ಅಕ್ಷರ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣಾ ಕಾರ್ಯಕ್ರಮ

0
677
Tap to know MORE!

ಮಂಗಳೂರು: ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದ ಶಾಲಾ ಮಕ್ಕಳು ಶೈಕ್ಷಣಿಕವಾಗಿ ದೂರವಾಗಿದ್ದಾರೆ. ಮಕ್ಕಳು ಇರುವಲ್ಲಿಯೇ ಗಣಿತ ವಿಷಯಗಳನ್ನು ಬೋಧಿಸುವ ನೂತನ ಪರಿಕಲ್ಪನೆಯುಳ್ಳ ಪರಿಕರಗಳನ್ನು ನೀಡುವ ಮೂಲಕ ಮನೆಯಲ್ಲೇ ಮಾಡೋಣ ಲೆಕ್ಕ ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನವನ್ನು ಕರ್ನಾಟಕ ರಾಜ್ಯದಲ್ಲೆಡೆ ಮಾಡಲಾಗುತ್ತಿದೆ ಎಂದು ಅಕ್ಷರ ಫೌಂಡೇಶನ್ ನ ಜಿಲ್ಲಾ ಸಮನ್ವಯಧಿಕಾರಿ ನವೀನ್ ಹೇಳಿದರು. ಅವರು ಇತ್ತೀಚೆಗೆ ತಾಲೂಕಿನ ಸರಕಾರಿ ಮಕ್ಕಳಿಗೆ ಶೈಕ್ಷಣಿಕ ಕಲಿಕೆಗೆ ಸಹಕರಿಸುತ್ತಿರುವ ಗ್ರಾಮಪಂಚಯತ್ ಶೈಕ್ಷಣಿಕ ತಂಡದನಾಯಕರ, ಸ್ವಯಂ ಸೇವಕರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಎನ್ 95 ಮಾಸ್ಕ್ ವಿತರಣೆ ಮಾಡಿ ಮಾತನಾಡಿದರು.

ಮಂಗಳೂರು: ವಿವಿ ಕಾಲೇಜಿನ ಇನ್ನೊವೇಷನ್ ಕ್ಲಬ್ ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ

ನಿಮ್ಮ ಊರಿನ, ಸ್ಥಳೀಯ ಸುದ್ದಿಗಳನ್ನು ಸುದ್ದಿವಾಣಿಯಲ್ಲಿ ಪ್ರಕಟಿಸಲಾಗುವುದು. ಆದ ಜನ ಸ್ನೇಹಿ ಕಾರ್ಯಕ್ರಮಗಳ ವರದಿಯನ್ನು suddivani20@gmail.com ಗೆ mail ಮಾಡಿ

ಶಿಕ್ಷಣ ಇಲಾಖೆ, ಅಕ್ಷರ ಫೌಂಡೇಶನ್ ನ‌ ಸಹಯೋಗದೊಂದಿಗೆ ರಾಜ್ಯಾದ್ಯಂತ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವು ನಡೆಯುತ್ತಿದೆ‌. ಇದರಡಿಯಲ್ಲಿ ಸರಕಾರಿ ಶಾಲೆಯ 4 ಮತ್ತು 5 ನೇ ತರಗತಿಯ ಮಕ್ಕಳಿಗೆ ಗಣಿತ ವಿಷಯವನ್ನು ಸುಲಭವಾಗಿ ಕಲಿಸುವ ಉದ್ದೇಶದಿಂದ ಎಲ್ಲಾ ಶಾಲೆಗಳಿಗೆ ಗಣಿತದ ಕಿಟ್ ಗಳನ್ನು ನೀಡಲಾಗಿದೆ. ಇದರಲ್ಲಿ 22 ರೀತಿಯ ಕಲಿಕೋಪಕರಣಗಳಾದ ಸಂಕಲನ , ವ್ಯವಕಲನ, ಗುಣಾಕಾರ, ಭಾಗಕಾರ ಕಲಿಯಲು ಹೆಚ್ಚು ಅನುಕೂಲವಾಗುತ್ತದೆ. ಇದನ್ನು ಬಳಸುವ ರಿಗೆ ಈಗಾಗಲೇ ತರಬೇತಿ ನೀಡಲಾಗಿರುತ್ತದೆ. ಪ್ರಸ್ತುತ ಕೋರನ ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಯಂ ಸೇವಕರಿಗೆ ಎನ್ 95 ಮಾಸ್ಕ್ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕಾರ್ಯಕ್ರಮದಲ್ಲಿ ಪಂಜ ಕೊಯಿಕುಡೆ ನವಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷ ರಾದ ಶ್ರೀಮತಿ ಶೈಲಜಾ ಎನ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿ, ಸಹಕಾರಕ್ಕೆ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಾಯಕರಾದ ಕುಶಲಾ ಶೇಖರ, ತಾರಾ , ಅಮಿತ , ಮಂಡಲಿಯ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here