ಅನ್ಲಾಕ್ 4 : ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಗೃಹ ಸಚಿವಾಲಯ

0
280
Tap to know MORE!

ನವದೆಹಲಿ: ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಗೃಹ ಸಚಿವಾಲಯವು (ಎಂಎಚ್‌ಎ) ಇಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸೆಪ್ಟೆಂಬರ್ 1 ರಿಂದ ಈ ಮಾರ್ಗಸೂಚಿಗಳು ಜಾರಿಗೆ ಬರಲಿದೆ. ಹಂತಹಂತವಾಗಿ ಚಟುವಟಿಕೆಗಳನ್ನು ಪುನಃ ತೆರೆಯುವ ಪ್ರಕ್ರಿಯೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಇಂದು ಹೊರಡಿಸಲಾದ ಹೊಸ ಮಾರ್ಗಸೂಚಿಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಪ್ರತಿಕ್ರಿಯೆ ಮತ್ತು ಸಂಬಂಧಿತ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ಆಧರಿಸಿವೆ.

ಹೊಸ ಮಾರ್ಗಸೂಚಿಗಳ ಪ್ರಮುಖ ಅಂಶಗಳು ಇಲ್ಲಿವೆ:

  • ಮೆಟ್ರೊ ರೈಲುಗಳಿಗೆ 2020 ರ ಸೆಪ್ಟೆಂಬರ್ 7 ರಿಂದ ಗೃಹ ಸಚಿವಾಲಯದೊಂದಿಗೆ ಸಮಾಲೋಚಿಸಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಸಚಿವಾಲಯವು ಹೊರಡಿಸುತ್ತದೆ.
  • ಸಾಮಾಜಿಕ / ಶೈಕ್ಷಣಿಕ / ಕ್ರೀಡೆ / ಮನರಂಜನೆ / ಸಾಂಸ್ಕೃತಿಕ / ಧಾರ್ಮಿಕ / ರಾಜಕೀಯ ಚಟುವಟಿಕೆಗಳು ಮತ್ತು ಇತರ ಸಭೆಗಳಿಗೆ ಗರಿಷ್ಟ 100 ವ್ಯಕ್ತಿಗಳು ಸೇರಲು ಅನುಮತಿ ನೀಡಲಾಗುವುದು. ಇದು ಸೆಪ್ಟೆಂಬರ್ 21, 2020 ರಿಂದ ಜಾರಿಗೆ ಬರಲಿದೆ. ಹೀಗಿದ್ದರೂ, ಕಡ್ಡಾಯವಾಗಿ ಮುಖಗವಚಗಳನ್ನು (ಮಾಸ್ಕ್) ಧರಿಸಿಬೇಕು. ಸಾಮಾಜಿಕ ಅಂತರ, ಥರ್ಮಲ್ ಸ್ಕ್ಯಾನಿಂಗ್ ಮತ್ತು ಹ್ಯಾಂಡ್ ಸ್ಯಾನಿಟೈಜರ್ ಗಳ ಬಳಕೆ ಕಡ್ಡಾಯ.
  • ಸೆಪ್ಟೆಂಬರ್ 21, 2020 ರಿಂದ ತೆರೆದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿಸಲಾಗುವುದು. (Open air theatre)
  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆಸಿದ ವ್ಯಾಪಕವಾದ ಸಮಾಲೋಚನೆಯ ನಂತರ, ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು ಸೆಪ್ಟೆಂಬರ್ 30, 2020 ರವರೆಗೆ ವಿದ್ಯಾರ್ಥಿಗಳಿಗೆ ಮತ್ತು ಯಾವುದೇ ಚಟುವಟಿಕೆಗಳಿಗೆ ಮುಚ್ಚಿರಬೇಕು ಎಂದು ನಿರ್ಧರಿಸಲಾಗಿದೆ. ಆನ್‌ಲೈನ್ / ದೂರ ಶಿಕ್ಷಣಕ್ಕೆ ಅನುಮತಿ ನೀಡಲಾಗುವುದು ಮತ್ತು ಪ್ರೋತ್ಸಾಹಿಸಲಾಗಿದೆ.

ಹೀಗಿದ್ದರೂ, ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ, ಸೆಪ್ಟೆಂಬರ್ 21, 2020 ರಿಂದ ಈ ಕೆಳಗಿನವುಗಳನ್ನು ಜಾರಿಗೆ ಬರಲು ಅನುಮತಿಸಲಾಗುವುದು. ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿಗಳನ್ನು ನೀಡಲಾಗುತ್ತದೆ:

  • ಆನ್‌ಲೈನ್ ಬೋಧನೆ / ಟೆಲಿ-ಕೌನ್ಸೆಲಿಂಗ್ ಮತ್ತು ಸಂಬಂಧಿತ ಕೆಲಸಗಳಿಗಾಗಿ ಶಾಲೆಗಳಲ್ಲಿ ಶೇ.50% ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಅನುಮತಿಸಬಹುದು.
  • 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಗಳಿಗೆ ತೆರಳಿ, ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ, ಸ್ವಯಂಪ್ರೇರಿತ ಆಧಾರದ ಮೇಲೆ, ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಅನುಮತಿ ನೀಡಬಹುದು. ಇದು ಅವರ ಪೋಷಕರು / ಪಾಲಕರ ಲಿಖಿತ ಒಪ್ಪಿಗೆಗೆ ಒಳಪಟ್ಟಿರುತ್ತದೆ.
  • ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್ ಅಥವಾ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರಗಳ ಇತರ ಸಚಿವಾಲಯಗಳಲ್ಲಿ ನೋಂದಾಯಿತ ಅಲ್ಪಾವಧಿಯ ತರಬೇತಿ ಕೇಂದ್ರಗಳಲ್ಲಿ ಕೌಶಲ್ಯ ಅಥವಾ ಉದ್ಯಮಶೀಲತೆ ತರಬೇತಿಗೆ ಅನುಮತಿಸಲಾಗುವುದು.

ಇದಕ್ಕೆ ಅನುಮತಿ ಇಲ್ಲ!

(i) ಸಿನೆಮಾ ಹಾಲ್‌ಗಳು, ಈಜುಕೊಳಗಳು, ಮನರಂಜನಾ ಉದ್ಯಾನಗಳು, ಚಿತ್ರಮಂದಿರಗಳು (ತೆರೆದ ಗಾಳಿ ರಂಗಮಂದಿರವನ್ನು ಹೊರತುಪಡಿಸಿ) ಮತ್ತು ಅಂತಹುದೇ ಸ್ಥಳಗಳು.

(¡¡) ಶಾಲಾ – ಕಾಲೇಜುಗಳು ಮತ್ತಿತರ ಶೈಕ್ಷಣಿಕ ಸಂಸ್ಥೆಗಳು

(iii) ಗೃಹ ಸಚಿವಾಲಯದ ಅನುಮತಿಯನ್ನು ಹೊರತುಪಡಿಸಿ, ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣ.

(iv) ದುರ್ಬಲ ವ್ಯಕ್ತಿಗಳು, ಅಂದರೆ, 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು,  ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ – ಅಗತ್ಯ ಅವಶ್ಯಕತೆಗಳಿಗೆ ಮತ್ತು ಆರೋಗ್ಯ ಸಂಬಂಧಿತ ಉದ್ದೇಶಗಳಿಗಾಗಿ ಹೊರತುಪಡಿಸಿ

ಕಂಟೈನ್‌ಮೆಂಟ್ ವಲಯಗಳಲ್ಲಿ ಲಾಕ್‌ಡೌನ್ ಅನ್ನು ಸೆಪ್ಟೆಂಬರ್ 30, 2020 ರವರೆಗೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು.

  • ಕೊರೋನಾ ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯುವ ಉದ್ದೇಶದಿಂದ, ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಪರಿಗಣಿಸಿ ಪರಿಷ್ಕೃತ ಕಂಟೇನ್ಮೆಂಟ್ ವಲಯಗಳನ್ನು ಜಿಲ್ಲಾಧಿಕಾರಿಗಳು ಸೂಕ್ಷ್ಮ ಮಟ್ಟದಲ್ಲಿ ಗುರುತಿಸುತ್ತಾರೆ. ಈ ವಲಯಗಳಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಮತ್ತು ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿಸಲಾಗುತ್ತದೆ.
  • ಕಂಟೈನ್‌ಮೆಂಟ್ ವಲಯಗಳಲ್ಲಿ, ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣವನ್ನು ಕಾಪಾಡಿಕೊಳ್ಳಬೇಕು ಮತ್ತು ಅಗತ್ಯ ಚಟುವಟಿಕೆಗಳನ್ನು ಮಾತ್ರ ಅನುಮತಿಸಲಾಗುತ್ತದೆ.
  • ಈ ಕಂಟೈನ್‌ಮೆಂಟ್ ವಲಯಗಳನ್ನು ಆಯಾ ಜಿಲ್ಲಾಧಿಕಾರಿಗಳ ವೆಬ್‌ಸೈಟ್‌ಗಳಲ್ಲಿ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಿಳಿಸಬೇಕು ಮತ್ತು ಈ ಮಾಹಿತಿಯನ್ನು ಗೃಹ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಕಂಟೈನ್‌ಮೆಂಟ್ ವಲಯಗಳ ಹೊರಗೆ ಯಾವುದೇ ಸ್ಥಳೀಯ ಲಾಕ್‌ಡೌನ್ ವಿಧಿಸಬಾರದು.

ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಪೂರ್ವ ಸಮಾಲೋಚನೆ ಮಾಡದೆ, ಕಂಟೈನ್‌ಮೆಂಟ್ ವಲಯಗಳ ಹೊರಗೆ ಯಾವುದೇ ಸ್ಥಳೀಯ ಲಾಕ್‌ಡೌನ್ (ರಾಜ್ಯ / ಜಿಲ್ಲೆ / ಉಪವಿಭಾಗ / ನಗರ / ಗ್ರಾಮ ಮಟ್ಟ) ವಿಧಿಸಬಾರದು.

ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿಲ್ಲ

ವ್ಯಕ್ತಿಗಳು ಮತ್ತು ಸರಕುಗಳ ಅಂತರ್-ರಾಜ್ಯ ಮತ್ತು ಅಂತರ-ರಾಜ್ಯ ಚಲನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಹ ಚಲನೆಗಳಿಗೆ ಪ್ರತ್ಯೇಕ ಅನುಮತಿ / ಅನುಮೋದನೆ / ಇ-ಪರ್ಮಿಟ್ ಅಗತ್ಯವಿಲ್ಲ.

LEAVE A REPLY

Please enter your comment!
Please enter your name here