ಅಶ್ಲೀಲ ಚಿತ್ರ ನಿರ್ಮಾಣ ಆರೋಪದಡಿಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಪೊಲೀಸ್ ಕಸ್ಟಡಿಗೆ

0
1497
Tap to know MORE!

ಮುಂಬೈ; ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿರುವ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಅವರನ್ನು ಇಂದು ಮಂಗಳವಾರ ಎಸ್ಪ್ಲನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜುಲೈ 23ರ ವರೆಗೂ ರಾಜ್ ಕುಂದ್ರ ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ನಿನ್ನೆ (ಜುಲೈ 19) ರಾತ್ರಿ ರಾಜ್ ಕುಂದ್ರ ಅವರನ್ನು ಬಂಧಿಸಿದ ಬಳಿಕ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರೇಲ್ ಈ ಬಗ್ಗೆ ಖಚಿತ ಪಡಿಸಿದ್ದರು. ರಾಜ್ ಕುಂದ್ರ ವಿರುದ್ಧ ಅಗತ್ಯ ಸಾಕ್ಷ್ಯ ಇದ್ದ ಕಾರಣ ಅವರನ್ನು ಬಂಧಿಸಲಾಗಿದೆ” ಎಂದಿದ್ದರು.

‘ನೀಲಿ ಚಿತ್ರಗಳನ್ನು ಚಿತ್ರೀಕರಿಸಿ ಅವುಗಳನ್ನು ವಿದೇಶಿ ಸರ್ವರ್‌ಗಳನ್ನು ಬಳಸಿ ಮೊಬೈಲ್‌ ಆಪ್‌ಗಳಿಗೆ ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಬಗ್ಗೆ ಇದೇ ಫೆಬ್ರವರಿಯಲ್ಲಿ ಮುಂಬೈ ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕ್ರೈಂ ಬ್ರ್ಯಾಂಚ್ ಮಾಡಿದ್ದು, ಪ್ರಕರಣದ ಮುಖ್ಯ ರೂವಾರಿಯಾದ ರಾಜ್ ಕುಂದ್ರಾ ಅನ್ನು ಬಂಧಿಸಲಾಗಿದೆ” ಎಂದಿದ್ದರು.

LEAVE A REPLY

Please enter your comment!
Please enter your name here