ಅಹಮದಾಬಾದ್ ಆರ್ ಟಿ ಒ ವಿರುದ್ಧ ಆಟೋ ಚಾಲಕರ ಆಕ್ರೋಶ

0
134
Tap to know MORE!

ಕೊರೋನಾ ಸೋಂಕಿನ ಭಯದಿಂದ ಬಹುತೇಕರು ಆಟೋ ರಿಕ್ಷಾ ಮಾತ್ರವಲ್ಲ ಸಾರ್ವಜನಿಕ ವಾಹನವನ್ನು ಬಳಸುತ್ತಿಲ್ಲ. ಹೀಗಾಗಿ ಆಟೋ ಚಾಲಕರಿಗೆ ಬಾಡಿಗೆಯೂ ಇಲ್ಲ, ಇತ್ತ ಕೊರೋನಾ ಭಯವೂ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಹಮ್ಮದಾಬಾದ್ ಸಾರಿಗೆ ಇಲಾಖೆ ಆಟೋ ಚಾಲಕರಿಗೆ ಖಾಕಿ ಬದಲು ನೀಲಿ ಬಣ್ಣದ ಸಮವಸ್ತ್ರ ಕಡ್ಡಾಯ ಮಾಡಿದೆ. ಧಿಡೀರ್ ಆಗಿ ಖಾಕಿ ಸಮವಸ್ತ್ರ ಬದಲು ನೀಲಿ ಸಮವಸ್ತ್ರ ಕಡ್ಡಾಯ ಮಾಡಿದ RTO ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅಹಮ್ಮದಾಬಾದ್ ನ ಆಟೋ ಚಾಲಕ ವಿಜಯ್ ಜಾಧವ್ ಕಳೆದ 15 ವರ್ಷಗಳಿಂದ ನಗರದಲ್ಲಿ ಆಟೋ ಚಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಂದಿಯ ಜೀವನ ಇದೇ ರಿಕ್ಷಾ ಚಾಲನೆಯಲ್ಲೇ ಸಾಗುತ್ತಿದೆ. ಕೊರೋನಾ ವೈರಸ್ ವಕ್ಕರಿಸುವು ಮೊದಲು ಪ್ರತಿ ದಿನ ಸರಾಸರಿ 400 ರೂಪಾಯಿ ದುಡಿಯುತ್ತಿದ್ದೆ. ಆದರೆ ಕೊರೋನಾ ಬಳಿಕ ಇದೀಗ ದಿನಕ್ಕೆ 50 ರೂಪಾಯಿ ದುಡಿಯುವುದು ಕಷ್ಟವಾಗಿದೆ. ವಾರದಲ್ಲಿ 2 ದಿನ ಲಾಕ್‌ಡೌನ್, ಇನ್ನೆರಡು ದಿನ ದುಡಿಮೆ ಇಲ್ಲ. ಹೀಗೆ ಒಂದು ವಾರದಲ್ಲಿ 100 ರಿಂದ 150 ರೂಪಾಯಿ ಮಾತ್ರ ಸಿಗುತ್ತಿದೆ. ಇದರ ನಡುವೆ ನೀಲಿ ಸಮವಸ್ತ್ರ ಎಲ್ಲಿಂದ ಖರೀದಿಸಲಿ ಎಂದು ಅಳಲು ತೋಡಿಕೊಂಡಿದ್ದಾರೆ.

ಯಾವುದೇ ಬಣ್ಣದ ಸಮವಸ್ತ್ರ ಧರಿಸಲು ಯಾವ ಆಟೋ ರಿಕ್ಷಾ ಚಾಲಕರಿಗೂ ವಿರೋಧವಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಮವಸ್ತ್ರ ಖರೀದಿ ಅಸಾಧ್ಯ. ಕನಿಷ್ಠ 3 ಜೊತೆ ಸಮವಸ್ತ್ರ ಅಗತ್ಯವಿದೆ. ಇದಕ್ಕೆ 1000 ರೂಪಾಯಿ ತಗುಲಲಿದೆ. ವಾರಕ್ಕೆ 200 ರೂಪಾಯಿ ದುಡಿಯವ ಆಟೋ ಚಾಲಕರು ಇದೀಗ 1000 ರೂಪಾಯಿ ಖರ್ಚು ಮಾಡಿ ಸಮವಸ್ತ್ರ ಖರೀದಿಸಬೇಕೋ ಅಥವಾ ನಮ್ಮ ಕುಟುಂಬಕ್ಕೆ ತುತ್ತು ಅನ್ನ ನೀಡಬೇಕೋ ಎಂಬ ಗೊಂದಲದಲ್ಲಿದ್ದಾರೆ.

LEAVE A REPLY

Please enter your comment!
Please enter your name here