ತನ್ನ ಹೆಸರಿನಲ್ಲಿಯೇ “ಆಜಾದ್” ಪದ ಸೇರಿಸಿಕೊಂಡ ಕ್ರಾಂತಿಕಾರಿ ಚಂದ್ರಶೇಖರ್

0
205
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿ ಎಂದಾಗ ತಕ್ಷಣಕ್ಕೆ ನೆನಪಿಗೆ ಬರುವ ವ್ಯಕ್ತಿ ಚಂದ್ರಶೇಖರ ಆಜಾದ್. ಸಾಯುವ ಕೊನೆಯ ಕ್ಷಣದವರೆಗೂ ಬಂದೂಕುಧಾರಿಯಾಗಿದ್ದುಕೊಂಡು, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿ ಮೆರೆದು ಮಡಿದ ಆಜಾದ್ ಭಾರತೀಯ ಕ್ರಾಂತಿ ಪರಂಪರೆಯ ಅದಮ್ಯ ಚೇತನ.

ಚಂದ್ರಶೇಖರ ಆಜಾದ್ 1906 ಜುಲೈ 23 ರಂದು ಮಧ್ಯಪ್ರದೇಶದ ಭಾನ್ವರ ಹಳ್ಳಿಯಲ್ಲಿ ಪಂಡಿತ್ ಸೀತಾರಾಮ್ ತಿವಾರಿ ಮತ್ತು ಜಗ್ರಾಣಿ ದೇವಿ ದಂಪಪಿಗೆ ಜನಿಸಿದರು. ಬಡ ಕುಟುಂಬದಿಂದ ಬಂದ ಅವರು ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೆ ಮುಗಿಸಿದರು. ತಮ್ಮ 14 ನೇ ವಯಸ್ಸಿನಲ್ಲಿ ಅವರು ಸಂಸ್ಕ್ರತ ಕಲಿಯಲು ವಾರಾಣಸಿಗೆ ತೆರಳಿದರು.

ಇದನ್ನೂ ನೋಡಿ: ಆ ಎಳೆ ಮನಸ್ಸಿನಲ್ಲಿತ್ತು ಭಾರತ ಮಾತೆಯನ್ನು ಬಂಧಮುಕ್ತಗೊಳಿಸುವ ಕನಸು !

1919 ರ ಎಪ್ರಿಲ್ 13 ರಂದು ಬ್ರಿಟಿಷ್ ಸರ್ಕಾರದ ರೌಲಟ್ ಕಾಯ್ದೆಯನ್ನು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಸಾವಿರಾರು ಜನ,ಮಕ್ಕಳು ಆ ನರಮೇಧದಲ್ಲಿ ಜೀವ ಕಳೆದುಕೊಂಡಿದ್ದರು. ಬ್ರಿಟಿಷರ ಈ‌ ಬರ್ಬರ ಕೃತ್ಯದಿಂದ ತರುಣ ಚಂದ್ರಶೇಖರ್ ಗೆ ರಕ್ತ ಕುದಿಯುತ್ತಿತ್ತು.ಬ್ರಿಟಿಷರನ್ನು ಭಾರತದಿಂದ ತೊಲಗಿಸುವ ಸಂಕಲ್ಪವನ್ನು ಅವರು ತೊಟ್ಟರು.

1921ರ ವೇಳೆಗೆ ಇಡೀ ದೇಶ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದುನಿಂತಿತ್ತು. ಆಜಾದ್ ಕ್ರಾಂತಿಕಾರಿ ಶೈಲಿಯ ಸ್ವಾತಂತ್ರ್ಯ ಹೋರಾಟಕ್ಕಿಳಿದರು. ಅವರು ದೇಶಕ್ಕಾಗಿ ಮಾಡು ಇಲ್ಲವೇ ಮಡಿ ಕಾಳಗ ನಡೆಸುವ ಕನಸು ಕಾಣುತ್ತಿದ್ದರು. ಅವರು 15ನೇ ವಯಸ್ಸಿ‌ನಲ್ಲೇ ತಮ್ಮ ಮೊದಲ ಶಿಕ್ಷೆ ಅನುಭವಿಸಿದ್ದರು. ಕ್ರಾಂತಿಕಾರಿ ಚಟುವಟಿಕೆಯಲ್ಲಿ‌ ತೊಡಗಿದ್ದಾಗ ಚಂದ್ರಶೇಖರ್ರನ್ನು ಬಂಧಿಸಲಾಗಿತ್ತು.ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟರು ನಿನ್ನ ಹೆಸರೇನು ಎಂದು ಕೇಳಿದಾಗ ಅವರು ದಿಟ್ಟವಾಗಿ ಆಜಾದ್ ಎಂದು ಘೋಷಿಸಿದರು. ಅವರಿಗೆ 15 ಛಡಿ ಏಟಿನ ಶಿಕ್ಷೆ ವಿಧಿಸಲಾಯಿತು. ಪ್ರತಿ ಬಾರಿ ಏಟು ಬಿದ್ದಾಗಲೂ ಅವರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಿದ್ದರು.

ಅಸಹಕಾರ ಚಳುವಳಿಯಲ್ಲಿ ಆಜಾದ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಚೌರಿ- ಚೌರ ನರಮೇಧದ ಬಳಿಕ ಗಾಂಧೀಜಿ ಏಕಾಏಕಿ ಚಳುವಳಿ ಸ್ಥಗಿತಗೊಳಿಸಿದಾಗ ಆಜಾದ್ ಹತಾಶೆಗೊಂಡರು. ಈ ಸಂದರ್ಭದಲ್ಲಿ ಅವರು ಶಚೀಂದ್ರನಾಥ ಸನ್ಯಾಲ್ ಆರಂಭಿಸಿದ್ದ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್‌ನ ಸಂಪರ್ಕಕ್ಕೆ ಬಂದರು .ಅಲ್ಲಿ ಅವರಿಗೆ ಕೆಲವು ಪ್ರಮುಖ ಕ್ರಾಂತಿಕಾರಿಗಳ ಪರಿಚಯವಾಯಿತು. ರಾಮ್ ಪ್ರಸಾದ್ ಬಿಸ್ಮಾಯಿಲ್ ಅವರಲೊಬ್ಬರು ಆಜಾದ್ ಮತ್ತು ಬಿಸ್ಮಾಯಿಲ್ ಗಳಸ್ಯಕಂಠಸ್ಯ ಸ್ನೇಹಿತರಾದರು.

ಅಜಾದ್ ಅನೇಕ ಯುವಕರನ್ನು ಎಚ್ ಆರ್ ಎ ಗೆ ಕರೆತಂದರು. ಅವರಲ್ಲಿ ಅನೇಕರು ಬಡಗಿಗಳು ಅಕ್ಕ ಸಾಲಿಗಳು ಮತ್ತು ಕುಲುಮೆಯಲ್ಲಿ ಕೆಲಸ ಮಾಡುವಂಥ ಕುಶಲಕರ್ಮಿಗಳಾಗಿದ್ದರು. ಅವರೆಲ್ಲಾ ಕ್ರಾಂತಿಕಾರಿಗಳಿಗಾಗಿ ಆಯುಧವನ್ನು ಸಿದ್ದಪಡಿಸುತ್ತಿದ್ದರು.

ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಣದ ಅಗತ್ಯ ಬಹಳವಾಗಿತ್ತು ಹಾಗಾಗಿ 1925ರ ಆಗಸ್ಟ್ 9 ರಂದು ಬಿಸ್ಮಾಯಿಲ್ ,ಆಜಾದ್ ಮತ್ತು ಇತರ 8 ಕ್ರಾಂತಿಕಾರಿಗಳು ಹಲವು ರೈಲ್ವೇ ನಿಲ್ದಾಣಗಳಿಂದ ಹಣ ತುಂಬಿಕೊಂಡು ಲಖ್ನೌಗೆ ತೆರಳುತ್ತಿದ್ದ ರೈಲನ್ನೇರಿದರು .ರೈಲು ಕಾಕೋರಿ ನಿಲ್ದಾಣ ಸಮೀಪಿಸುತ್ತಿರುವಂತೆಯೇ ಚೈನ್ ಎಳೆದು ರೈಲು ನಿಲ್ಲಿಸಿದ ಕ್ರಾಂತಿಕಾರಿಗಳು ಹಣ ಲೂಠಿ ಮಾಡಿ ಕಾಡಿನಲ್ಲಿ ಓಡಿದರು .ನಂತರ ಆ ಪೈಕಿ ಬಿಸ್ಮಾಯಿಲ್ ಸೇರಿ ಬಹುತೇಕ ಮಂದಿಯನ್ನು ಪೋಲಿಸರು ಬಂಧಿಸಿದರು .ಆಜಾದ್ ಮಾತ್ರ ತಪ್ಪಿಸಿಕೊಂಡರು ಬಿಸ್ಮಾಯಿಲ್ ಮತ್ತಿತರರಿಗೆ ನೇಣು ಹಾಕಲಾಯಿತು. ಆಜಾದ್ ತನ್ನ ನೆಚ್ಚಿನ ಬಂಟರನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂದು ಕೊರಗಿದರು.

ಝಾನ್ಸಿಯಿಂದ 15 ಕಿ.ಮೀ ದೂರದ ಓರ್ಚ್ ಕಾಡಿನ ಸತಾರ್ ನದಿ ದಂಡೆಯ ಮೇಲೆ ಹನುಮಂತನ ದೇವಾಸ್ಥಾನದ ಬಳಿ ಆಜಾದ್ ಗುಡಿಸಲೊಂದನ್ನು ನಿರ್ಮಿಸಿ ಅಲ್ಲಿ ಪಂಡಿತ್ ಹರಿಶಂಕರ ಬ್ರಹ್ಮಚಾರಿ ಹೆಸರಿನಲ್ಲಿ ಮಾರುವೇಷದಲ್ಲಿ ವಾಸಿಸಲು ತೊಡಗಿದರು. ಅವರು ಹತ್ತಿರದ ಧಿಮಾರಪುರ ಹಳ್ಳಿಯ ಮಕ್ಕಳಿಗೆ ಪಾಠ ಹೇಳುತ್ತಿದ್ದರು .ಸ್ಥಳಿಯರ ವಿಶ್ವಾಸವನ್ನು ಅವರು ಗಳಿಸಿಕೊಂಡರು ಧಿಮಾರಪುರ ಹಳ್ಳಿಗೆ ಈಗ ಆಜಾದ್‌ ಪುರ ಎಂದೇ ಹೆಸರಿಡಲಾಗಿದೆ.

1928 ರಲ್ಲಿ ಸೈಮನ್ ಕಮೀಷನ್ ವಿರುದ್ದ ದೇಶವ್ಯಾಪಿ ಪ್ರತಿಭಟನೆಗಳು ನಡೆದವು ಲಹೋರ್ನಲ್ಲಿ ಲಾಲಾ ಲಜಪತ್ ರಾಯ್ ಹೋರಾಟದ ನೇತೃತ್ವ ವಹಿಸಿದ್ದರು.ಪೋಲಿಸರು ಪ್ರತಿಭಟನಾಕಾರರನ್ನು ಅಮಾನವೀಯವಾಗಿ ಹೊಡೆದರು .ಲಾಲಾಜಿ ಅವರಿಗೆ ಗಂಭೀರವಾಗಿ ಪೆಟ್ಟುಬಿತ್ತು ಹಾಗೂ ಅವರು ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆದರು.ಆಜಾದ್, ಭಗತ್ ಸಿಂಗ್ ಮತ್ತು ರಾಜಗುರು ಸಹಾಯಕ ಪೋಲಿಸ್ ಅಧಿಕ್ಷಕ ಜೆ.ಪಿ ಸ್ಯಾಂಡರ್ಸ್ ಹತ್ಯೆ ಮಾಡುವ ಮೂಲಕ ಸೇಡು ತೀರಿಸಿಕೊಂಡರು.

ಆಜಾದ್ಗೆ ತಮ್ಮ ಗುಂಪಿನಲ್ಲೇ ವಂಚಕನೊಬ್ಬ ಇರುವುದು ತಿಳಿದಿರಲ್ಲಿಲ್ಲ .ಎಚ್,ಆರ್,ಎ ಸದಸ್ಯನಾಗಿದ್ದ ವೀರಭದ್ರ ತಿವಾರಿ ಪೋಲಿಸರಿಂದ ಲಂಚ ಪಡೆದು ಆಜಾದ್ ಗೆ ಮೋಸ ಮಾಡಿದ.ಆತ ಆಜಾದ್ರನ್ನು 1931 ಜನವರಿ 27 ರಂದು ಅಲ್ಪ್ರೆಡ್ ಪಾರ್ಕ್ ಗೆ ಕರೆತಂದ .ಕೆಲವೇ ಕ್ಷಣದಲ್ಲಿ ಪೋಲಿಸರು ಆ ಪಾರ್ಕ್ ಸುತ್ತುವರಿದರು ,ಆಜಾದ್ ದಿಟ್ಟವಾಗಿ ತಮ್ಮ ಪಿಸ್ತೂಲಿನಿಂದ ಪೋಲಿಸರನ್ನು ಎದುರಿಸಿದರು .ಆದರೆ,ಅವರ ಬಳಿ ಇದ್ದ ಗುಂಡುಗಳೆಲ್ಲಾ ಖಾಲಿಯಾಗಿದ್ದವು ಅಲ್ಲಿಂದ ತಪ್ಪಿಸಿಕೊಳ್ಳಲು ಯಾವ ಮಾರ್ಗೋಪಾಯಗಳೂ ಇರಲಿಲ್ಲ .ಹಾಗಾಗಿ ಅವರು ಕೊನೆಯ ಗುಂಡನ್ನು ತಮ್ಮ ತಲೆಗೆ ಹೊಡೆದುಕೊಂಡರು ಇದಾದ ಏಳು ದಿನಗಳ ಬಳಿಕ ಭಗತ್ ಸಿಂಗ್ ,ರಾಜಗುರು ಮತ್ತು ಸುಖದೇವ್ ರನ್ನು ಗಲ್ಲಿಗೇರಿಸಲಾಯಿತು.

ಚಂದ್ರಶೇಖರ್ ಆಜಾದ್ ತೀರಾ ಬಡಕುಟುಂಬದಲ್ಲಿ ಜನಿಸಿದರು. ಅವರಿಗೆ ವ್ಯವಸ್ಥಿತ ಶಾಲಾ ಶಿಕ್ಷಣ ಸಿಗಲ್ಲಿಲ್ಲ. ಆದರೆ ಅವರು ವಿವೇಚನೆಯಿಂದ ಹಿಂದೂಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಆರ್ಮಿಯನ್ನು ಮುನ್ನಡೆಸಿದರು. ಬಡ,ಅನಕ್ಷರಸ್ತ ದಬ್ಬಾಳಿಕೆಗೊಳಗಾದ ಭಾರತೀಯ ಸಮುದಾಯ ಸಾಮಾಜಿಕ ಸಮಾನತೆ ಮತ್ತು ಸ್ವತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಹೆಜ್ಜೆಗುರುತುಗಳನ್ನು ನಾವು ಆಜಾದ್ ರ ಜೀವನದಲ್ಲಿ ಕಾಣಬಹುದು.

ಸುರೇಶ್ ರಾಜ್
ವಿ.ವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here