ಬಾಲಿವುಡ್ ಗೆ ೨೦೨೦ ತುಂಬಾ ಆಘಾತಕಾರಿಯಾಗಿ ಪರಿಣಮಿಸುತ್ತಿದೆ. ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಬಳಿಕ, ಇದೀಗ ನಾಯಕ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಮುಂಬೈ ಪೊಲೀಸರು ತನಿಖೆಗಾಗಿ ಅವರ ಮನೆಗೆ ತಲುಪಿದ್ದಾರೆ. ವರದಿಗಳ ಪ್ರಕಾರ, ಸುಶಾಂತ್ ಅವರ ಮನೆಯ ಸಿಬ್ಬಂದಿ, ಪೊಲೀಸರಿಗೆ ಕರೆ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾನೆ.
ಕಳೆದ ಎರಡು ತಿಂಗಳುಗಳಲ್ಲಿ ನಿಧನರಾದ ಬಾಲಿವುಡ್ ನ ನಾಲ್ಕನೇ ಪ್ರಸಿದ್ಧ ವ್ಯಕ್ತಿ ಇವರಾಗಿದ್ದಾರೆ. ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಕ್ಯಾನ್ಸರ್ ಗೆ ಬಲಿಯಾಗಿದ್ದರು ಮತ್ತು ಸಾಜಿದ್-ವಾಜಿದ್ ಜೋಡಿಯ ವಾಜಿದ್ ಖಾನ್ ಕೊ,ಓನಾ ಸೋಂಕಿಗೆ ಒಳಗಾಗಿ ಅವರ ನಿಧನವಾಗಿತ್ತು. ಇದೀಗ ಸುಶಾಂತ್ ಸಿಂಗ್ ರ ಸಾವಿನ ಸುದ್ದಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ.
“ಎಂ.ಎಸ್. ಧೋನಿ – ದ ಅನ್ಟೋಲ್ಡ್ ಸ್ಟೋರಿ” ಚಲನಚಿತ್ರದಲ್ಲಿ ಧೋನಿಯ ಪಾತ್ರಕ್ಕೆ ಹಲವಾರು ಪ್ರಶಸ್ತಿಗಳನ್ನು ಗೆದ್ದ ಅತ್ಯಂತ ಪ್ರತಿಭಾವಂತ ನಟನಿಗೆ ಎಲ್ಲಾ ಭಾಗಗಳಿಂದಲೂ ಸಂತಾಪ ಸೂಚಿಸಲಾಗಿದೆ. ಪಿಕೆ ಮತ್ತು ಕೇದಾರನಾಥ ಖ್ಯಾತಿ ಗಳಿಸಿದ ಇತರ ಚಿತ್ರಗಳು.
ಕಳೆದ ಸೋಮವಾರವಷ್ಟೇ ಅವರ ಮಾಜಿ ವ್ಯವಸ್ಥಾಪಕಿ, ದಿಶಾ ಸಾಲಿಯನ್, ಮುಂಬೈನ ತನ್ನ ಅಪಾರ್ಟ್ಮೆಂಟ್ ನ 14 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಇದೀಗ ಸುಶಾಂತ್ ಸಾವು ಸಂಭವಿಸಿದೆ.
[…] ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಅದು ಆತ್ಮಹತ್ಯೆಯೋ ಕೊಲೆಯೋ ಎಂಬ […]