ಆತ್ಮಹತ್ಯೆ ಎಲ್ಲದಕ್ಕೂ ಮಾರ್ಗವಲ್ಲ

0
214
Tap to know MORE!

ಆತ್ಮಬಲ ಇರಬೇಕು ನಿನ್ನೊಳಗೆ ಅನುಜ
ಆತ್ಮಹತ್ಯೆ ಎಲ್ಲದಕ್ಕೂ ಮಾರ್ಗವಲ್ಲ ತಿಳಿ ಮನುಜ
ಸಣ್ಣ ಸಣ್ಣ ನೋವಿಗೂ ಚಿಂತೆಗೂ ಮನ ಹೆದರದಿರಲಿ
ಗಟ್ಟಿತನವೆಂಬುದು ಗುಂಡಿಗೆಯಲ್ಲಿ ಸದಾ ಇರಲಿ

ಸೋತ್ತರು ಗೆಲ್ಲುವ ಭರವಸೆ ಬೇಕು ನಿನಗೆ
ತನು ಕುಗ್ಗದಿರಲು ಧೈರ್ಯ ಸದಾ ಇರಬೇಕು ನಿನ್ನೊಳಗೆ
ಎಲ್ಲದಕ್ಕೂ ಉತ್ತರವಲ್ಲ ಆತ್ಮಹತ್ಯೆ
ನಿನ್ನೊಳಗೆ ನೀನೇ ಪ್ರಶ್ನಿಸು ಸರಿಯೇ ಈ ಆತ್ಮಹತ್ಯೆ?

ದೇವರು ನಮಗಾಗಿ ಕೊಟ್ಟ ಈ ಜನುಮವ ಸಾರ್ಥಕಗೊಳಿಸಿ
ಜೀವನದ ಉದ್ದಕ್ಕೂ ತಾಳ್ಮೆ ಶಾಂತಿ ಧೈರ್ಯ ಮನದಲ್ಲೇ ಬೆಳೆಸಿ
ಸುಮ್ಮನೆ ದಿನವ ಅತೀ ಚಿಂತೆಯಿಂದ ಕಳೆಯಬೇಡ
ಜೀವನದ ಮೌಲ್ಯ ತಿಳಿಯದವನೇ ನಿಜವಾದ ಮೂಡ

ಗಿರೀಶ್ ಪಿ.ಎಂ
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here