ಅಜರಾಮರ ದಿವ್ಯಚೇತನ

0
153
Tap to know MORE!

ಹುಟ್ಟಿದ್ದು ಆಂಧ್ರವಾದರೂ ಕೊನೆಯವರೆಗೂ ಗಾಯನದ ತನುಮನ ಮಿಡಿದಿದ್ದು ಕನ್ನಡಕ್ಕಾಗಿ

ಪ್ರಶಸ್ತಿ ಮಾಲೆಗಳ ಕನ್ನಡದ ಕಣ್ಮಣಿ
ಸಂಗೀತ ರಸಿಕರೆಲ್ಲರೂ ತಮಗಿದೋ ಚಿರಋಣಿ

ಒಂದೇ ದಿನ 21 ಕನ್ನಡ ಹಾಡು ರೆಕಾರ್ಡಿಂಗ್
ಗಾಯನ ಲೋಕಕ್ಕೆ ಇವರೇ ಕಿಂಗ್

ಪ್ರತಿಭೆಗಳ ಬೆಳೆಸುವಲ್ಲಿ ನಮಗೆಲ್ಲ ಶಿಕ್ಷಕ
ಗಾಯನದ ಮೇರು ಸಾಧಕ ,ಹಿನ್ನೆಲೆ ಗಾಯಕ

40 ಸಾವಿರಕ್ಕೂ ಅಧಿಕ ಹಾಡು ಹಾಡಿ ಗಿನ್ನಿಸ್ ದಾಖಲೆ
ಹಾಡದ ಶೈಲಿ ಇಲ್ಲ ,ಸಾಧಕನಿಗೆ ಪ್ರಶಸ್ತಿಗಳ ಸರಮಾಲೆ

ಜನಪ್ರಿಯತೆ ಉತ್ತುಂಗಕ್ಕೇರಿದ್ದರು ನೆಲದ ಸ್ಪರ್ಶ ಮರೆತವರಲ್ಲ
ಅಹಂ ಅವರ ಸಮೀಪವೂ ಸುಳಿದಿರಲಿಲ್ಲ

16 ಭಾರತೀಯ ಭಾಷೆಗಳಲ್ಲಿ ಹಾಡಿದ ಸರದಾರ
ಆರು ಬಾರಿ ರಾಷ್ಟ್ರಪ್ರಶಸ್ತಿ, ಪದ್ಮಭೂಷಣ ,ಪದ್ಮಶ್ರೀ ಭಾಜನ ಕಾರ

ಇಹಲೋಕ ತ್ಯಜಿಸಿದ ಎಸ್‌ಪಿಬಿ ಅವರ
ಹಾಡುಗಳು ಎಂದೆಂದೂ ಅಮರ ಅಜರಾಮರ

ರಚನೆ: ಶ್ರೀಮತಿ ರೇಖಾ ಸುದೇಶ್ ರಾವ್

LEAVE A REPLY

Please enter your comment!
Please enter your name here