ಅತ್ಯಾಚಾರಿಗಳನ್ನು ಅವಮಾನಗೊಳಿಸಲು ಹೊಸ “ಆಪರೇಷನ್” ಜಾರಿಗೆ ತರಲು ಮುಂದಾದ ಯೋಗಿ ಸರ್ಕಾರ

0
193
Tap to know MORE!

ಲಖನೌ: ಉತ್ತರ ಪ್ರದೇಶ ಸರ್ಕಾರವು ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಅಪರಾಧಗಳನ್ನು ಎಸಗುವ ತಪ್ಪಿತಸ್ಥರನ್ನು ಗುರಿಯಾಗಿಸೀ ಹೊಸ ‘ಆಪರೇಷನ್’ ಜಾರಿಗೆ ತರಲು ಮುಂದಾಗಿದೆ.

ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಹಿಡಿಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಆಪರೇಷನ್ ದುರಾಚಾರಿ’ಯನ್ನು ಜಾರಿಗೆ ತರಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ನೋಡಿ : ಉತ್ತರ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ

ಇನ್ನು ಮುಂದೆ, ಮಹಿಳೆಯರ ಮೇಲಿನ ಅಪರಾಧವೆಸಗುವ ತಪ್ಪಿತಸ್ಥರು ಮತ್ತು ಲೈಂಗಿಕ ಸಂಬಂಧಿತ ಅಪರಾಧ ಪ್ರಕರಣಗಳನ್ನೆಸಗುವ ಅಪರಾಧಿಗಳ ಪೋಸ್ಟರ್‌ಗಳನ್ನು ಉತ್ತರ ಪ್ರದೇಶದ ರಸ್ತೆ ಕ್ರಾಸಿಂಗ್‌ಗಳಲ್ಲಿ ಕಾಣಬಹುದು.

ಮಹಿಳೆಯರ ಮೇಲಿನ ಅಪರಾಧಗಳ ಆರೋಪ ಹೊತ್ತಿರುವವರ ‘ಹೆಸರು ಮತ್ತು ಪರಿಚಯ ಸಹಿತ’ ಜನರಿಗೆ ತಿಳಿಸಲು ಹಾಗೂ ಆ ಅಪರಾಧಿಗಳನ್ನು ಅವಮಾನಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಲು ಮಾರ್ಚ್ 2017 ರಲ್ಲಿ ಉತ್ತರ ಪ್ರದೇಶದ ಸರ್ಕಾರ ಎಂಟಿ ರೋಮಿಯೋ ತಂಡವನ್ನು ರಚಿಸಿತ್ತು. ಆದರೂ, ಈ ತಂಡದ ವಿರುದ್ಧ ಅತಿಯಾದ ಕಿರುಕುಳ ಮತ್ತು ತಲೆ ಬೋಳಿಸುವುದು, ಮುಖಗಳನ್ನು ಕಪ್ಪಾಗಿಸುವುದು, ‘ಮುರ್ಗಾ’ ಮಾಡುವುದು (ಕಿವಿ ಹಿಡಿದು ಕುಳಿತುಕೊಳ್ಳುವುದು) ಮುಂತಾದ ಬಲವಾದ ಶಿಕ್ಷೆಗಳನ್ನು ವಿಧಿಸುತ್ತಾರೆ ಎಂಬ ಆರೋಪವಿದೆ.

2017 ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ವಿಶೇಷ ತಂಡಗಳನ್ನು ರಚಿಸಲಾಗಿತ್ತು.

LEAVE A REPLY

Please enter your comment!
Please enter your name here