ಆತ್ಮನಿರ್ಭರ ಭಾರತ್ ಆ್ಯಪ್ – ಇನ್ನೋವೇಶನ್ ಚಾಲೆಂಜ್ ಪ್ರಾರಂಭಿಸಿದ ಮೋದಿ

0
187
Tap to know MORE!

ಸ್ಥಳೀಯ ಅಭಿವರ್ಧಕರಿಗೆ (ಡೆವಲಪರ್ಸ್) ಭಾರತೀಯ ಅಪ್ಲಿಕೇಶನ್‌ಗಳನ್ನು ರಚಿಸಲು ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಜುಲೈ 4 ರಂದು ‘ಆತ್ಮನಿರ್ಭರ ಭಾರತ್ ಆ್ಯಪ್ – ಇನ್ನೋವೇಶನ್ ಚಾಲೆಂಜ್’ ಅನ್ನು ಪ್ರಾರಂಭಿಸಿದರು.

ಈ ನವೀನ ಸವಾಲು, ವಿಶ್ವಮಟ್ಟದ ‘ಮೇಡ್ ಇನ್ ಇಂಡಿಯಾ’ ಅಪ್ಲಿಕೇಶನ್‌ಗಳನ್ನು ರಚಿಸಲು, ಟೆಕ್ ಮತ್ತು ಸ್ಟಾರ್ಟ್ಅಪ್ ಸಮುದಾಯಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಈ ಸವಾಲಿನ ಅಡಿಯಲ್ಲಿ, ಎಂಟು ವಿಭಾಗಗಳಲ್ಲಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಅಭಿವರ್ಧಕರನ್ನು ಆಹ್ವಾನಿಸಲಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮತ್ತು ಅಟಲ್ ಇನ್ನೋವೇಶನ್ ಮಿಷನ್-ನೀತಿ ಆಯೋಗ್ ಇದರ ಸಹಭಾಗಿತ್ವದಲ್ಲಿ ಇನ್ನೋವೇಶನ್ ಚಾಲೆಂಜ್ ಅನ್ನು ಪ್ರಾರಂಭಿಸಲಾಗಿದೆ.

ಪ್ರಧಾನಿ ಮೋದಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಆತ್ಮನಿರ್ಭರ ಭಾರತ್ ಆ್ಯಪ್ ಇನ್ನೋವೇಶನ್ ಚಾಲೆಂಜ್ ಪ್ರಾರಂಭಿಸಿದರು. ಈ ಚಾಲೆಂಜ್ ಕುರಿತು ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ.

LEAVE A REPLY

Please enter your comment!
Please enter your name here