ಅಪ್ಪು ಕ್ರಾಂತಿಯ ಸೆಲೆ..!

0
86
Tap to know MORE!

ಸಾಮಾನ್ಯವಾಗಿ ಒಬ್ಬ ಸ್ಟಾರ್ ನಟ ತೀರಿಹೋದಾಗ ಒಂದಿಷ್ಟು ಆಕ್ರೋಶದ ದಂಗೆಗಳು, ಮನಸ್ಥಿತಿಯ ಕದನಗಳು , ಹುಚ್ಚು ಅಭಿಮಾನಿಗಳ ಹುಚ್ಚಾಟಗಳು , ಮೌಢ್ಯದ ಆಚರಣೆಗಳು ಹೀಗೆ ಅದೊಂದು ಅಹಿತಕರ ವಾತಾವರಣ ನಾವು ನೋಡೆ ಇರುತ್ತೆವೆ. ಆದರೆ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರವನ್ನು ನೋಡಲು ಸುಮಾರು ಇಪ್ಪತ್ತೈದು ಲಕ್ಷ ಜನ ಬಂದಿದ್ದರು ಕೂಡ ಇದೇ ಮೊದಲ ಬಾರಿಗೆ ಎಲ್ಲೂ ಯಾರಿಗೂ ತೊಂದರೆಯಾಗದೆ ದೇವರ ದರ್ಶನಕ್ಕೆ ಬಂದ ಹಾಗೆ ಸರದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದರು ಅಲ್ಲದೆ ಎಷ್ಟೋ ಸಾವಿರಾರು ಸಾವಿರಾರು ಜನರ ರಕ್ತದಾನ , ನೇತ್ರದಾನಗಳು ನಡೆದು ಅನೇಕ ಸೇವಾ ಮನೋಭಾವದ ವ್ಯಕ್ತಿತ್ವಗಳು ಮುಂದೆ ಬಂದವು. ನಿಜಕ್ಕೂ ಪುನೀತ್ ರಾಜಕುಮಾರ್ ಅವರ ಬದುಕು ನಮ್ಮೆಲ್ಲರಿಗೂ ಆದರ್ಶ ಮಾದರಿ” ಎಂದು ಎನ್ನುತ್ತಾರೆ ಬೆಂಗಳೂರಿನ ಪೋಲಿಸ್ ಅಧಿಕಾರಿ ಅಲೋಕ್ ಕುಮಾರ್.
ಇದೇ ಅಲ್ಲವೇ ಸಾರ್ಥಕತೆಯ ಬದುಕಿಗೆ ಸಮಾನಾರ್ಥಕ ಪದ ಎಂದರೆ? ಬಹುಶಃ ಇದನ್ನೂ ಮೀರಿದ ಬದುಕು ಅವರದ್ದು. ಅಪ್ಪು ಎಂದಾಕ್ಷಣ ನಮಗೆ ನೆನಪಾಗೊದು ಆ ನಿಷ್ಕಲ್ಮಶ ನಗುವಿನ ಮುಖ , ಸದಾ ಲವಲವಿಕೆಯ ಉತ್ಸಾಹ ಹಾಗೂ ಮುಗ್ಧ ಸರಳಜೀವಿಯ ವ್ಯಕ್ತಿತ್ವ.
ಹೌದು ಅಪ್ಪು ಹುಟ್ಟಿದ್ದೇ ಬಣ್ಣಹಚ್ಚಲು , ಪ್ರೀತಿ ಹಂಚಿ ನಮ್ಮನ್ನೆಲ್ಲ ರಂಜಿಸಲು!.. ಹೇಳಿ ಕೇಳಿ ಅದ್ವೈತ ಕಲಾರಾಧಕ ಕಲಾತಪಸ್ವಿ ವರನಟ ರಾಜಕುಮಾರ ರವರ ನಲ್ಮೆಯ ಪುತ್ರ. ತಂದೆಯ ನಟನಾ ಕೌಶಲ್ಯ ಹಾಗೂ ಮಾರ್ಗದರ್ಶನಕ್ಕೆ ಪ್ರಭಾವಿತರಾಗಿ ಅತ್ಯಂತ ಕಿರಿವಯಸ್ಸಿನಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡದ ಜನರ ಮನೆಮಗನಾಗೇ ಬೆಳೆದರು.ಇವರು ನಟಿಸುವ ಎಲ್ಲಾ ಚಿತ್ರಗಳು ಎಲ್ಲಾ ವಯಸ್ಕರಿಗೆ ಸ್ಪೂರ್ತಿಯ ಔತಣ ಹೀಗಾಗಿಯೇ ಅವರ ಅಕಾಲಿಕ ಮರಣ ಪುಟ್ಟ ಪುಟಾಣಿಗಳಿಂದ ಹಿಡಿದು ಕೋಲು ಹಿಡಿಯುವ ಮುಪ್ಪಿನವರವರೆಗೂ ಹೃದಯದ ಕಂಬನಿ ಮಿಡಿದಿದೆ.
ನಾನೊಬ್ಬ ಚಿತ್ರಸಾಹಿತಿ ಆಗತಾನೆ ನನ್ನ ಪದವಿ ಮುಗಿಸಿ ಕಾಕತಾಳೀಯ ಏನೋ ಗೊತ್ತಿಲ್ಲಾ ನನ್ನ ಚಿತ್ರರಂಗದ ಪಯಣ ಹಾಗೂ ಮೊದಲನೆಯ ಹೆಜ್ಜೆ ದೊಡ್ಡ್ಮನೆಯಿಂದ ಅಂತ ಹೇಳ್ಕೊಳಕೆ ಹೆಮ್ಮೆ ಖುಷಿ ಎರಡು ಇತ್ತು ಯಾಕಂದ್ರೆ ಅಣ್ಣಾವ್ರ ಮೊಮ್ಮಗನ ಚಿತ್ರಕ್ಕೆ ನಾನು ಸಂಭಾಷಣೆ ಬರೆಯಬೇಕಿತ್ತು ಇದು ನನ್ನ ಸೌಭಾಗ್ಯನೂ ಹೌದು!. ನಾನು ಬೆಂಗಳೂರಿಗೆ ಬಂದು ಆ ಚಿತ್ರಕ್ಕೆ ಕೆಲಸ ಮಾಡ್ತಿರ್ಬೆಕಾದ್ರೆ ಅವತ್ತು ಅಕ್ಟೋಬರ್ ೨೯ ನಂಗೆ ಎರಡು ಖುಷಿ! ಅಂದು ನನ್ನ ತಂಗಿ ಹುಟ್ಟು ಹಬ್ಬ ಇನ್ನೊಂದು ನನ್ನ ಶಿವಣ್ಣ ಅಭಿನಯದ ಭಜರಂಗಿ ೨ ಚಿತ್ರ ಬಿಡುಗಡೆ ಹಾಗೇ ಬೆಳಿಗ್ಗೆ ನನ್ನ ತಂಗಿಗೆ ಕರೆ ಮಾಡಿ ಶುಭಾಶಯಗಳನ್ನ ತಿಳಿಸಿ ಭಜರಂಗಿ ೨ ಚಿತ್ರದ ಮೊದಲನೆಯ ಪ್ರದರ್ಶನಕ್ಕೆ ನಾನು ನನ್ನ ಸ್ನೇಹಿತನ ಜೊತೆ ಹೋದೆ. ಅಲ್ಲಿ ಚಿತ್ರಮಂದಿರದಲ್ಲಿ ಸಡಗರದ ಜಾತ್ರೆ ಎಷ್ಟೋ ವರ್ಷಗಳ ಪರಿಶ್ರಮದ ಬಿಡುಗಡೆ ಅದರಲ್ಲೂ ಶಿವಣ್ಣನ ಚಿತ್ರ ಕೇಳಬೇಕೆ ಎಲ್ಲಿಲ್ಲದ ಸಂಭ್ರಮ ಹಾಗೆ ಚಿತ್ರನೂ ಶುರುವಾಯಿತು ಮಧ್ಯಂತರ ಬಿಟ್ಟಾಗ ಶಿವಣ್ಣನ ಮಗಳು ಚಿತ್ರ ನೋಡೋಕೆ ಬಂದಿದಾರೆ ಅನ್ನೊದು ಗೊತ್ತಾಗಿ ಚಿತ್ರಮಂದಿರ ತುಂಬಾ ಶಿವಣ್ಣನ ಅಭಿಮಾನಿಗಳ ಹರ್ಷೋದ್ಗಾರ , ಖುಷಿಯ ವಾತಾವರಣ ಹಾಗೂ ಅಭಿಮಾನದ ಮೇರಗು ಜೋರಾಗೆ ಇತ್ತು. ಆಗ ಅದು ಚಿತ್ರ ಇನ್ನೂ ಮುಗಿದಿರಲಿಲ್ಲ ಆದ್ರೆ ನನ್ನ ಅಕ್ಕಪಕ್ಕದವ್ರೆಲ್ಲ ಎದ್ದು ಹೋಗ್ತಾ ಇದ್ರು ನನಗೆ ನನ್ನ ಸ್ನೇಹಿತನಿಗೆ ಯಾಕೆ ಅಂತ ಗೊತ್ತಾಗ್ಲಿಲ್ಲ ಆಗ ನನಗೆ ಆಫೀಸ್ ಇಂದ ನಮ್ಮ ಡೈರೆಕ್ಟರ್ ಕರೆ ಮಾಡಿ “ಎದ್ದು ಬನ್ರೊ ಅಪ್ಪು ಬಾಸ್ ಹೋಗ್ಬಿಟ್ರು ” ಅಂದಾಗ ನನಗೆ ಎಲ್ಲವೂ ಸ್ತಬ್ಧ ಚಿತ್ರವಾಯಿತು ನನ್ನ ನಡುಗೆಲಿ ನಡುಕ ಶುರುವಾಗುತ್ತೆ ಏನು ಮಾತಾಡ್ದೆ ನಾನು ನನ್ನ ಸ್ನೇಹಿತ ಚಿತ್ರಮಂದಿರದಿಂದ ಆಚೆ ಬಂದಾಗ ಆ ವಿಷಯ ಗಾಢವಾಗಿ ಕರ್ನಾಟಕದ ಮನೆಮನೆಗಳಲ್ಲಿ ತಲುಪಿತ್ತು! ಅಷ್ಟೇ ಮಿಕ್ಕಿದ್ದೇಲ್ಲ ಇತಿಹಾಸ.. ಅಂದು ಆ ರಾಜನ ಮರಣ ಮರಣವಲ್ಲ ಮಿಗಿಲಾಗಿ ಅದು ಅವರ ಮರುಜನ್ಮವಾಯಿತಷ್ಟೇ ! ಅವರು ತಮ್ಮ ಮನೆಯವರಿಗೂ ಗೊತ್ತಾಗದೆ ಮಾಡಿರುವ ಪುಣ್ಯದ ಕೆಲಸಗಳು ಬೆಳಕಿಗೆ ಬಂದಾಗ ರಾಜಕುಮಾರ್ ಚಿತ್ರದ ಹಾಡಲ್ಲಿ ಬರುವ ಸಾಲು “ಸೂರ್ಯನೊಬ್ಬ ಚಂದ್ರನೊಬ್ಬ ಈ ರಾಜನೂ ಒಬ್ಬ” ಅನ್ನೊದು ಇವರ ವ್ಯಕ್ತಿತ್ವಕ್ಕೆ ಬರೆದಿದ್ದು ಅನ್ನೊದು ಸತ್ಯವಾಯಿತು. ಇನ್ನೂ ಅವರು ನೆನಪು ಮಾತ್ರ ಆದರೆ ಅವರು ಬಿಟ್ಟು ಹೋದ ಜೀವನದ ಮೌಲ್ಯಗಳು ಹಾಗೂ ಕೆಲಸಗಳು ಎಂದಿಗೂ ಜೀವಂತ! ಅಪ್ಪು ಅಮರ .

– ಸಂಕೇತ ಮುಳಗುಂದ

LEAVE A REPLY

Please enter your comment!
Please enter your name here