ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಅಂಗಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತಂತೆ ಹಂಚಿಕೊಂಡಿರುವ 77 ವರ್ಷದ ಬಚ್ಚನ್, “ಕೌನ್ ಬನೇಗಾ ಕ್ರೊರ್ಪತಿ” ಶೂಟಿಂಗ್ ಸೆಟ್ನಿಂದ ಹಸಿರು ರಿಬ್ಬನ್ನೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
“ಹಸಿರು ರಿಬ್ಬನ್ ಧರಿಸಲು ಒಂದು ಕಾರಣ ಇದೆ. ನಾನು ಒಬ್ಬ ಪ್ರತಿಜ್ಞೆ ಮಾಡಿದ ಅಂಗ ದಾನಿ! ಇನ್ನೊಬ್ಬರಿಗೆ ಜೀವವನ್ನು ಕೊಡಲು” ಎಂದು ನಟ ಆ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.
ಸೆಪ್ಟೆಂಬರ್ 28 ರಂದು, ಕೌನ್ ಬನೇಗಾ ಕ್ರೊರ್ಪತಿಗಾಗಿ ವಿಶೇಷ ಸಂಚಿಕೆಯ ಚಿತ್ರೀಕರಣದ ಬಗ್ಗೆ ನಟ ತಮ್ಮ ಬ್ಲಾಗ್ನಲ್ಲಿ ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅವರು ನಿರೂಪಕರಾಗಿದ್ದಾರೆ. ರಿಬ್ಬನ್ನ ಮಹತ್ವದ ಬಗ್ಗೆ ಮಾತನಾಡುತ್ತಾ, “ಹಸಿರು ರಿಬ್ಬನ್ ಎಂದರೆ ನಾವು ಅಂಗ ದಾನಿಗಳು ಎಂಬ ಅಂಶವನ್ನು ಒಪ್ಪಿಕೊಳ್ಳುವುದು ಮತ್ತು ಹಣ ಭರಿಸುವ ಶಕ್ತಿ ಇಲ್ಲದವರಿಗೆ ಇದು ಸಹಕಾರಿಯಾಗಲಿದೆ” ಎಂದು ಬರೆದಿದ್ದಾರೆ.