ಡ್ರಾಮಾ ಜೂನಿಯರ್ಸ್ ಖ್ಯಾತಿಯ ‘ಎಕ್ಸ್ಪ್ರೆಷನ್ ಕ್ವೀನ್’ ಅನ್ವಿಷಾ ವಾಮಂಜೂರು

0
221
Tap to know MORE!

‘ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು’ ಎಂಬಂತೆ ,ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕೀರ್ತಿಯನ್ನು ಗಳಿಸಿ ಎಲ್ಲರ ಮನದಲ್ಲಿ ತನಗೂ ಒಂದು ಪುಟ್ಟ ಸ್ಥಾನವನ್ನು ಗಳಿಸಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲೇ ಬಣ್ಣವನ್ನು ಹಚ್ಚಿ ಹೆಜ್ಜೆ ಹಾಕಿದ ಇವರು ನೃತ್ಯ ,ಯಕ್ಷಗಾನ, ನಟನೆ,ಯೋಗ,ನಿರೂಪಣೆ, ಸಂಗೀತ ಹೀಗೆ ಒಂದೇ ಗಿಡದಲ್ಲರಳಿದ ವಿವಿಧ ಹೂವುಗಳಂತೆ ಹಲವಾರು ಕಲೆಗಳ ಬೀಜವನ್ನು ತನ್ನಲ್ಲಿ ಬಿತ್ತಿ ಸಕಲಕಲಾವಲ್ಲಭೆ ಎಂದೆನಿಸಿಕೊಂಡಿದ್ದಾರೆ. ಅವರೇ ಅನ್ವಿಷಾ ವಾಮಂಜೂರು.

ಇವರು ಜ಼ೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಡ್ರಾಮಾ ಜೂನಿಯರ್ಸ್’ ಹಾಗೂ ‘ಡಾನ್ಸ್ ಕರ್ನಾಟಕ ಡಾನ್ಸ್’ ಶೋನಲ್ಲಿ ಖ್ಯಾತಿ ಪಡೆದಿರುವರು. ಕನ್ನಡ,ತೆಲುಗು, ಇಂಗ್ಲಿಷ್,ತುಳು ಹೀಗೆ ಬಹುಭಾಷೆಗಳನ್ನು ತಿಳಿದಿರುವ ಇವರು ‘ಎಕ್ಸ್ಪ್ರೆಷನ್ ಕ್ವೀನ್’ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಸದಾ ಮುಗುಳ್ನಗೆಯಲ್ಲಿರುವ ಮುಗ್ಧ ಮನಸ್ಸಿನ ಅನ್ವಿಷಾ, ಅನಿಲ್ ಕುಮಾರ್ ಮತ್ತು ಅನುಷಾ ಎಂಬ ದಂಪತಿಗೆ ೨೦೧೧ ರಲ್ಲಿ ಜನಿಸಿದರು. ಇವರು ಪ್ರಸ್ತುತ ಶುಭೋದಯ ವಿದ್ಯಾಲಯ, ಮಂಗಳೂರು ಇಲ್ಲಿ ೫ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಅನ್ವಿಷಾರ ಮನದ ಮಾತು
ನನ್ನ ಪ್ರತಿ ಕಾರ್ಯದಲ್ಲೂ ಗುರುವಾಗಿ ನನಗೆ ಮಾರ್ಗದರ್ಶನ ನೀಡಿದವರು ನನ್ನ ತಾಯಿ.ಅದಲ್ಲದೇ ನನ್ನ ಜೀವನದ ಪ್ರತಿ ಸಾಧನೆಗಳ ಘಟ್ಟದಲ್ಲಿ ನನ್ನ ತಂದೆ-ತಾಯಿ,ಗೆಳೆಯ-ಗೆಳತಿಯರು,ಹಾಗೇ ಶಾಲಾ ಶಿಕ್ಷಕ ವೃಂದದವರು ಸಹಕರಿಸಿದ್ದಾರೆ.ಅವರ ಆಶೀರ್ವಾದವೇ ನನ್ನ ಸಾಧನೆಗಳಿಗೆ ಸಾಕ್ಷಿ. ಪ್ರತಿ ಕಲೆಗೂ ಸಹಕಾರದ ಕೈ ಮುಖ್ಯ ಹಾಗಾಗಿ ಕಲೆ ಹೊಂದಿರುವ ಮನಸ್ಸುಗಳನ್ನು ಯಾವತ್ತೂ ಸ್ವೀಕರಿಸಿ ಸಹಕರಿಸಬೇಕೆಂಬುದೇ ನನ್ನ ಆಸೆ.

೩ನೇ ವಯಸ್ಸಿನಲ್ಲಿ ರಂಗಮಂಟಪವನ್ನೇರಿದ ಬಾಲೆ:
ಅತಿ ಸಣ್ಣ ಹರೆಯದಲ್ಲೇ ಬಣ್ಣವನ್ನು ಹಚ್ಚಿದ ಇವರು , ಇದುವರೆಗೆ ೨೫ ಬಾರಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ,ಅದಷ್ಟು ಬಾರಿಯೂ ಪ್ರಥಮ ಸ್ಥಾನವನ್ನ ಪಡೆದು ಒಂದು ದಾಖಲೆಯನ್ನೇ ಬರೆದಿದ್ದಾರೆ. ಸಂಗೀತ ,ನೃತ್ಯ ,ಚಿತ್ರಕಲೆ ಹೀಗೆ ಇವರು ೮೦ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತೆರೆನಿಸಿದ್ದಾರೆ. ಹಾಗೆ ಇದುವರೆಗು ಕರ್ನಾಟಕದಾದ್ಯಂತ ೫೦೦ ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿರುವ ಇವರು, ಹಲವೆಡೆ ಸನ್ಮಾನ ಸ್ವೀಕರಿಸಿದ್ದಾರೆ.

ನೀವು ವಿಕಿಪೀಡಿಯನ್ ಆಗಬೇಕೆ?

ಬಣ್ಣದ ಜಗತ್ತಿನಲ್ಲಿ ಮಿಂಚಿದ ಕ್ವೀನ್
ಇವರು ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಶುಭಾಶಯ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ, ಜೂನಿಯರ್ ಮಸ್ತಿ ಮತ್ತು ಡಾನ್ಸ್ V4 ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.ನೃತ್ಯ ಲೋಕವಲ್ಲದೇ ,ತಮ್ಮ ಮಧುರವಾದ ಪದಗಳಿಂದ ‘ಕಲ್ಜಿಗೊದೈಸಿರಿ’ ಎಂಬ ತುಳು ಭಕ್ತಿಗೀತೆಗೆ ರಾಗ ತುಂಬಿ ಹಾಗೆ ತೆಲುಗು ಆಲ್ಬಂ ಸಾಂಗ್ ಒಂದರಲ್ಲಿ ನಟಿಸಿದ್ದಾರೆ.

ಚಿಕ್ಕ ಪರದೆಗಳಲ್ಲಿ ತನ್ನ ಗುರುತನ್ನು ಮೂಡಿಸಿದ ನಂತರ ಅನ್ವಿಷಾರವರು ೨೦೧೯ ರಲ್ಲಿ ಜ಼ೀ ಟಿವಿಯ ‘ಡ್ರಾಮಾ ಜೂನಿಯರ್ಸ್ ಸೀಸನ್ ೩’ ಹಾಗೂ ‘ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ ೨’ ರ ದೊಡ್ಡ ಪರದೆಗಳಲ್ಲಿ ಮಿಂಚಿದರು. ಅದಲ್ಲದೇ ‘ಜಬರ್ದಸ್ತ್ ಶಂಕರ’, ‘ಪೆಪ್ಪರೆರೆ ಪೆರೆರೆ’ ತುಳು ಸಿಮಾಗಳಲ್ಲಿ, ‘ಅಭಿರಾಮಚಂದ್ರ’ , ‘ಹರೀಶನ ವಯಸ್ಸು 36’ ಕನ್ನಡ ಸಿನಿಮಾಗಳಲ್ಲೂ ಪಾತ್ರವಹಿಸಿ ನಟಿಸಿದ್ದಾರೆ. ಹೀಗೆ ಹಲವಾರು ಕಲೆಗಳ ಭಂಡಾರವಾಗಿದ್ದಾರೆ ಪುಟ್ಟ ಅನ್ವಿಷಾ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಂದ ಗೌರವಗಳು :
ಇವರ ಕಲಾಸಕ್ತಿ ಮತ್ತು ಪ್ರತಿಭೆಗಳನ್ನು ಗುರುತಿಸಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಇವರನ್ನು ಸನ್ಮಾನಿಸಲಾಗಿದೆ.೨೦೧೭ ರಲ್ಲಿ ‘ಲಿಟಲ್ ಪ್ರಿನ್ಸೆಸ್’ ಪ್ರಶಸ್ತಿ, ಪಿಲಿಕುಳ ತುಳು ಸಮ್ಮೇಳನದಲ್ಲಿ ‘ತುಳುನಾಡೋಚ್ಚಯ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’, ‘ತವ್ಲವ ಕುಮಾರಿ ಪ್ರಶಸ್ತಿ’, ‘ಸ್ವಸ್ತಿಕ್ ಸಂಭ್ರಮ ಅವಾರ್ಡ್’ , ‘ದಕ್ಷಿಣ ಕನ್ನಡ ಅಸಾಧಾರಣ ಪ್ರತಿಭೆ’ ,’ಕಲಾ ಸೇವ ರತ್ನ’ , ‘ಕಲಾಶ್ರಿ’ ,’ಸಿದ್ದಯ್ಯ ಪುರಾಣಿಕ’ ಗೌರವಗಳನ್ನು ಹಾಗೂ ‘ಯುವ ಸಾಧಕಿ’ ,’ಎಕ್ಸ್ಪ್ರೆಷನ್ ಕ್ವೀನ್’ , ‘ಕರಾವಳಿ ಕಲಾ ಕುಮಾರಿ’, ‘ನಾಟ್ಯ ಮಯೂರಿ’ , ‘ಯುವ ಸಾಧಕಿ’ ಬಿರುದುಗಳನ್ನು ಪಡೆದಿದ್ದಾರೆ.

ಯಕ್ಷಿತಾ ಆರ್
ಮೂಡುಬಿದಿರೆ

LEAVE A REPLY

Please enter your comment!
Please enter your name here