ಮೊಬೈಲ್ ಗೇಮ್ಸ್ ಆಡಬೇಡ ಅಂದಿದ್ದಕ್ಕೆ 18ರ ಯುವಕ ಆತ್ಮಹತ್ಯೆ!

0
39

ಬೆಳಗಾವಿ: ಸದಾಕಾಲ ಮೊಬೈಲ್‌ನಲ್ಲಿ ಗೇಮ್  ಆಡುತ್ತಾ ಇರುತ್ತಿದ್ದ ಯುವಕನೊಬ್ಬನಿಗೆ ಆತನ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಅಗಸಗಿಯ 18 ವರ್ಷದ ರಾಜು ಸಿದ್ದಪ್ಪ ಅಜಾನಿ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಸದಾಕಾಲ ಮೊಬೈಲ್ ಗೇಮ್ ನಲ್ಲಿಯೇ ಮಗ್ನನಾಗಿರುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ನೋಡಿ :  ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ – ಕಾರಣ ಅಸ್ಪಷ್ಟ!

ಹೀಗಾಗಿ ಆತನ ತಂದೆ-ತಾಯಿ ಬುದ್ಧಿವಾದ ಹೇಳಿದ್ದು, ಇಷ್ಟಕ್ಕೇ ಮನನೊಂದ ಆತ ಭಾನುವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here