ಅಲಿಗಢ ಮುಸ್ಲಿಂ ವಿವಿ ಮಿನಿ ಭಾರತವಿದ್ದಂತೆ| ಮುಸ್ಲಿಂ ಮಹಿಳೆಯರ ಸಬಲೀಕರಣ ನಮ್ಮ ಆದ್ಯತೆ : ಪ್ರಧಾನಿ ಮೋದಿ

0
147
Tap to know MORE!

ನವದೆಹಲಿ ಡಿ.22: ದೇಶದಲ್ಲಿ ಶಾಲೆಯಿಂದ ಹೊರಗುಳಿಯುವ ಮುಸ್ಲಿಂ ಬಾಲಕಿಯರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಪ್ರಧಾನ ಆದ್ಯತೆ ನೀಡೋದಾಗಿ ಭರವಸೆ ನೀಡಿದ್ದಾರೆ.

ಕಳೆದ 70 ವರ್ಷಗಳಿಂದ ಮುಸ್ಲಿಂ ಬಾಲಕಿಯರು ಶಾಲೆಯಿಂದ ಹೊರಗುಳಿಯುವ ಪ್ರಮಾಣ ಶೇ. 70ರಷ್ಟಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಅಡಿ ಗ್ರಾಮಗಳಲ್ಲಿ, ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿತು. ಅದರಲ್ಲೂ ಬಾಲಕಿಯರ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮೊದಲು ಆದ್ಯತೆ ನೀಡಲಾಗಿತ್ತು. ಇದೀಗ ದೇಶದಲ್ಲಿ ಮುಸ್ಲಿಂ ಬಾಲಕಿಯರು ಶಾಲೆ ತೊರೆಯುವ ಪ್ರಮಾಣ ಶೇ. 70ರಿಂದ ಶೇ. 30ಕ್ಕೆ ಇಳಿಕೆ ಕಂಡಿದೆ ಎಂದು ಮಾಹಿತಿ ನೀಡಿರುವ ಪ್ರಧಾನಿ ಮೋದಿ, ಮುಂದಿನ ದಿನಗಳಲ್ಲಿ ಶಾಲೆಯಿಂದ ಹೊರಗುಳಿಯುವ ಬಾಲಕಿಯರ ಪ್ರಮಾಣವನ್ನು ಕಡಿತಗೊಳಿಸಲು ಸರ್ಕಾರ ನಿರಂತರ ಶ್ರಮ ವಹಿಸಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಶ್ರೀ ರಾಮನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಮಹಿಳೆಯರಿಗೆ ಜೀವ ಬೆದರಿಕೆ!

ಅಲಿಗಢ ಮುಸ್ಲಿಂ ವಿವಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ವಿದ್ಯಾರ್ಥಿನಿಯರ ಪ್ರಮಾಣ ಶೇ. 35ಕ್ಕೆ ಏರಿಕೆಯಾಗಿದೆ, ಹೀಗಾಗಿ, ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ಮುಸ್ಲಿಂ ಬಾಲಕಿಯರ ಶಿಕ್ಷಣ ಹಾಗೂ ಬಲವರ್ಧನೆ ಸರ್ಕಾರದ ಪ್ರಧಾನ ಆದ್ಯತೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ಆರು ವರ್ಷಗಳಲ್ಲಿ 1 ಕೋಟಿ ಮುಸ್ಲಿಂ ಬಾಲಕಿಯರಿಗೆ ಸರ್ಕಾರದ ವತಿಯಿಂದ ಸ್ಕಾಲರ್‌ಶಿಪ್ ನೀಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಇದನ್ನೂ ಓದಿ: ಬೈ-ಎಲೆಕ್ಷನ್ | ಬಿಜೆಪಿಯಿಂದ ಮುಸ್ಲಿಮರಿಗೆ ಟಿಕೆಟ್ ಸಿಗಲ್ಲ : ಕೆ.ಎಸ್.ಈಶ್ವರಪ್ಪ

ಶಿಕ್ಷಣದಿಂದ ಉದ್ಯೋಗ ಲಭ್ಯತೆ ಹೆಚ್ಚಾಗುತ್ತದೆ, ಉದ್ಯಮ ಶೀಲತೆಯೂ ಹೆಚ್ಚಾಗುತ್ತದೆ. ಈ ಮೂಲಕ ಆರ್ಥಿಕ ಸ್ವಾವಲಂಬನೆಯೂ ಸಾಧ್ಯವಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಸ್ತ್ರೀ ಸಬಲೀಕರಣವಾಗುತ್ತೆ ಎಂದು ಪ್ರಧಾನಿ ಮೋದಿ ವಿವರಿಸಿದರು. ಮಹಿಳೆಯರು ಎಲ್ಲಾ ಹಂತಗಳಲ್ಲೂ ಸಬಲರಾಗಬೇಕು, ನಿರ್ಧಾರ ಕೈಗೊಳ್ಳುವಿಕೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಪುರುಷರಿಗೆ ಸಮಾನವಾಗಿ ನಿಲ್ಲಬೇಕು ಎಂದು ಪ್ರಧಾನಿ ಆಶಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇದೇ ವೇಳೆ ತ್ರಿವಳಿ ತಲಾಖ್ ವಿಚಾರ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದೇಶದಲ್ಲಿ ಆಧುನಿಕ ಮುಸಲ್ಮಾನ ಸಮುದಾಯ ನಿರ್ಮಾಣದ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದರು. ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯದ ಇತಿಹಾಸವನ್ನೂ ಸ್ಮರಿಸಿದ ಪ್ರಧಾನಿ ಮೋದಿ 100 ವರ್ಷಗಳ ಹಿಂದೆ ಈ ವಿಶ್ವ ವಿದ್ಯಾಲಯದ ಸಂಸ್ಥಾಪಕ ಮುಖ್ಯಸ್ಥರಾದ ಬೇಗಮ್ ಸುಲ್ತಾನಾ ಅವರು, ಆಧುನಿಕ ಮುಸ್ಲಿಂ ಸಮುದಾಯದ ಸೃಷ್ಟಿಗೆ ಕಾರಣರಾದರು ಎಂದು ಸ್ಮರಿಸಿದರು.

ಮಗನಿಗೆ ‘ಕೃಷ್ಣ’ ಎಂದು ಹೆಸರಿಟ್ಟ ಮುಸ್ಲಿಂ ತಂದೆ..!

LEAVE A REPLY

Please enter your comment!
Please enter your name here