ಆನ್ಲೈನ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದ ಆಂಧ್ರ ಸರ್ಕಾರ!

0
127
Tap to know MORE!

ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ಆನ್​​​ಲೈನ್​​ ಗೇಮ್ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆನ್‌ಲೈನ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನ ಅಂಗೀಕರಿಸಿದೆ.

ಆನ್​​ಲೈನ್ ಆಟದಿಂದ ಯುವ ಸಮೂಹ ಬಲಿಯಾಗುತ್ತಿರುವುದನ್ನ ಗಂಭೀರವಾಗಿ ಪರಿಗಣಿಸಿ ಆಂಧ್ರಪ್ರದೇಶ ಗೇಮಿಂಗ್​​​​ ತಿದ್ದುಪಡಿ ಕಾಯ್ದೆ-2020ನ್ನು ಅಂಗೀಕರಿಸಲಾಗಿದೆ ಅಂತಾ ಆಂಧ್ರ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ಆನ್​​ಲೈನ್ ಗೇಮ್‌ಗಳಿಂದ ರಾಜ್ಯದಲ್ಲಿ ಕ್ರೈಮ್ ಹೆಚ್ಚಾಗ್ತಿದೆ.,ಗ್ಯಾಂಬ್ಲಿಂಗ್ ಕೂಡಾ ನಡೆಯುತ್ತಿದೆ. ಅಷ್ಟೇ ಅಲ್ಲದೆ ಕೆಲವು ಗೇಮಿಂಗ್ ವೆಬ್​​​​ಸೈಟ್​​ಗಳಿಂದ ಆಂತರಿಕ ಭದ್ರತೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಬ್ಯಾನ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here