ಮೈಸೂರು: ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ‘ಸೋಜುಗಾದ ಸೂಜಿಮಲ್ಲಿಗೆ’ ಮೂಲಕ ಮನೆಮಾತದ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ ಭಟ್(52) ಬಂಧನವಾಗಿದೆ.
ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಕೇಸ್ನಲ್ಲಿ ವಿಶ್ವನಾಥ ಭಟ್ ಅರೆಸ್ಟ್ ಆಗಿದ್ದಾರೆ.
ಪರಶಿವಮೂರ್ತಿರನ್ನು ಕೊಲೆಮಾಡಲು ವಿಶ್ವನಾಥ ಭಟ್ 7 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು ಎಂದು ಹೇಳಲಾಗಿದೆ. ಪರಶಿವಮೂರ್ತಿಯನ್ನು ಕೊಲೆಮಾಡಲು ವಿಶ್ವನಾಥ್ ಭಟ್ ಇಬ್ಬರ ಸಹಾಯ ಪಡೆದಿದ್ದರು. ವಿಶ್ವನಾಥ್ ಭಟ್ಗೆ ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಸಾಥ್ ಕೊಟ್ಟಿದ್ದರು ಎಂದು ಸಹ ತಿಳಿದುಬಂದಿದೆ.
ನಿರಂಜನ್ ಮತ್ತು ನಾಗೇಶ್ ಸುಪಾರಿ ಪಡೆದು ಕಾರ್ಯದರ್ಶಿಯ ಕೊಲೆ ಮಾಡಿದ್ದರು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಗೆ ಪರಶಿವಮೂರ್ತಿಯ ಟಾರ್ಚರ್ ಕಾರಣ
ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ಕೊಲೆಯಾದ ಪರಶಿವಮೂರ್ತಿ ಪ್ರತಿ ತಿಂಗಳು ಕಮಿಷನ್ಗಾಗಿ ವಿಶ್ವನಾಥ ಭಟ್ರನ್ನು ಪೀಡಿಸುತ್ತಿದ್ದರು ಎಂದು ಹೇಳಲಾಗಿದೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ಸಹ ನೀಡುತ್ತಿದ್ದರಂತೆ. ಇದರಿಂದ ಮನನೊಂದು ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್ ರವರು ಕೊಲೆಗೆ ಸುಪಾರಿ ನೀಡಿದರು ಎಂದು ತಿಳಿದುಬಂದಿದೆ.
ಎರಡು ವರ್ಷಗಳಿಂದ ಅನನ್ಯ ಭಟ್ ಮತ್ತು ತಾಯಿಯನ್ನು ಬಿಟ್ಟು ವಿಶ್ವನಾಥ್ ಭಟ್ ಬೇರೆ ಕಡೆ ವಾಸವಿದ್ದರೆ ಎಂದು ತಿಳಿದುಬಂದಿದೆ.