ತಿರುವನಂತಪುರ ಡಿ.25: 28 ವರ್ಷಗಳ ಹಿಂದೆ ನಡೆದಿದ್ದ ಕ್ರೈಸ್ತ ಸನ್ಯಾಸಿನಿ ಅಭಯಾ (21) ಕೊಲೆ ಪ್ರಕರಣದಲ್ಲಿ ಕ್ಯಾಥೋಲಿಕ್ ಧರ್ಮಗುರು ಥಾಮಸ್ ಎಂ.ಕೊಟ್ಟೂರ್, ಸಿಸ್ಟರ್ ಸೆಫಿ ತಪ್ಪಿತಸ್ಥರು ಎಂದು ಇಲ್ಲಿನ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ.
ಸಿಸ್ಟರ್ ಅಭಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಪಾದ್ರಿ ಮತ್ತು ಸನ್ಯಾಸಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಭಾರಿ ಸುದ್ದಿಯಲ್ಲಿದೆ #Covid20 ! ಇಂಗ್ಲೆಂಡ್ನಲ್ಲಿ ನಿಯಂತ್ರಣ ಮೀರಿದ ಹೊಸ ರೂಪದ ಕೊರೋನಾ!
ಸಿಸ್ಟರ್ ಅಭಯ ಹತ್ಯೆಗೆ ಕಾರಣರಾದ ಆರೋಪಿ ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಹೋದರಿ ಸೆಫಿಗೆ ಜೀವಾವಧಿ ಶಿಕ್ಷೆ ಒಳಗೊಂಡಂತೆ, ನ್ಯಾಯಾಲಯವು ಇಬ್ಬರಿಗೆ ಕ್ರಮವಾಗಿ 6.50 ಲಕ್ಷ ಮತ್ತು 5.50 ಲಕ್ಷ ರೂ. ದಂಡ ವಿಧಿಸಿದೆ.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
1992ರ ಮಾರ್ಚ್ 27ರಂದು ಅಭಯಾ ಅವರ ಶವ ಕೋಟ್ಟಯಂನಲ್ಲಿರುವ ಸೇಂಟ್ ಪಯಸ್ ಕಾನ್ವೆಂಟ್ನ ಬಾವಿಯೊಂದರಲ್ಲಿ ಪತ್ತೆಯಾಗಿತ್ತು.