ಅನ್ಲಾಕ್ 3 : ರಾಜ್ಯದಲ್ಲಿ ಇರಲ್ಲ “ಸಂಡೇ ಲಾಕ್ಡೌನ್” ; “ನೈಟ್ ಕರ್ಫ್ಯೂ”

0
167
Tap to know MORE!

ಬೆಂಗಳೂರು : ಜುಲೈ 5 ರಿಂದ ರಾಜ್ಯಾದ್ಯಂತ ಜಾರಿಯಲ್ಲಿದ್ದ “ಸಂಡೇ ಲಾಕ್ಡೌನ್” ಮುಂದಿನ ಭಾನುವಾರ (ಆಗಸ್ಟ್ 2) ರಿಂದ ರಾಜ್ಯದಲ್ಲೆಲ್ಲೂ ಜಾರಿಯಲ್ಲಿರುವುದಿಲ್ಲ ಎಂದು ಕರ್ನಾಟಕ ಸರ್ಕಾರ ಗುರುವಾರ ಹೇಳಿದೆ. ಕೇಂದ್ರವು ಪ್ರಕಟಿಸಿರುವ ಮಾನದಂಡಗಳಿಗೆ ಅನುಗುಣವಾಗಿ, ರಾಜ್ಯ ಸರ್ಕಾರವು ಅನ್‌ಲಾಕ್ 3.0 ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅಲ್ಲದೆ, ರಾತ್ರಿ 9 ಘಂಟೆಯಿಂದ ಬೆಳಗ್ಗೆ 5 ರವರೆಗೆ ಜಾರಿಯಲ್ಲಿದ್ದ “ನೈಟ್ ಕರ್ಫ್ಯೂ” ವನ್ನೂ ಸಹ ಅಂತ್ಯಗೊಳಿಸಲಾಗಿದೆ. ರಾತ್ರಿಯ ಸಮಯದಲ್ಲಿ ವ್ಯಕ್ತಿಗಳ ಚಲನೆಯ ಮೇಲಿನ ಹೇರಿದ ನಿರ್ಬಂಧಗಳನ್ನು ಅನ್ಲಾಕ್ 3.0 ಅಡಿಯಲ್ಲಿ ತೆಗೆದುಹಾಕಲಾಗಿದೆ.

 
ಉಳಿದಂತೆ ಎಲ್ಲವೂ ಕೇಂದ್ರದ ಮಾರ್ಗಸೂಚಿಗಳನ್ನೇ ರಾಜ್ಯದಲ್ಲೂ ಜಾರಿಗೆ ಗೊಳಿಸಲಾಗಿದೆ. ಆಗಸ್ಟ್ 5 ರಿಂದ ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಮಾರ್ಚ್ ತಿಂಗಳಲ್ಲಿ ರಾಷ್ಟ್ರಾದ್ಯಂತ ಜಾರಿಯಾದ ಲಾಕ್ಡೌನ್ ನಿಂದ ಹಿಡಿದು ಇದುವರೆಗೆ ಜಿಮ್ ಗಳು ಬಾಗಿಲು ಹಾಕಿತ್ತು!

ಹೊಸ ಮಾರ್ಗಸೂಚಿಗಳು ಆಗಸ್ಟ್ 1 ರಿಂದ ಜಾರಿಗೆ ಬರಲಿದ್ದು, ಕಂಟೈನ್‌ಮೆಂಟ್ ವಲಯಗಳಲ್ಲಿ ಆಗಸ್ಟ್ 31 ರವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್ ಮುಂದುವರಿಯುತ್ತದೆ.

ಶಾಲಾ ಕಾಲೇಜುಗಳು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು ಆಗಸ್ಟ್ 31 ರವರೆಗೆ ಮುಚ್ಚಲ್ಪಡುತ್ತವೆ. ಆದಾಗ್ಯೂ, ಆನ್‌ಲೈನ್ ಅಥವಾ ದೂರಶಿಕ್ಷಣಕ್ಕೆ ಅನುಮತಿಯನ್ನು ಮುಂದುವರಿಸಲಾಗುವುದು ಮತ್ತು ಪ್ರೋತ್ಸಾಹಿಸಲಾಗುವುದು.

ಇತರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಮತ್ತು ಅನ್ಲಾಕ್ 3ರ ಅಧಿಕೃತ ಪ್ರಕಟಣೆಯನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here