ಐಪಿಎಲ್‌ ಆಡಲಿದ್ದಾರೆ ಅಮೆರಿಕದ ಕ್ರಿಕೆಟಿಗ ಅಲಿ ಖಾನ್

0
145
Tap to know MORE!

ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಇಂಗ್ಲೆಂಡ್‌ನ ವೇಗದ ಬೌಲರ್ ಹ್ಯಾರಿ ಗುರ್ನೆ ಬದಲಿಗೆ 29ರ ಹರೆಯದ ವೇಗದ ಬೌಲರ್ ಅಲಿ ಖಾನ್‌ರನ್ನು ಆಯ್ಕೆ ಮಾಡಿದೆ. ಐಪಿಎಲ್‌ನ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್‌ಫೋ ಡಾಟ್‌ಕಾಮ್ ವರದಿ ಮಾಡಿದೆ.

ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ಗೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡ ವೇಗದ ಬೌಲರ್ ಅಲಿ ಖಾನ್‌ರನ್ನು ಕಣಕ್ಕಿಳಿಸಲು ನಿರ್ಧರಿಸುವುದರೊಂದಿಗೆ ಇದೇ ಮೊದಲ ಬಾರಿ ಅಮೆರಿಕದ ಆಟಗಾರನೊಬ್ಬ ವಿಶ್ವದ ಶ್ರೀಮಂತ ಟ್ವೆಂಟಿ-20 ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಅಲಿ ಖಾನ್‌ ಇತ್ತೀಚೆಗೆ ಮುಕ್ತಾಯವಾಗಿದ್ದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚಾಂಪಿಯನ್ಸ್‌ ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್ ತಂಡದ ಪರ ಆಡಿದ್ದರು. ಕೀರನ್‌ ಪೊಲಾರ್ಡ್ ನಾಯಕತ್ವದ ಟಿಕೆಆರ್‌ ತಂಡ ಒಂದೂ ಪಂದ್ಯ ಸೋಲದೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಎಂಟು ಪಂದ್ಯಗಳಿಂದ ಅಮೆರಿಕನ್‌ ವೇಗಿ ಎಂಟು ವಿಕೆಟ್‌ಗಳನ್ನು ಪಡೆದಿದ್ದರು.

ಅಲಿ ಖಾನ್‌ 2018ರಲ್ಲಿ ಕೆನಡಾದಲ್ಲಿ ನಡೆದಿದ್ದ ಗ್ಲೋಬಲ್‌ ಟಿ20 ಟೂರ್ನಿ ಆಡಿದ್ದರು. ತಮ್ಮ ಪ್ರದರ್ಶನದಿಂದ ಡ್ವೇನ್‌ ಬ್ರಾವೊ ಸೇರಿದಂತೆ ಹಲವು ಸ್ಟಾರ್ ಆಟಗಾರರ ಗಮನ ಸೆಳೆದಿದ್ದರು. ಈ ಕಾರಣದಿಂದಾಗಿ ಅವರು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ಗೆ ಸ್ಥಾನ ಪಡೆದಿದ್ದರು. ಆ ವರ್ಷ ಗಯಾನ ಆಮೇಜಾನ್‌ ವಾರಿಯರ್ಸ್ ತಂಡದ ಪರ ಆಡಿದ ಅವರು, 12 ಪಂದ್ಯಗಳಿಂದ ಅವರು 16 ವಿಕೆಟ್‌ಗಳನ್ನು ಪಡೆದಿದ್ದರು. ಆ ಆವೃತ್ತಿಯಲ್ಲಿ ಸಿಪಿಎಲ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಆಗಿದ್ದರು.

LEAVE A REPLY

Please enter your comment!
Please enter your name here