ಬಾವಿಗೆ ಹಾರಿ ‘ನೀಟ್’ ವಿದ್ಯಾರ್ಥಿ ಆತ್ಮಹತ್ಯೆ!

0
205
Tap to know MORE!

ತಮಿಳುನಾಡಿನ ಅರಿಯಲೂರು ಜಿಲ್ಲೆಯ ವಿದ್ಯಾರ್ಥಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಯು ಭಾನುವಾರ ನೀಟ್ ಪರೀಕ್ಷೆ ಬರೆಯಬೇಕಿತ್ತು.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬಗ್ಗೆ ಭಯ ಮತ್ತು ಆತಂಕದಲ್ಲಿ ವಿಘ್ನೇಶ್ (19) ಈ ಹೆಜ್ಜೆ ಇಟ್ಟಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ವಿಶ್ವನಾಥನ್ ಹೇಳಿದ್ದಾರೆ. ಇದುವರೆಗೂ ಯಾವುದೇ ಆತ್ಮಹತ್ಯೆಯ ಪತ್ರ ಪತ್ತೆಯಾಗಿಲ್ಲ.

ನೀಟ್ ಪರೀಕ್ಷೆ ಭೀತಿ – ವಿದ್ಯಾರ್ಥಿನಿ ಆತ್ಮಹತ್ಯೆ!

ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ರಾಜಕೀಯ ಪಕ್ಷಗಳು, ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ಮನವಿಯನ್ನು ಮತ್ತೊಮ್ಮೆ ಮುಂದಿಟ್ಟಿದ್ದಾರೆ.

ಈ ಹಿಂದಿನ ಎರಡು ಪ್ರಯತ್ನಗಳಲ್ಲಿ ವಿಘ್ನೇಶ್, ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲರಾಗಿದ್ದಾರೆ ಮತ್ತು ಈ ಬಾರಿ ಕೊರೋನಾ ಭೀತಿಯಿಂದಾಗಿ ಮುಂದೂಡಲಾಗಿದ್ದ ಪರೀಕ್ಷೆಯನ್ನು ಎದುರಿಸಲು ಆತಂಕದಲ್ಲಿದ್ದರು ಎಂದು ಅವರ ತಂದೆ ಹೇಳಿದರು. 19 ವರ್ಷದ ಬಾಲಕನ ದೇಹವು ಬಾವಿಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಕಂಡುಬಂದಿದೆ.

“ನಿನ್ನೆ, ನಾವು ಹೊಸ ಬಟ್ಟೆಗಳನ್ನು ಖರೀದಿಸಲು ಅವನನ್ನು ಕರೆದುಕೊಂಡು ಹೋದೆವು. ಸಂಜೆ 5.30 ರ ಸುಮಾರಿಗೆ ನಾವು ದೇವಸ್ಥಾನಕ್ಕೆ ಹೋಗಿ, ಬಳಿಕ ಮನೆಗೆ ಹಿಂತಿರುಗಿದೆವು. ನಂತರ ಅವನು ರಾತ್ರಿ 9 ರವರೆಗೆ ಅಧ್ಯಯನ ಮಾಡಿ ನಿದ್ರೆಗೆ ಜಾರಿದನು. ಸಾಮಾನ್ಯವಾಗಿ, ಬೆಳಿಗ್ಗೆ 4 ಗಂಟೆಗೆ ಎದ್ದೇಳಿ, ಅವನು ಅಧ್ಯಯನವನ್ನು ಪ್ರಾರಂಭಿಸುತ್ತಿದ್ದನು. ಇದು ಅವರ ದಿನಚರಿಯಾಗಿತ್ತು. ಆದರೆ ನಾನು ಬೆಳಿಗ್ಗೆ 4.30 ಕ್ಕೆ ಎಚ್ಚರವಾದಾಗ, ನಾನು ಅವನು ಎಲ್ಲಿಯೂ ಕಾಣಲಿಲ್ಲ. ಬೆಳಿಗ್ಗೆ ಸುಮಾರು 9 ಗಂಟೆಗೆ, ಬಾವಿಯ ಬಳಿ ಅವನ ಚಪ್ಪಲಿಗಳನ್ನು ಕಂಡಾಗ , ಬಾವಿಯಲ್ಲಿ ಮೃತದೇಹವೂ ಕಂಡಿತು. ನೀಟ್ ಪರೀಕ್ಷೆಯ ಒತ್ತಡದಿಂದಾಗಿ ಮಗ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ” ಎಂದು ವಿಶ್ವನಾಥನ್ ತಿಳಿಸಿದರು.

ಶವವನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಕಚೇರಿ ತಿಳಿಸಿದೆ. ವಿಘ್ನೇಶ್ ಕಳೆದ ವರ್ಷ ಕೃಷಿ ವಿಜ್ಞಾನದಲ್ಲಿ ತೇರ್ಗಡೆ ಆಗಿದ್ದರು. ಆದರೆ ನೀಟ್ ಅನ್ನು ಪಾಸ್‌ ಮಾಡಲು ಕಷ್ಟಪಟ್ಟು ಅಧ್ಯಯನ ಮಾಡಲು ನಿರ್ಧರಿಸಿದ್ದರು.

LEAVE A REPLY

Please enter your comment!
Please enter your name here