ಅಯೋಧ್ಯೆ ರಾಮ ಮಂದಿರಕ್ಕೆ ಅಗಸ್ಟ್ ನಲ್ಲಿ ಶಿಲಾನ್ಯಾಸ – ಪ್ರಧಾನಿಗೆ ಆಹ್ವಾನ

0
209
Tap to know MORE!

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಆಗಸ್ಟ್ ಮೊದಲ ವಾರದಲ್ಲಿ ಅಯೋಧ್ಯೆಯಲ್ಲಿ ನೆರವೇರಲಿರುವ ರಾಮ ಮಂದಿರದ ಶಿಲಾನ್ಯಾಸ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದೆ.  ಈ ಸಮಾರಂಭಕ್ಕೆ ಟ್ರಸ್ಟ್ ಎರಡು ದಿನಾಂಕಗಳನ್ನು ಪ್ರಸ್ತಾಪಿಸಿದೆ – ಆಗಸ್ಟ್ 3 ಮತ್ತು 5. ಪ್ರಧಾನಮಂತ್ರಿಯ ಲಭ್ಯತೆಗೆ ಅನುಗುಣವಾಗಿ ಇದನ್ನು ಅಂತಿಮಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಇಂದು ಅಯೋಧ್ಯೆಯಲ್ಲಿ ಟ್ರಸ್ಟ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದೇವಾಲಯದ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.  ಮೂರು ಗುಮ್ಮಟಗಳ ಬದಲಾಗಿ, ದೇವಾಲಯವು ಈಗ ಐದು ಗುಮ್ಮಟಗಳನ್ನು ಹೊಂದಲಿದೆ.  ಇದಲ್ಲದೆ, ದೇವಾಲಯದ ಎತ್ತರವನ್ನು ಸಹ ಪರಿಷ್ಕರಿಸಿದೆ ಮತ್ತು ಇದು ನಕ್ಷೆಗಳಲ್ಲಿ ಪ್ರಸ್ತಾಪಿಸಿದ್ದಕ್ಕಿಂತ ಇನ್ನೂ ಎತ್ತರದಲ್ಲಿರಲಿದೆ.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯ ನಂತರ, “ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆಗೆ ಅಯೋಧ್ಯೆಗೆ ಬರುವುದು ನಿಶ್ಚಿತ. ಆದರೆ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ. 3-3.5 ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ನಾವು ಭಾವಿಸುತ್ತೇವೆ” ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ಶ್ರೀ ರಾಮ ದೇವಾಲಯದ ನಕ್ಷೆಯಲ್ಲಿ ಮೂಲಭೂತವಾಗಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಆದರೆ ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಈ ಬದಲಾವಣೆಯಲ್ಲಿ ದೇವಾಲಯದ ಶಿಖರದ ಎತ್ತರವನ್ನು ಹೆಚ್ಚಿಸಲಾಗುವುದು, ಅದು ಈಗ ಯೋಜಿಸಿರುವಂತೆ, ನೆಲದಿಂದ 128 ಅಡಿಗಳ ಬದಲು 161 ಅಡಿ ಯಷ್ಟಕ್ಕೆ ಏರಿಸಲು ನಿರ್ಧರಿಸಲಾಗಿದೆ.

LEAVE A REPLY

Please enter your comment!
Please enter your name here