ಕೊರೋನಾ ಮುಕ್ತಗೊಂಡ ಶೀಘ್ರದಲ್ಲೇ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ : ಅಮಿತ್ ಶಾ

0
182
suddivani, ಸುದ್ದಿವಾಣಿ

ಕೊರೋನ ವೈರಸ್ ಹರಡುವಿಕೆಯನ್ನು ನಿಯಂತ್ರಣಕ್ಕೆ ತಂದ ನಂತರ ದೇಶಾದ್ಯಂತ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಭೇಟಿ ನೀಡಿದ ಅಮಿತ್ ಶಾ, ಪೌರತ್ವ ಕಾನೂನು ಜಾರಿಗೊಳಿಸಲಾಗುವುದು ಮತ್ತು ನಿರಾಶ್ರಿತರಿಗೆ ಪೌರತ್ವ ನೀಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ವರ್ಷಾಂತ್ಯದಲ್ಲಿ ಕರ್ನಾಟಕದ ಸಿಎಂ ಬದಲಾವಣೆ | ಕೆಲವೇ ವರ್ಷಗಳಲ್ಲಿ ಕರ್ನಾಟಕ ಇಬ್ಭಾಗ – ಬ್ರಹ್ಮಾಂಡ ಭವಿಷ್ಯ!

ನೆರೆಹೊರೆಯ ದೇಶಗಳಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವವರಿಗೆ ಸಹಾಯ ಮಾಡಲು ಮಾತ್ರ ಈ ಕಾನೂನು ಉದ್ದೇಶಿಸಲಾಗಿದೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು. ಅಲ್ಪಸಂಖ್ಯಾತರು ತಮ್ಮ ಪೌರತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ಬಿಎಸ್ಪಿ (ಬಹುಜನ ಸಮಾಜ ಪಕ್ಷ), ಎಸ್ಪಿ (ಸ್ವಾಜ್ವಾಡಿ ಪಕ್ಷ), ಕಮ್ಯುನಿಸ್ಟರು, ಕಾಂಗ್ರೆಸ್ ಮತ್ತು ಮಮತಾ ದೀದಿ ಸುಳ್ಳು ಹೇಳುತ್ತಾರೆ. “ಸಿಎಎ ಪೌರತ್ವವನ್ನು ನೀಡುವ ಕಾನೂನೇ ಹೊರತು ಅದು ಅವರ ಪೌರತ್ವವನ್ನು ಎಂದಿಗೂ ಕಸಿದುಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here