ಕೊರೋನಾ ಬಿಕ್ಕಟ್ಟಿನಲ್ಲಿ ಆನ್ಲೈನ್ ಶಿಕ್ಷಣವೇ ಸೂಕ್ತ

0
166
Tap to know MORE!

ಮಕ್ಕಳ ವಿದ್ಯಾಭ್ಯಾಸವು ಪೋಷಕರಿಗೆ ಅತ್ಯಂತ ಪ್ರಮುಖವಾದ ಸಂಗತಿ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಬಯಸುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳು ಮನೆಯಿಂದ ಆಚೆ ಹೋಗುವುದು ಅಥವಾ ಶಾಲಾ ತರಗತಿಯಲ್ಲಿ ಕುಳಿತು ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಆನ್‌ಲೈನ್ ಅಥವಾ ರೆಕಾರ್ಡೆಡ್ ವಿಡಿಯೋಗಳಿಂದ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ. ಇದು ಮಕ್ಕಳಿಗೆ ಹಾಗೂ ಪಾಲಕರಿಗೆ ಒಂದು ಸವಾಲು ಹೌದು. ಅದರಲ್ಲೂ ಹತ್ತು ವರ್ಷಕ್ಕಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣವನ್ನು ಮನೆಯಲ್ಲಿಯೇ ಹೇಳಿಕೊಡುವುದು ಎಂದರೆ ತುಸು ಕಷ್ಟವಾದರೂ ಭಾವನಾತ್ಮಕ ಶಿಕ್ಷಣ ಅಗತ್ಯ ಹಾಗೂ ಅನಿವಾರ್ಯ.

ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಒಂದು ಸವಾಲು. ಮಕ್ಕಳಿಗೆ ದಿನನಿತ್ಯದ ಶಿಕ್ಷಣ ಹಾಗೂ ಸ್ಥಿರತೆಯನ್ನು ಒದಗಿಸಿಕೊಡಬೇಕಾಗುವುದು. ಮಕ್ಕಳಿಗೆ ಆನ್‌ಲೈನ್ ಶಿಕ್ಷಣದ ಜೊತೆಗೆ ಭಾವನಾತ್ಮಕ ಭದ್ರತೆಯ ಅಗತ್ಯವಿರುತ್ತದೆ. ಪಾಲಕರು ಮಕ್ಕಳಿಗೆ ಭಾವನಾತ್ಮಕವಾಗಿ ರಕ್ಷಣೆ ನೀಡಿದಾಗ ಮಕ್ಕಳಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ಜೊತೆಗೆ ಮಕ್ಕಳ ಧನಾತ್ಮಕ ಚಿಂತನೆ ಹೆಚ್ಚುವುದು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಪ್ರಪಂಚದಾದ್ಯಂತ ಕೋವಿಡ್ ಸಮಸ್ಯೆ ಇರುವುದರಿಂದ ಬಹುತೇಕ ರಾಷ್ಟ್ರಗಳಲ್ಲಿ ಮಕ್ಕಳಿಗೆ ಶಾಲೆಯ ಶಿಕ್ಷಣವನ್ನು ಆನ್‌ಲೈನ್ ಮೂಲಕವೇ ನೀಡಲಾಗುತ್ತಿದೆ. ಮನೆಯಿಂದ ಆಚೆ ಬರದೆ ಮನೆಯಲ್ಲಿಯೇ ಕುಳಿತು ದೀರ್ಘ ಸಮಯವನ್ನು ಮಕ್ಕಳು ಕಳೆಯಬೇಕಾಗಿದೆ. ಈ ಸ್ಥಿತಿಯು ಮಕ್ಕಳಿಗೆ ಕಷ್ಟ ಹಾಗೂ ಮಾನಸಿಕವಾಗಿ ಕಿರಿಕಿರಿ ಉಂಟುಮಾಡುವುದು ಸಹಜ. ಅದಕ್ಕಾಗಿ ಪೋಷಕರು ಉತ್ತಮ ವಾತಾವರಣ ಕಲ್ಪಿಸಿದರೆ ಮಕ್ಕಳ ಭವಿಷ್ಯ ಉತ್ತಮಗೊಳ್ಳುವುದು.

ಸ್ವಾತಿ ಸೂರಪ್ಪ ಕುಂಬ್ರ
ತೆಂಕಿಲ -ಪುತ್ತೂರು

LEAVE A REPLY

Please enter your comment!
Please enter your name here