ಭಾರತದಲ್ಲಿ ತನ್ನ ಚಟುವಟಿಗಳನ್ನು ನಿಲ್ಲಿಸಿದ ಅಮ್ನೆಸ್ಟಿ ಇಂಟರ್ನ್ಯಾಷನಲ್!

0
180
Tap to know MORE!

ನವದೆಹಲಿ: ಜಾಗತಿಕ ಮಾನವ ಹಕ್ಕು ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯು ಭಾರತದಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಸರ್ಕಾರದ ಸೇಡಿನ ಕ್ರಮಗಳು ಇದಕ್ಕೆ ಕಾರಣ ಎಂದು ಆ ಸಂಸ್ಥೆ ಹೇಳಿಕೊಂಡಿದೆ. ಕೇಂದ್ರ ಸರ್ಕಾರ ಅಮ್ನೆಸ್ಟಿ ಸಂಸ್ಥೆಯ ಭಾರತ ವಿಭಾಗದ ಎಲ್ಲಾ ಬ್ಯಾಂಕ್ ಖಾತೆಗಳನ್ನ ಮುಟ್ಟುಗೋಲು ಹಾಕಿಕೊಂಡಿದ್ದು ಈ ಬೆಳವಣಿಗೆಗೆ ಕಾರಣವಾಗಿದೆ. ಇದರಿಂದಾಗಿ, ತನ್ನ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳನ್ನು ಬಿಡಬೇಕಾಯಿತು ಎಂದು ಹೇಳಿದೆ.

ಈ ಸಂಸ್ಥೆಯು ವಿದೇಶಿ ಹಣವನ್ನು ಅಕ್ರಮವಾಗಿ ಸ್ವೀಕರಿಸುತ್ತಿದೆ. ಅದಲ್ಲದೆ, ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿ ಇವುಗಳನ್ನು ನೋಂದಾಯಿಸಲ್ಪಟ್ಟಿಲ್ಲ ಎಂದು ಸರ್ಕಾರ ಹೇಳಿತ್ತು.

ಪತ್ರಿಕಾ ಹೇಳಿಕೆಯಲ್ಲಿ, “ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಬ್ಯಾಂಕ್ ಖಾತೆಗಳನ್ನು ಭಾರತ ಸರ್ಕಾರವು ಸೆಪ್ಟೆಂಬರ್ 10 ರಂದು ಮುಟ್ಟುಗೋಲು ಹಾಕಿರುವುದು ತಿಳಿದುಬಂದಿದೆ. ಈ ಕ್ರಮವು, ಸಂಸ್ಥೆಯು ಮಾಡುತ್ತಿರುವ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿದೆ” ಎಂದು ಅಮ್ನೆಸ್ಟಿ ಸಂಸ್ಥೆಯು ಹೇಳಿದೆ.

ಭಾರತದಲ್ಲಿರುವ ತನ್ನ ಎಲ್ಲಾ ಸಿಬ್ಬಂದಿಗಳನ್ನು ಬಿಡುವಂತೆ ಮತ್ತು ಅದರ ಎಲ್ಲಾ ಪ್ರಚಾರ ಮತ್ತು ಸಂಶೋಧನಾ ಕಾರ್ಯಗಳನ್ನು ನಿಲ್ಲಿಸಲು ಕೇಳಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

ಸರ್ಕಾರದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಸಂಸ್ಥೆಯು, “ಆಧಾರರಹಿತ ಮತ್ತು ಪ್ರೇರಿತ ಆರೋಪಗಳ ಮೇಲೆ ಭಾರತ ಸರ್ಕಾರವು ಮಾನವ ಹಕ್ಕುಗಳ ಸಂಘಟನೆಗಳ ಈ ರೀತಿಯ ಕ್ರಮಗಳನ್ನು ಕೈಗೊಂಡಿದೆ” ಎಂದು ಹೇಳಿದೆ. ಅಮ್ನೆಸ್ಟಿ ಇಂಟರ್ನ್ಯಾಷನಲ್ ಎಲ್ಲಾ ಭಾರತೀಯ ಮತ್ತು ಅಂತರರಾಷ್ಟ್ರೀಯ ಕಾನೂನುಗಳನ್ನು ಪಾಲಿಸಿದೆ ಎಂದು ಸ್ಪಷ್ಟಪಡಿಸಿದೆ.

ಅಮ್ನೆಸ್ಟಿ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಿದ್ದು ದಿಢೀರ್ ಕ್ರಮ ಅಲ್ಲ. ಕಳೆದ ಎರಡು ವರ್ಷಗಳಿಂದಲೂ ಸಂಸ್ಥೆಯನ್ನ ಗುರಿಯಾಗಿಸಿ ದಾಳಿಗಳಾಗುತ್ತಿದ್ದವು ಎಂದು ಅಮ್ನೆಸ್ಟಿ ಇಂಡಿಯಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅವಿನಾಶ್ ಕುಮಾರ್ ಹೇಳುತ್ತಾರೆ.

LEAVE A REPLY

Please enter your comment!
Please enter your name here