ಸಣ್ಣಪುಟ್ಟ ಜಗಳ, ಸಿಕ್ಕಾಪಟ್ಟೆ ಪ್ರೀತಿ – ಇದು ಅಣ್ಣ ತಂಗಿ ಸಂಬಂಧದ ಸಾರ!

0
262
Tap to know MORE!

ಅಣ್ಣ ತಂಗಿ, ಅಕ್ಕ-ತಮ್ಮ ಇದ್ದರೆ ಸಂತೋಷವೊ ಸಂತೋಷ. ಪ್ರತೀ ನಿತ್ಯ ಜಗಳ, ಕಿತ್ತಾಟ ಪ್ರೀತಿ ತಪ್ಪಿದಲ್ಲ. ಅಣ್ಣನ ಪ್ರೀತಿಯನ್ನು ಕಂಡವರಿಗೆ ಅದರ ಮಹತ್ವ ತಿಳಿದಿರುತ್ತದೆ. ಆದರೆ ಅಣ್ಣ ಇಲ್ಲದವರಿಗೆ ಸಂಬಂಧಗಳ ಮಹತ್ವ ಇನ್ನೂ ಜಾಸ್ತಿನೇ ತಿಳಿದಿರುತ್ತದೆ. ಈ ಅಣ್ಣಂದಿರು ಯಾವತಿದ್ರೂ ಸ್ಪೆಷಲ್. ತನ್ನ ತಂಗಿಯನ್ನು ಮಗಳಂತೆ ಕಾಯುತ್ತಾನೆ, ಗೌರವಿಸುತ್ತಾನೆ, ಜಗಳವಾಡುತ್ತಾನೆ. ಹಾಗೆಯೇ, ತಂಗಿಗೆ ತನ್ನ ಅಣ್ಣನೇ ಜೀವ.

ಮನೆಯಲ್ಲಿ ಸಣ್ಣ ವಿಷಯಕ್ಕೂ ದೊಡ್ಡ ಜಗಳ ಮಾಡುವ ತಂಗಿ. ತಾನು ಎಷ್ಟೇ ಮೊಬೈಲ್ ಬಳಸಿದರೆ ಪರವಾಗಿಲ್ಲ; ಆದರೆ ತಂಗಿ ಮಿತಿ ಮೀರಿ ಬಳಸಿದರೆ ಬೈಯುವ ಅಣ್ಣ. ಹೀಗೆ ಸಣ್ಣ ಕೋಪ, ಸಿಕ್ಕಾಪಟ್ಟೆ ಪ್ರೀತಿ. ಇವರುಗಳ ನಡುವೆ ಖುಷಿಪಡುವ ತಂದೆ ತಾಯಿ.

ಇನ್ನು ಮುಂದೆ ಇಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡದಲ್ಲಿಯೂ ಪಡೆಯಬಹುದು!

ತನ್ನ ತಂಗಿ ಬಗ್ಗೆ ಕೆಟ್ಟದಾಗಿ ಯಾರಾದರು ಮಾತನಾಡಿದರೆ ಅಣ್ಣನಾದವನು ಯಾವತ್ತು ಸಹಿಸುವುದಿಲ್ಲ. ಮನೆಯಲ್ಲಿ ತಂಗಿ ಎಷ್ಟೇ ಜಗಳವಾಡಿದರೂ ತನ್ನ ಸ್ನೇಹಿತರ ಜತೆ ತನ್ನ ಅಣ್ಣ ಬಗ್ಗೆ ಹೊಗಳುವ ತಂಗಿ, ಹಾಗೆಯೇ ಅಣ್ಣ ಎಷ್ಟೇ ಜಗಳವಾಡಿದರು ಕೊನೆಗೆ ತಂಗಿಯ ಮುಂದೆ ಸೋಲುತ್ತಾನೆ. ಇದೇ ಅಣ್ಣ ತಂಗಿಯ ಪ್ರೀತಿ.

ತಂಗಿಯಾದವಳಿಗೆ ಗೆಳತಿಯರ ಮುಂದೆ ಅಣ್ಣನ ಬೈಕ್ ಮುಂದೆ ಓಡಾಡುವುದೆಂದರೆ ಏನೋ ಒಂಥರಾ ಖುಷಿ. ಸಿನೆಮಾಗಳಲ್ಲಿ ಇಬ್ಬರು ಪ್ರೇಮಿಗಳ ನಡುವೆ ಹುಡುಗಿಯ ಅಣ್ಣನೇ ವಿಲನ್ ಆಗಿರುತ್ತಾನೆ. ಅದೇ ರೀತಿ ಹುಡುಗಿಗೆ ಅಣ್ಣ ಇದ್ದಾನೆಂದು ತಿಳಿದರೆ ಆ ಹುಡುಗಿಯ ತಂಟೆಗೆ ಯಾರು ಬರುವುದಿಲ್ಲ. ಇದೇ ಒಬ್ಬ ಅಣ್ಣನಿಂದ ತಂಗಿಗೆ ಸಿಗುವ ಶ್ರೀರಕ್ಷೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅಣ್ಣ ತಂಗಿ ರಕ್ಷಣೆಯ ಪ್ರತೀಕವೇ ರಕ್ಷಾ ಬಂಧನ ದಿನ.ಅದೇ ರೀತಿ ಅಣ್ಣ ತಂಗಿ ಪ್ರೀತಿಯನ್ನು ಪ್ರತಿಬಿಂಬಿಸುವ ಹಲವಾರು ಸಿನೆಮಾಗಳಿವೆ ಅದರಲ್ಲೂ ಅಣ್ಣ-ತಂಗಿ, ದೇವರು ಕೊಟ್ಟ ತಂಗಿ, ತವರಿಗೆ ಬಾ ತಂಗಿ ಹೀಗೆ ಹಲವಾರು ಐತಿಹಾಸಿಕ ಕತೆಗಳಿವೆ. ತಂಗಿಗೆ ಇಷ್ಟ ಪಟ್ಟ ವಸ್ತುವನ್ನು ತಂದು ಕೊಟ್ಟು ಖುಷಿ ಪಡಿಸುವ ಅಣ್ಣಂದಿರೂ ಇದ್ದಾರೆ.

ಅಣ್ಣನೆಂಬ ದೇವರು ಎಲ್ಲರ ಬದುಕಲ್ಲಿ ಇರುವುದಿಲ್ಲ ತಂಗಿಯೆಂಬ ದೇವತೆಯೂ ಎಲ್ಲರಿಗೂ ಸಿಗುವುದಿಲ್ಲ. ಇಬ್ಬರು ಸಿಗಬೇಕಿದ್ದರೆ ಅದೃಷ್ಟವಿರಬೇಕು, ಹೀಗಾಗಿ ಮುದ್ದು ಅಣ್ಣಂದಿರೇ ಮುದ್ದು ತಂಗಿಯಂದಿರೇ ನಿಮ್ಮ ಅಣ್ಣನನ್ನು ಪ್ರೀತಿಸಿ, ತಂಗಿಯನ್ನು ಗೌರವಿಸಿ.

ಪವಿತ್ರ
ಆಳ್ವಾಸ್ ಕಾಲೇಜು ಮೂಡಬಿದ್ರಿ

LEAVE A REPLY

Please enter your comment!
Please enter your name here