ಮಹಿಳೆಯೊಂದಿಗೆ ಅಸಭ್ಯ ವರ್ತನೆ – ಗ್ರಾಮಸ್ಥರಿಂದಲೇ ಥಳಿತ

0
202
Tap to know MORE!

ಕೊಪ್ಪಳ, ಸೆ.16: ಮಹಿಳೆಯೊಂದಿಗೆ ಅನುಚಿತವಾಗಿ, ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಗ್ರಾಮಸ್ಥರೇ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ನಡೆದಿದೆ. ಕುಕನೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ ಹನುಮಂತಪ್ಪನೇ ಥಳಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ.

ಮದ್ಯದ ನಶೆಯಲ್ಲಿ ಹನುಮಮಂತಪ್ಪ ತಳಕಲ್ ಗ್ರಾಮದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದ ಕಾರಣ ಗ್ರಾಮಸ್ಥರು ಥಳಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ ಹನುಮಂತಪ್ಪನ ಕೈ ಕಾಲು ಕಟ್ಟಿ ಹಿಮ್ಮುಖವಾಗಿ ಮಲಗಿಸಿ ನಡು ರಸ್ತೆಯಲ್ಲಿ ಮನಬಂದಂತೆ ಥಳಿಸಿದ್ದಾರೆ. ಹನುಮಂತಪ್ಪನಿಗೆ ಥಳಿಸುತ್ತಿರುವ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.

ಇನ್ನೊಂದು ವಿಡಿಯೋದಲ್ಲಿ ತಳಕಲ್ ಗ್ರಾಮಸ್ಥರು ಸತ್ಯ ಒಪ್ಪಿಕೋ ಎಂದು ಹೇಳುತ್ತಿದ್ದರೆ, ಆರೋಪಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾನೆ. ಕೊನೆಗೆ ಗ್ರಾಮಸ್ಥರು ಆರೋಪಿ ಹನುಮಂತಪ್ಪನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸದ್ಯ ಹನುಮಂತಪ್ಪನು ನ್ಯಾಯಾಂಗ ಬಂಧನದಲ್ಲಿದ್ದಾನೆ.

LEAVE A REPLY

Please enter your comment!
Please enter your name here