ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಿಪಬ್ಲಿಕ್ ಟಿವಿ ನಿರೂಪಕ ಅರ್ನಬ್ ಗೋಸ್ವಾಮಿಯವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
“ಅರ್ನಬ್ ಗೋಸ್ವಾಮಿಯವರಿಗೆ ಜಾಮೀನು ನೀಡದಿರುವುದು ಬಾಂಬೆ ಹೈಕೋರ್ಟ್ನ ತಪ್ಪಾಗಿದೆ ಎಂದು ನಾವು ಭಾವಿಸುತ್ತೇವೆ. ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರು ಆರೋಪಿಗಳನ್ನು (ಅವರು) ₹50,000 ರೂ.ಗಳ ಬಾಂಡ್ ಮೇಲೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು” ಎಂದು ನ್ಯಾಯಾಧೀಶ ಚಂದ್ರಚೂಡ್ ಹೇಳಿದರು.
ಆದೇಶವನ್ನು ತಕ್ಷಣವೇ ಅನುಸರಿಸಬೇಕೆಂದು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಲಾಗಿದೆ.