ಯುವತಿಯ ಚಿಕಿತ್ಸೆಗೆ ಹಣ ನೀಡುತ್ತೇವೆ ಎಂದು ನಂಬಿಸಿ ಅತ್ಯಾಚಾರವೆಸಗಿದ ಕಾಮುಕರು!

0
203
Tap to know MORE!

ಹೈದರಾಬಾದ್: ಯುವತಿಯೋರ್ವಳು ತನ್ನ ಸಹೋದರಿಗೆ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟವಾದಾಗ, ಯುವಕರ ಗುಂಪೊಂದು ಸಹಾಯ ಮಾಡಲು ಮುಂದಾದರು. ಹಣವನ್ನು ಹೊಂದಿಸಿ, ಬಳಿಕ ಯುವತಿಯ ಅತ್ಯಾಚಾರ ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಯುವತಿಯು ತನ್ನ ಸಹೋದರಿಯ ಚಿಕಿತ್ಸೆಗೆ ನಿಜಾಮಾಬಾದ್‌ಗೆ ಬಂದಿದ್ದಳು. ಆದರೆ ಶೀಘ್ರವಾಗಿ ಹಣ ಹೊಂದಿಸಲು ಕಷ್ಟವಾಗುತ್ತದೆ. ಈ ಸಮಯದಲ್ಲಿ ಹಣದ ಸಹಾಯ ಮಾಡಲು ಯುವಕರ ಗುಂಪೊಂದು ಒಪ್ಪಿತು. ಹೇಳಿದಂತೆಯೇ, ಹಣವನ್ನು ಕೊಟ್ಟ ಅವರು, ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. 26 ವರ್ಷದ ಯುವತಿ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಆರು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ನೋಡಿ : ತನ್ನ ಸ್ವಂತ ಮಗಳನ್ನೇ ಕೊಲೆ ಮಾಡಿದ ಅಪ್ಪ

ಮಂಗಳವಾರ ಮುಂಜಾನೆ 1.30ರ ಸುಮಾರಿಗೆ ಪೊಲೀಸರ ಗಸ್ತು ತಂಡ ಆ ಗುಂಪನ್ನು ಗುರುತಿಸಿದ ವೇಳೆ ಪೊಲೀಸರನ್ನು ನೋಡಿದ ಕಾಮುಕರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರನ್ನು ಬಂಧಿಸಿ, ಇಬ್ಬರು ಅಪ್ರಾಪ್ತ ಬಾಲಕರನ್ನು ಬಾಲಾಪರಾಧಿ ಸೆಲ್​ಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here