ಅನ್ಲಾಕ್ 4 : ರಾಜ್ಯದಲ್ಲಿ ಹೊಸ ಮಾರ್ಗಸೂಚಿಗಳು ಜಾರಿ

0
200
Tap to know MORE!

ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವಾಲಯ ಅನ್‌ಲಾಕ್ – 4ರ ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೇ,  ರಾಜ್ಯ ಸರ್ಕಾರವೂ ಇಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿದ ಇತರೆ ಪ್ರದೇಶಗಳಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಏನಿರುತ್ತೆ-ಏನಿರಲ್ಲ?
● ಶಾಲೆ, ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸೆಪ್ಟಂಬರ್ 30ರವರೆಗೆ ತೆರೆಯುವಂತಿಲ್ಲ – ಶೇ.50 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಅನುಮತಿ
● ಆನ್‌ಲೈನ್, ದೂರಶಿಕ್ಷಣ ಕಲಿಕೆಗಳಿಗೆ ಅನುಮತಿ ಮುಂದುವರಿಯಲಿದೆ.
● ಸೆಪ್ಟೆಂಬರ್ 21 ರಿಂದ ಕೌಶಲ್ಯ ಮತ್ತು ಉದ್ಯೋಗ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲು ಅನುಮತಿ.
● ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಅಗತ್ಯವಿರುವ ತಾಂತ್ರಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳ ಸಂಶೋಧನಾ ವಿದ್ಯಾರ್ಥಿಗಳು(ಪಿಎಚ್‌ಡಿ) ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭೇಟಿ ನೀಡಲು ಉನ್ನತಶಿಕ್ಷಣ ಸಂಸ್ಥೆಗಳಲ್ಲಿ ಅನುಮತಿ
● ಸೆಪ್ಟಂಬರ್ 7 ರಿಂದ ನಮ್ಮ ಮೆಟ್ರೋ ರೈಲು ಸಂಚಾರ ಆರಂಭ
● ಸೆಪ್ಟೆಂಬರ್ 21 ರಿಂದ 9-12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ಕಂಟೈನ್‌ಮೆಂಟ್‌ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ ಸ್ವ-ಇಚ್ಛೆಯ ಆಧಾರದ ಮೇಲೆ ತಮ್ಮ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಬಹುದು. ಆದರೆ ಇದು ಅವರ ತಂದೆ ತಾಯಿಗಳ ಮತ್ತು ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ.
● ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಮಲ್ಟಿಫ್ಲೆಕ್ಸ್, ಮನರಂಜನಾ ಪಾರ್ಕ್‌ಗಳು ಕೂಡ ಬಂದ್ ಆಗಿರಲಿವೆ.
● ಸೆಪ್ಟೆಂಬರ್ 21 ರಿಂದ ಬಯಲು ಮಂದಿರಗಳನ್ನು ತೆರೆಯಲು ಅವಕಾಶ
● ಗರಿಷ್ಟ 100 ಜನರ ಪರಿಮಿತಿಗೆ ಒಳಪಟ್ಟು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ,ಶೈಕ್ಷಣಿಕ, ಧಾರ್ಮಿಕ ಮತ್ತಿತರ ಸಭೆ-ಸಮಾರಂಭಗಳಿಗೆ ಅವಕಾಶ
● ಅಂತರರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ
● ಅಂತರ ರಾಜ್ಯ – ಅಂತರ್‌ರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿಲ್ಲ
● 65 ವರ್ಷ ಮೇಲ್ಪಟ್ಟವರು, 10 ವರ್ಷಕ್ಕಿಂತ ಕೆಳಗಿನವರು, ಗರ್ಭಿಣಿಯರು ಇನ್ನಿತರ ದುರ್ಬಲ ವ್ಯಕ್ತಿಗಳು ಮನೆಯಲ್ಲಿಯೇ ಇರಲು ಸಲಹೆ.
● ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ಗಳು ಬಾಗಿಲು ತೆರೆಯಲಿವೆ. ಆಹಾರದ ಜೊತೆಗೆ ಮದ್ಯ ಕುಡಿಯಲು ಅವಕಾಶ.
ನಿರ್ಬಂಧಿತ ವಲಯಗಳಲ್ಲಿ ಸೆ.30 ರವರೆಗೆ ಲಾಕ್‌ಡೌನ್‌ ಮುಂದುವರಿಕೆ
● ಕೇಂದ್ರ ಸರ್ಕಾರದ ಜತೆ ಸಮಾಲೋಚನೆ ಮಾಡದೇ ಎಲ್ಲೂ ಲಾಕ್‌ಡೌನ್‌ ವಿಧಿಸುವಂತಿಲ್ಲ
● ಮನೆಯಿಂದ ಕೆಲಸ ಮಾಡುವ ಪದ್ಧತಿಯನ್ನು ಸಾಧ್ಯವಾದಷ್ಟು ಮುಂದುವರಿಸಬೇಕು
● ಕಚೇರಿ, ಕೆಲಸದ ಸ್ಥಳ, ಮಾರುಕಟ್ಟೆ, ಸಣ್ಣ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸವನ್ನು ಪಾಳಿಯ ಮೇಲೆ ಮಾಡಿಸಬೇಕು.

LEAVE A REPLY

Please enter your comment!
Please enter your name here