ಮಂಗಳೂರು: ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿಟ್ಟು ತುಳುವರಿಗೆ ಅವಮಾನ | ಕಾಂಗ್ರೆಸಿನಿಂದ ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ

0
126
Tap to know MORE!

ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಗುತ್ತಿಗೆ ನೀಡಿರುವ ಕೇಂದ್ರ ಸರಕಾರ, ನಿಲ್ದಾಣಕ್ಕೆ ಗೌತಮ್ ಅದಾನಿ ಹೆಸರಿಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನ ಮಾಡಿದೆ ಎಂದು ದ.ಕ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅದಾನಿ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಲು ಆಗ್ರಹಿಸಿ ಈಗಾಗಲೇ ಕಾಂಗ್ರೆಸ್ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದೆ. ನ.18ರಂದು ಸಂಜೆ ನಗರದ ಸರ್ಕ್ಯೂಟ್ ಹೌಸ್‌ನಿಂದ ವಿಮಾನ ನಿಲ್ದಾಣದ ವರೆಗೆ ಪಂಜಿನ ಮೆರವಣಿಗೆಯೊಂದಿಗೆ ಪ್ರತಿಭಟನಾ ಪ್ರದರ್ಶನ ನಡೆಸಲಾಗುವುದು. ಇದಕ್ಕೆ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಿಥುನ್ ರೈ ಎಚ್ಚರಿಸಿದರು.

ಇದನ್ನೂ ಓದಿ: ಕಾಂಗ್ರೆಸ್‌ ಪಕ್ಷದ ಕಪಟ ನಾಟಕ ಜನರಿಗೆ ಅರಿವಾಗಿದೆ : ನಳಿನ್ ಕುಮಾರ್

ಬೆಂಗಳೂರು, ಮುಂಬಯಿ ಹಾಗೂ ಗುಜರಾತ್ ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪೆನಿಗೆ ನೀಡಿದ್ದರೂ ಅವುಗಳ ಹೆಸರು ಬದಲಾವಣೆ ಮಾಡಿಲ್ಲ. ಆದರೆ ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಕೂಡ ಅದಾನಿಗೆ ಒಪ್ಪಿಸಿದ್ದು ಯಾಕೆ ಎಂಬುದರ ಬಗ್ಗೆ ಇಲ್ಲಿನ ಸಂಸದರು ಬಾಯಿ ತೆರೆದು ಸೂಕ್ತ ಹೆಸರಿಡಲು ಶಿಫಾರಸು ಮಾಡಬೇಕು. ವಿಮಾನ ನಿಲ್ದಾಣದಲ್ಲಿ ಅದಾನಿ ಕಂಪೆನಿಯ ಆನೆಯ ಚಿಹ್ನೆ ತೆರವುಗೊಳಿಸಿ, ಈ ನಾಡಿನ ಅಸ್ಮಿತೆಯ ಪ್ರತೀಕವಾಗಿರುವ ಈ ಹಿಂದೆ ಇದ್ದ ಹುಲಿ ಕುಣಿತದ ಚಿಹ್ನೆಯನ್ನು ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಶ್ರೀನಿವಾಸ ಮಲ್ಯರ ಪ್ರಯತ್ನದ ಫಲವಾಗಿ ದ.ಕ. ಜಿಲ್ಲೆಗೆ ಲಭಿಸಿರುವ ವಿಮಾನ ನಿಲ್ದಾಣಕ್ಕೆ ಯಾವ ಕೊಡುಗೆಯನ್ನು ನೀಡದ ಅದಾನಿಯ ಹೆಸರನ್ನು ಇಟ್ಟಿರುವುದು ಜಿಲ್ಲೆಯ ಜನರಿಗೆ ಮಾಡುತ್ತಿರುವ ಅಪಮಾನ. ಅಲ್ಲದೆ ನಾಚಿಗೇಡಿನ ಸಂಗತಿ. ತುಳುನಾಡಿನ ಇತಿಹಾಸವನ್ನು ಮರೆಸುವ ಕೆಲಸ ಮಾಡಲಾಗುತ್ತಿದೆ. ಇತಿಹಾಸ ಪುರುಷರ ಹೆಸರಿಡಬೇಕಲ್ಲದೆ ಕಂಪನಿ ಧಣಿಯ ಹೆಸರಿಡುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here