ಅಪ್ಪ ಎಂದರೆ ಆಕಾಶ – ತಾಯಿಯಷ್ಟೇ ಸಮಾನ ಪ್ರೀತಿ ಕಾಳಜಿ ತೋರುವ ಜನ್ಮದಾತ!

0
204
Tap to know MORE!

ಅಪ್ಪ ಎಂಬ ಎರಡಕ್ಷರದಿ ತುಂಬಾ ಮಹತ್ವವೂ ಮತ್ತು ಅರ್ಥವೂ ಇದೆ. ತಂದೆ, ಪಿತೃ , ತೀರ್ಥರೂಪ, ಅಪ್ಪ , ಜನ್ಮದಾತ , ಜನಕ , ಮೊದಲಿಗ , ಹೀಗೆ ನಾನಾ ಹೆಸರಿನಿಂದ ಕರೆಯುತ್ತೇವೆ. ಒಂದು ಮಗು ಹುಟ್ಟಿ ಬೆಳೆದು ದೊಡ್ಡವನಾಗಿ ದೇಶದ ಒಂದು ಪ್ರಜೆಯಾಗಿ ಅವನನ್ನು ಗುರುತಿಸುವಂತಹ ವ್ಯಕ್ತಿಯಾಗಲು ತಾಯಿ ಎಷ್ಟು ಶ್ರಮ ಮತ್ತು ಕಾರಣವಾಗಿರುತ್ತಾರೆಯೋ ಅಷ್ಟೇ ತಂದೆಯ ಪ್ರೀತಿ , ಶ್ರಮ , ಕಾರಣವಾಗಿರುತ್ತದೆ.

ಒಂದು ಮಗುವಿನ ಜೀವನದಲ್ಲಿ ತಾಯಿಯ ಪ್ರೀತಿ, ಪಾತ್ರ, ಎಷ್ಟು ಪ್ರಮುಖವೋ, ತಂದೆಯ ಪ್ರೀತಿ, ಪಾತ್ರವು ಅಷ್ಟೇ ಮುಖ್ಯವಾಗಿರುತ್ತದೆ. ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹುವಳು ತಾಯಿ , ನಂತರ ಆತನ ವಿದ್ಯಾಭ್ಯಾಸ ಮಗುವಿನ ಖರ್ಚು ವೆಚ್ಚವನ್ನು ಮನೆಯನ್ನು ತಂದೆ ನೋಡಿಕೊಳ್ಳುತ್ತಾರೆ. ಹೊಟ್ಟೆಪಾಡಿಗೋಸ್ಕರ ಹೊರಗೆ ಹೋಗಿ ಕಷ್ಟ ಪಟ್ಟು ಬೆವರು ಸುರಿಸಿ ಕೆಲಸ ಮಾಡಿ ಎಷ್ಟು ಕಷ್ಟವಾದರೂ ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸುತ್ತಾರೆ. ಚಿಕ್ಕಂದಿನಿಂದಲೇ ಮಗುವಿಗೆ ಯಾವುದೇ ರೀತಿಯಲ್ಲಿ ಕೊರತೆ ಬಾರದೆಂದು ಕೇಳಿದ್ದನೆಲ್ಲವನ್ನು ತಂದೆ ಇಲ್ಲ ಎಂದು ಹೇಳದೇ ತೆಗೆದುಕೊಡುತ್ತಾರೆ.

ಇದನ್ನೂ ಓದಿ: ಲೈನ್ ಮ್ಯಾನ್‌ಗಳಿಗೆ ಶಾಪ ಹಾಕುವ ಮುನ್ನ…

ತಂದೆ ತಾಯಿಗೆ ಅವರ ಮಕ್ಕಳ ಮೇಲೆ ಪ್ರೀತಿ ಇರುತ್ತದೆ, ಹಾಗೇ ಮಕ್ಕಳಿಗೂ ಅದೇ ರೀತಿಯ ಪ್ರೀತಿ ಇರುತ್ತದೆ. ಆದರೆ, ಹೆಚ್ಚಾಗಿ ಗಂಡು ಮಗುವಿಗೆ ತಾಯಿಯ ಮೇಲೆ ಪ್ರೀತಿ ಇದ್ದರೆ ಹೆಣ್ಣು ಮಗಳಿಗೆ ತನ್ನ ತಂದೆಯ ಮೇಲೆ ಪ್ರೀತಿ ಗೌರವ ಹೆಚ್ಚಾಗಿರುತ್ತದೆ.

ಅಂಬರದಾಸರೆಯಂತೆ ಅಪ್ಪ

ತಂದೆ ತಾಯಿಯನ್ನು ಯಾರು ದ್ವೇಷಿಸಬಾರದು. ನಮ್ಮ ನಮ್ಮ ಕೈಲಾದಷ್ಟು ಸಹಾಯ, ಪ್ರೀತಿ, ಮಮತೆ, ಗೌರವ, ವಾತ್ಸಲ್ಯ, ಕರುಣೆಯಿಂದ ನೋಡಿಕೊಳ್ಳಬೇಕು.” ಅಪ್ಪ ಎಂದರೆ ಆಕಾಶ ಎಂಬ ಮಾತಿದೆ; ” ಒಂದು ಮಗು ತನ್ನ ಅಪ್ಪನಲ್ಲಿ ತನಗೆ ಬೇಕದ್ದನ್ನು , ನೋಡಿದ್ದನು, ಕೇಳಿದನ್ನೆಲ್ಲವನ್ನು ತೆಗೆದುಕೊಡುತ್ತಾರೆ. ತೆಗೆದುಕೊಡಲು ತನ್ನಲ್ಲಿ ಹಣವಿಲ್ಲದಿದ್ದರೂ ಮಗುವಿನ ಮನಸ್ಸಿನಲ್ಲಿ ನನಗೆ ಯಾವುದು ಇಲ್ಲವೆಂದು ಕೊರಗು ಬರಬಾರದೆಂದು ಮಗು ಕೇಳಿದ್ದನ್ನೆಲ್ಲವನ್ನು ತೆಗೆದುಕೊಡುತ್ತಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಒಬ್ಬ ತಂದೆಯ ಮನಸ್ಸಿನಲ್ಲಿ ತನ್ನ ಮಗು ಬೆಳೆದು ದೊಡ್ಡವನಾಗಿ ದೊಡ್ಡ ವ್ಯಕ್ತಿಯಾಗಬೇಕೆಂದು ಕಾಲೇಜಿಗೆ ಕಳುಹಿಸುತ್ತಾರೆ. ಆದರೆ, ಅವನು ಸ್ನೇಹಿತರ ಜೊತೆ ಕಾಲ ಕಳೆದು ತನ್ನ ಕಾಲೇಜು ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ತಂದೆ ತಾಯಿ ಎಷ್ಟೇ ಹೇಳಿದರು ಅವನು ಅವರ ಮಾತು ಕೇಳುವ ತಾಳ್ಮೆಇರುವುದಿಲ್ಲ. . ಕೊನೆಗೆ ಅವನಿಗೆ ತನ್ನ ತಪ್ಪು ಅರಿವಾಗುತ್ತದೆ. ಸ್ನೇಹಿತರೆಲ್ಲ ಒಳ್ಳೆಯ ಹುದ್ದೆಗೆ ಹೋಗುದ್ದನ್ನು ಕಂಡು ಪಶ್ಚತ್ತಾಪವಾಗುತ್ತದೆ. ತನ್ನ ತಪ್ಪು ಅರಿವಾಗುತ್ತದೆ! ಆಗ ಅವನು ತನ್ನ ತಂದೆ – ತಾಯಿಯನ್ನು ನೆನಪಿಸಿಕೊಳ್ಳುತ್ತಾನೆ. ಎಲ್ಲರಂತೆ ನಾನು ಸಮಾಜದಲ್ಲಿ ಒಂದು ಒಳ್ಳೆಯ ವ್ಯಕ್ತಿಯಾಗಬೇಕೆಂದು ತನ್ನ ಹೆತ್ತವರ ಆಸೆ, ಎಷ್ಟು ಕಷ್ಟವಾದರೂ ತಂದೆ ನನ್ನನು ಕಾಲೇಜಿಗೆ ಕಳುಹಿಸಿದರು ಆದರೆ ನಾನು ಸಮಯವನ್ನು ವ್ಯರ್ಥ ಮಾಡಿದೆ ಎಂದು ಎಂದು ಅವನಿಗೆ ತಪ್ಪಿನ ಅರಿವಾಗುತ್ತದೆ. ಮಗುವಿನ ಯಾವುದೇ ಕೆಲಸದಲ್ಲಿ ತಾಯಿಯ ಶ್ರಮ ಮುಂದಿನಿಂದ ಇದ್ದರೆ ಹಿಂದಿನಿಂದ ತಂದೆಯ ಶ್ರಮ ಅದರ 10 ಪಟ್ಟು ಇರುತ್ತದೆ.

ಗುರು ಹಿರಿಯರನ್ನು ಪ್ರೀತಿಸಬೇಕು ಹಾಗೇ, ತಂದೆ – ತಾಯಿಯ ಮಾತಿಗೆ ನಾವು ಬೆಲೆ ಕೊಡಬೇಕು ಯಾವತ್ತು ಅವರ ಮಾತಿಗೆ ತಪ್ಪಬಾರದು ಅವರು ಹೇಳಿದ ಮಾತು, ಕಲಿಸಿದ ಪಾಠ ತಪ್ಪದೆ ಅನುಸರಿಸಿಕೊಂಡು ಹೋದರೆ ಮುಂದೊಂದು ದಿನ ನಾವು ಒಳ್ಳೆಯ ವ್ಯಕ್ತಿಯಾಗುತ್ತೇವೆ.

ರಕ್ಷಿತಾ ಕಟ್ಟತ್ತಿಲ ದಾರೆಪಡ್ಪು
ರಥಬೀದಿ ,ಮಂಗಳೂರು

LEAVE A REPLY

Please enter your comment!
Please enter your name here