ಆನ್‍ಲೈನ್ ಕ್ಲಾಸ್ ನೋಡುತ್ತಿದ್ದಾಗ ಕುತ್ತಿಗೆಗೆ ಜೋಳಿಗೆ ಬಿಗಿದು ವಿದ್ಯಾರ್ಥಿ ಮೃತ್ಯು

0
203
Tap to know MORE!

ಬೆಂಗಳೂರು: ಆನ್‍ಲೈನ್ ಪಾಠ ಕೇಳುತ್ತಿದ್ದ 5ನೇ ತರಗತಿ ವಿದ್ಯಾರ್ಥಿಯೊಬ್ಬ, ಮನೆಯೊಳಗೆ ಸೀರೆಯಲ್ಲಿ ಕಟ್ಟಿರುವ ಜೋಳಿಗೆಯಲ್ಲಿ ಕುಳಿತು ಏಕಾಏಕಿ ಜಾರಿದ ಪರಿಣಾಮ ಉರುಳು ಕುತ್ತಿಗೆಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ದರ್ಗಾಜೋಗಹಳ್ಳಿಯ ಮಂಜುನಾಥ್ ಅವರ ಪುತ್ರ ವಿಶ್ವಾಸ್(10)ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ತನ್ನ ಸ್ವಂತ ಮಗಳನ್ನೇ ಕೊಲೆ ಮಾಡಿದ ಅಪ್ಪ!

ವಿಶ್ವಾಸ್ ಇಲ್ಲಿನ ಕೊಡಿಗೆಹಳ್ಳಿಯ ಸಹ್ಯಾದ್ರಿ ಶಾಲೆಯಲ್ಲಿ 5ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಶುಕ್ರವಾರ ವಿಶ್ವಾಸ್, ಮನೆಯ ಕೋಣೆಗೆ ಹೋಗಿ ಕಟ್ಟಲಾಗಿದ್ದ ಜೋಳಿಗೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಆನ್‍ಲೈನ್ ಪಾಠ ಕೇಳುತ್ತಿದ್ದ. ಈ ಸಂದರ್ಭದಲ್ಲಿ ಏಕಾಏಕಿ ಜಾರಿದ ಪರಿಣಾಮ ಜೋಳಿಗೆ ಉರುಳು ಕುತ್ತಿಗೆಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here