ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಇದೆ ಇಂದು(ಅ.31) ಅದಾನಿ ಸಂಸ್ಥೆಗೆ ಹಸ್ತಾಂತರಿಸುತ್ತಿದೆ. 50 ವರ್ಷಗಳ ಒಪ್ಪಂದ ಇದಾಗಿದೆ.
ವಿಮಾನ ನಿಲ್ದಾಣಗಳ ನಿರ್ವಹಣೆ, ಟರ್ಮಿನಲ್ಗಳ ಅಭಿವೃದ್ಧಿ, ಗ್ರಾಹಕ ಸ್ನೇಹಿ ಯೋಜನೆಗಳು ಮೊದಲಾದ ಜವಾಬ್ದಾರಿಗಳನ್ನು ಖಾಸಗಿ ಕಂಪನಿ ನಿರ್ವಹಿಸಬೇಕಿದೆ. ಆದರೆ ತಾಂತ್ರಿಕ ನಿರ್ವಹಣೆಯನ್ನು ಮಾತ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ನಿರ್ವಹಿಸಲಿದೆ.
ಅದಾನಿ ಸಂಸ್ಥೆಯ ನಿರ್ವಹಣೆ ಮೇಲೆ ಸ್ಥಳೀಯರು ಹಾಗು ವಿಮಾನ ನಿಲ್ದಾಣದ ಬಳೆಕೆದಾರರು, ಪ್ರಯಾಣಿಕರಿಂದ ನಿಲ್ದಾಣದ ಅಭಿವೃದ್ಧಿಯ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.