ಅವರಾರು ..?

0
205
Tap to know MORE!

ಅಲ್ಲಾ ಬಾನಿಗೆ ನೀಲಿಯ ಬಣ್ಣ ಬಳಿದವರಾರು…?
ಬುವಿಯಗಲ ಹಸಿರ ಹೊದಿಸಿದವರಾರು…?
ಹಕ್ಕಿಗೆ ಹಾರಲು ರೆಕ್ಕೆಯ ಕಟ್ಟಿದವರಾರು…?
ಮೀನಿಗೆ ಈಜ ಕಲಿಸಿದವರಾರು…?
ಅವರನ್ನೊಮ್ಮೆ ನಾನು ನೋಡಬೇಕಿತ್ತು ..
ಅವರೊಂದಿಗೆ ಸ್ವಲ್ಪ ಕೂತು ಮಾತಾಡಬೇಕಿತ್ತು..

ಅಲ್ಲಾ ಅಷ್ಟೊಂದು ಎತ್ತರಕೆ ರವಿಯನ್ನೆಸೆದವರಾರು …?
ಬೆಳದಿಂಗಳ ಚಂದ್ರನೊಳು ಬಸಿದವರಾರು…?
ಬಾನಗಲ ತಾರೆಗಳ ತೂಗಿದವರಾರು…?
ಬುವಿಯಗಲ ಮಳೆಯ ಸುರಿವವರಾರು…?
ಅವರನ್ನೊಮ್ಮೆ ನಾನು ನೋಡಬೇಕಿತ್ತು..
ಅವರೊಂದಿಗೆ ಸ್ವಲ್ಪ ಕೂತು ಮಾತಾಡಬೇಕಿತ್ತು..

ಅಲ್ಲಾ ಚಿಪ್ಪಿನೊಳಂದದ ಮುತ್ತನಿಟ್ಟವರಾರು….
ಬತ್ತದೊಳನ್ನದ ತುತ್ತನಿಟ್ಟವರಾರು…?
ಹಣ್ಣಿನೊಳು ಸಿಹಿಯನ್ನಿಟ್ಟವರಾರು…?
ಹೆಣ್ಣಿನೊಳು ಸದ್ಗುಣಗಳ ಒಟ್ಟಿದವರಾರು…?
ಅವರನ್ನೊಮ್ಮೆ ನಾನು ನೋಡಬೇಕಿತ್ತು..
ಅವರೊಂದಿಗೆ ಸ್ವಲ್ಪ ಕೂತು ಮಾತಾಡಬೇಕಿತ್ತು..

ಅಲ್ಲಾ ಇದೆಲ್ಲವ ಮಾನವ ಮಾಡಲು ಸಾಧ್ಯವೆ…?
ಇಲ್ಲಾ ಪ್ರಕೃತಿಯೇ ತನ್ನನ್ನು ಹೀಗೆಲ್ಲ ರೂಪಿಸಿಕೊಂಡಿರಬಹುದೆ…?
ನೋಡುವುದಾದರೆ ದೇವರನ್ನೇ ನೋಡಬೇಕೆನೊ..?
ಕೇಳುವುದಾದರೆ ಅವನ ಬಳಿಯೇ ಹೋಗಬೇಕೆನೊ..?

ನಯನ್ ಕುಮಾರ್
ವಿ. ವಿ. ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here