ಹೊಸದಿಲ್ಲಿ: ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ದೇಶೀಯ ವಿಮಾನ ಯಾನ ಮತ್ತೆ ಆರಂಭವಾಗಿದ್ದರೂ ರೈಲುಗಳ ಸಂಚಾರ ಸದ್ಯಕ್ಕಂತೂ ಆರಂಭವಾಗುವ ಲಕ್ಷಣ ಇಲ್ಲ. ಏಪ್ರಿಲ್ 14ರ ವರೆಗೆ ಕಾದಿರಿಸಲಾಗಿರುವ ಎಲ್ಲ ಟಿಕೆಟ್ಗಳ ಮೊತ್ತವನ್ನು ಮರು ಪಾವತಿ ಮಾಡುವಂತೆ ತನ್ನ ಎಲ್ಲಾ ವಲಯಗಳಿಗೂ ರೈಲ್ವೆ ಇಲಾಖೆ ಸುತ್ತೋಲೆ ಕಳಿಸಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ.
120 ದಿನಗಳ ಮುಂಚಿತವಾಗಿ ಟಿಕೆಟ್ ಕಾದಿರಸಲು ಇತ್ತೀಚೆಗಷ್ಟೇ ರೈಲ್ವೆ ಇಲಾಖೆ ಅನುಮತಿ ನೀಡಿತ್ತು. ಆದರೆ ಸೋಮವಾರ ಎಲ್ಲ ವಲಯಗಳಿಗೂ ಟಿಕೆಟ್ ಗಳ ಎಲ್ಲ ಮೊತ್ತವನ್ನು ಮರುಪಾವತಿ ಮಾಡುವಂತೆ ಸೂಚಿಸಿದೆ. ಜತೆಗೆ ರೈಲು ಸಂಚಾರ ರದ್ದಾದೊಡನೆ ತನ್ನಿಂತಾನೇ ಟಿಕೆಟ್ ಮೊತ್ತ ಮರುಪಾವತಿಯಾಗುತ್ತದೆ ಎಂದು ಪ್ರಯಾಣಿಕರಿಗೆ ತಿಳಿಸಿದೆ.