರ ಅಂಗಡಿಗಳು ಬೆಳಗ್ಗೆ ಮಾತ್ರ ತೆರೆದಿರುತ್ತದೆ. ಇವುಗಳನ್ನು ೨೪ ಗಂಟೆಯೂ ತೆರೆದಿಡಲು ಸಾಧ್ಯವಿಲ್ಲ. ಆದ್ದರಿಂದ, ಅಕ್ಕಿ ಎಟಿಎಂಗಳನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಪಡಿತರ ಚೀಟಿ ಹೊಂದಿರುವವರು ಫಿಂಗರ್ ಬಯೋಮೆಟ್ರಿಕ್ ವ್ಯವಸ್ಥೆಯನ್ನೂ ಬಳಸಬಹುದು.

ಪ್ರಸ್ತುತ, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಅನ್ನ ಭಾಗ್ಯ ಯೋಜನೆಯಡಿ ತಿಂಗಳಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. 1.22 ಕೋಟಿ ಕುಟುಂಬಗಳು ಮತ್ತು 4.27 ಕೋಟಿ ವ್ಯಕ್ತಿಗಳನ್ನು ಫಲಾನುಭವಿಗಳಾಗಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರ ಕುಟುಂಬ ಸದಸ್ಯರಿಗೆ ಸರ್ಕಾರ ಉಚಿತವಾಗಿ ಅಕ್ಕಿ ವಿತರಿಸುತ್ತದೆ. ಆದರೆ ಎಪಿಎಲ್ ಕುಟುಂಬ ಸದಸ್ಯರು ಇದನ್ನು ಪ್ರತಿ ಕೆ.ಜಿ.ಗೆ 15 ರೂ. ಕೊಟ್ಟು ಖರೀದಿಸಬೇಕಾಗಿದೆ. ಕೊರೋನಾ ಸಾಂಕ್ರಾಮಿಕ ರೋಗ ಹರಡಿದಾಗಿನಿಂದ, ವಲಸೆ ಕಾರ್ಮಿಕರಿಗೆ ಅವರ ಆಧಾರ್ ಕಾರ್ಡ್ ಆಧರಿಸಿ ಉಚಿತ ಅಕ್ಕಿಯನ್ನು ಸಹ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here