ಆದಾಯ ತೆರಿಗೆ ಮರುಪಾವತಿ ಗಡುವು ವಿಸ್ತರಣೆ

0
168
Tap to know MORE!

ನವದೆಹಲಿ : 2019-20ನೇ ಹಣಕಾಸು ವರ್ಷದ ವೈಯಕ್ತಿಕ ತೆರಿಗೆದಾರರ ರಿಟರ್ನ್ಸ್ ಸಲ್ಲಿಸಲು ನೀಡಿದ್ದ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ತೆರಿಗೆ ಪಾವತಿದಾರರಿಗೆ ನಿರಾಳತೆ ನೀಡಿರುವ ಕೇಂದ್ರ ಸರ್ಕಾರ 2019-20ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ನೀಡಿದ್ದ ಗಡುವನ್ನು 2020ರ ಡಿಸೆಂಬರ್ 31ರ ವರೆಗೆ ಒಂದು ತಿಂಗಳ ಕಾಲ ವಿಸ್ತರಿಸಿದೆ.

‘ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು (ಅಂದರೆ, ಈ ಅಧಿಸೂಚನೆಯ ಅವಧಿ ವಿಸ್ತರಣೆಗೂ ಮುನ್ನ) 2020ರ ಜುಲೈ 31ರ ಅನ್ವಯ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಗಳ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.

ಕರೋನಾ ವೈರಸ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಐಟಿಆರ್ ಸಲ್ಲಿಸಲು ನೀಡಿದ್ದ ಗಡುವನ್ನು 2020ರ ನವೆಂಬರ್ 30ರವರೆಗೆ ವಿಸ್ತರಿಸಿದೆ.

ತೆರಿಗೆದಾರರ ಖಾತೆಗಳಿಗೆ ಲೆಕ್ಕ ಪರಿಶೋಧನೆ ಮಾಡಬೇಕಾದರೆ ಐಟಿಆರ್ ಫೈಲಿಂಗ್ ಗಡುವನ್ನು 2021ರ ಜನವರಿ 31ರವರೆಗೆ ಎರಡು ತಿಂಗಳ ಕಾಲ ವಿಸ್ತರಿಸಲಾಗಿದೆ. “ತೆರಿಗೆದಾರರು (ಅವರ ಪಾಲುದಾರರು ಸೇರಿದಂತೆ) ತಮ್ಮ ಲೆಕ್ಕಪತ್ರಗಳ ಆಡಿಟ್ ಮಾಡಬೇಕಾದ (ಯಾರಿಗೆ ಈ ಅಧಿಸೂಚನೆಯ ಅವಧಿ ವಿಸ್ತರಣೆಯ ಮೊದಲು) ಅಕ್ಟೋಬರ್ 31, 2020ರ ಅನ್ವಯ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ದಿನಾಂಕವನ್ನು 2021ರ ಜನವರಿ 31ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

“ಅಂತಾರಾಷ್ಟ್ರೀಯ/ನಿರ್ದಿಷ್ಟ ದೇಶೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಬೇಕಾದ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇರುವ ಗಡುವು (ಅಂದರೆ, ಈ ಅಧಿನಿಯಮದ ಪ್ರಕಾರ, 2020ರ ನವೆಂಬರ್ 30ರ ಅನ್ವಯ ಅವಧಿ ವಿಸ್ತರಣೆಯಾಗುವ ಮುನ್ನ) 2021ರ ಜನವರಿ 31ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

‘ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗಾಗಿ ತೆರಿಗೆದಾರರು ಹೆಚ್ಚಿನ ಕಾಲಾವಕಾಶ ನೀಡುವ ಉದ್ದೇಶದಿಂದ ಈ ಗಡುವನ್ನು ವಿಸ್ತರಿಸಲಾಗಿದೆ’ ಎಂದು ಸಿಬಿಟಿ ಹೇಳಿದೆ.

ಅಂತಾರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶೀಯ ವಹಿವಾಟಿಗೆ ಸಂಬಂಧಿಸಿದಂತೆ ತೆರಿಗೆ ಲೆಕ್ಕಪರಿಶೋಧನೆ ವರದಿ ಸೇರಿದಂತೆ ವಿವಿಧ ಲೆಕ್ಕಪರಿಶೋಧನಾ ವರದಿಗಳನ್ನು ಅಧಿನಿಯಮದಡಿ ಸಲ್ಲಿಸಲು ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

LEAVE A REPLY

Please enter your comment!
Please enter your name here