ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಭಾರತದ ಕೊರೋನಾ ಲಸಿಕೆ

0
168
Tap to know MORE!

ನವದೆಹಲಿ(ಜು.04): ಮಾರಕ ಕೋವಿಡ್-19 ವೈರಸ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಇದಕ್ಕಾಗಿ ಲಸಿಕೆ ಕಂಡು ಹಿಡಿಯಲು ಜಗತ್ತಿನ ಬಹುತೇಕ ದೇಶಗಳು ಪ್ರಯತ್ನಿಸುತ್ತಲೇ ಇವೆ. ಹೀಗೆ ಲಸಿಕೆಗಾಗಿ ಪ್ರಯತ್ನಿಸುತ್ತಿರುವ ದೇಶಗಳ ಪೈಕಿ ಭಾರತವೂ ಒಂದು. ಹೀಗಿರುವಾಗಲೇ ಕೊನೆಗೂ ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ಕೊರೋನಾಗೆ ಸ್ವದೇಶಿ ಲಸಿಕೆ ಕಂಡು ಹಿಡಿದಿದೆ. ದೇಶದ ಮೊದಲ ಕೋವಿಡ್-19 ವೈರಸ್ ಲಸಿಕೆ “ಕೋವಾಕ್ಸಿನ್” ಇದಾಗಿದೆ. ಭಾರತದಲ್ಲಿ ಮಾನವ ಪ್ರಯೋಗವು ಯಶಸ್ವಿಯಾದರೆ, ಇದೇ ಆಗಸ್ಟ್ 15ನೇ ತಾರೀಕಿನಂದು ಈ ಔಷಧಿಯನ್ನು ಬಿಡುಗಡೆ ಮಾಡಲು ಯೋಚಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ) ಸಹಯೋಗದೊಂದಿಗೆ ಭಾರತ್ ಬಯೋಟೆಕ್​​ ಕಂಪನಿ ಈ ಲಸಿಕೆ ತಯಾರಿಸಿದೆ. ಇದೀಗ ಐಸಿಎಂಆರ್​​ ಮತ್ತು ಭಾರತ್ ಬಯೋಟೆಕ್​ ಕಂಪನಿ​​​​ ಆಗಸ್ಟ್​ 15ರಂದು ಕೊರೋನಾಗೆ ಔಷಧ ಬಿಡುಗಡೆ ಮಾಡಲು ಮುಂದಾಗಿವೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್​​, ಹ್ಯೂಮನ್​​ ಕ್ಲಿನಿಕ್ ಪ್ರಯೋಗಗಳನ್ನು ನಡೆಸಿದ ಬಳಿಕವೇ ಮಾರಕ ಕೊರೋನಾಗೆ ಭಾರತದ ಲಸಿಕೆ ಸಿದ್ಧಪಡಿಸಲಾಗಿದೆ. ಈ ಲಸಿಕೆ ಇದೇ ಆಗಸ್ಟ್ 15ನೇ ತಾರೀಕಿನಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಭಾರತ ತಯಾರಿಸಿದ ಮೊದಲ ಕೊರೋನಾ ಲಸಿಕೆ ಇದಾಗಿದೆ. ಪುಣೆ ವೈರಾಲಜಿ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಈ ಲಸಿಕೆ ಅಭಿವೃದ್ಧಿಗೆ ಜಂಟಿಯಾ

LEAVE A REPLY

Please enter your comment!
Please enter your name here