ಅಪ್ಪ ಹೇಳಿದ ಆ ಒಂದು ಬುದ್ಧಿಮಾತು… ಜೀವನದ ಅತ್ಯಮೂಲ್ಯ ಪಾಠ!

0
197
Tap to know MORE!

ಆ ಜೀವವಿರದೆ ಈ ಜೀವ ಅಪೂರ್ಣವೇ ಸರಿ, ಜೀವನದ ಕಷ್ಟ ಕೋಟಲೆಗಳ ಸಾಗರವನ್ನು ದಾಟಿ ದಡವನು ತಲುಪಿಸುವ ನಾವಿಕ, “ಅಪ್ಪ”. ಅಪ್ಪನಿಗೆ ಮಗಳೆಂದರೆ ಇಷ್ಟ, ತಾಯಿಗೆ ಮಗನೆಂದರೆ ಇಷ್ಟ”, ಎನ್ನುವವರಿದ್ದಾರೆ. ಅದರೆ ನನ್ನ ಅಪ್ಪನಿಗೆ ನಾನೇ ಪ್ರಪಂಚ , ಆತನದು ಮುಗ್ಧ ಮನ, ಎಲ್ಲರಿಗೂ ಕಾಳಜಿದುಂಬಿ ಹಾರೈಸುವ ನಿಷ್ಕಲ್ಮಶ ಅಂತಃಕರಣ. ತನ್ನೊಳಗಿನ ಭಾವನೆಗಳನ್ನು ಹಿಡಿದಿಡುವ ತಂದೆ ನನಗೆ ಮೊದಲ ಸ್ಪೂರ್ತಿ. ಆತನ ವಯಸ್ಸು ಬದಲಾದರೂ ಪ್ರೀತಿ ಬದಲಾಗದು.

ಕೊರೋನ ಮಹಾಮಾರಿಯಿಂದ ಪಾರಾಗಲು ಉಂಟಾಗಿರುವ ಈ ಲಾಕ್‌ಡೌನ್ ನ ಸಂದಿಗ್ಧ ಪರಿಸ್ಥಿಯಲ್ಲಿ,ದೇಶದ ಜನತೆಗೆ ಒಮ್ಮಿಂದೊಮ್ಮೆಗೆ ಬಿಕ್ಕಟ್ಟು ಉಂಟಾದರೂ, ನನ್ನ ತಂದೆ ಇನ್ನೇನು ಸ್ಥಿತಿ ಎಂದು ಮನದೊಳಗೆ ಅಂಜಿದರೂ ಅಳುಕಲಿಲ್ಲ. ಆತನ ನೋವನ್ನು ಯಾರೆದುರೂ ಹೇಳಿಕೊಳ್ಳಲಿಲ್ಲ. ಕಷ್ಟವನೆಲ್ಲ ಮರೆಸುವ,ನಮ್ಮನ್ನ ಮೆರೆಸುವ ಅವರ ನಗುವೇ ನನಗೊಂದು ಜೀವನ ಪಾಠ.

ಇದನ್ನೂ ಓದಿ: ನಾ ಕಂಡ ನಮ್ಮವರು.‌..

ಜೀವನ ಸಂಸಾರ ಅಂದಮೇಲೆ ಕಷ್ಟ , ಏರಿಳಿತಗಳು ಸರ್ವೇ ಸಾಮಾನ್ಯ, ನಾವು ಅಚಾತುರ್ಯದಿಂದ ತಪ್ಪಿ ನಡೆದಾಗ ದಂಡಿಸಿ, ಸರಿ ದಾರಿಗೆ ತಂದು ಮುನ್ನಡೆಸುವ ನೇತಾರ ಪ್ರೀತಿ ನೀಡುವುದರಲ್ಲಿ ಎತ್ತಿದ ಕೈ. ನಾನು ಆತನ ಮೇಲೆ ಮುನಿಸಿಕೊಂಡರೂ ಮತ್ತೆ ನನ್ನನ್ನು ಮಾತನಾಡಿಸದೆ ಮಲಗಲಾರದು ಆ ಜೀವ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಲಾಕ್ ಡೌನ್ ಸಮಯದಲ್ಲಿ ಆತನಿಂದ ಕಲಿತದ್ದು ಸಾಕಷ್ಟಿದೆ,ಬರಹಗಳಲ್ಲಿ ತುಂಬಲು ಪದ ಸಿಗದು,ಮಾತುಗಳಲಿ ವಿವರಿಸಿದರೂ ಇಂದು ಮುಗಿಯದು.ತನ್ನಲ್ಲಿರುವ ಸಂಸ್ಕಾರವನ್ನೆಲ್ಲ ನನಗೆ ಕಲಿಸಿ,ಇನ್ನೊಬ್ಬರಿಗೆ ಹಂಚೆನ್ನುವ ಮುಗ್ಧ ಮನ.ಅವರಿಂದ ಪ್ರೀತಿಸುವುದನ್ನು ಕಲಿತೆ,ಇಂತಹ ಕ್ಲಿಷ್ಟ ಸಮಯದಲ್ಲಿ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿ , “ಎಂತಹ ಪರಿಸ್ಥಿತಿಯಾದರು ಸರಿ ಅದನ್ನು ಹಿಮ್ಮೆಟ್ಟಿಸು” ಎಂದು ಧೈರ್ಯ ತಂದುಕೊಟ್ಟಿದ್ದು ಆತನ ಭರವಸೆಯ ನುಡಿಗಳೇ. ಬಂಧುಗಳೆಲ್ಲ ಸಾವಿಗೆ ಶರಣಾಗಿ ಹೋಗುವಾಗ, “ನಿನ್ನ ಅಸೆಗಳಾವುದು ಶಾಶ್ವತವಲ್ಲ,ನಿನ್ನ ಕೆಲಸಗಳಷ್ಟೆ ಶಾಶ್ವತ”, ಎಂದು ಬುದ್ಧಿ ಮಾತುಗಳನ್ನಾಡಿದ್ದು, ನನಗೊಂದು ಜೀವನದ ಅತ್ಯಮೂಲ್ಯ ಪಾಠವಾಯಿತು.


ಶಿವಪ್ರಸಾದ್ ಬೋಳಂತೂರು
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here