ಆಭರಣ

0
216
Tap to know MORE!

ಆಭರಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ??. ಅದರಲ್ಲೂ ಭಾರತೀಯ ಮಹಿಳೆಯರಿಗಂತೂ ಹೇಳೋದೇ ಬೇಕಾಗಿಲ್ಲ!!. ದೈನಂದಿನ ಬದುಕಿನಲ್ಲಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಧರಿಸುವುದು ಹಿಂದಿನಿಂದಲೂ ರೂಢಿಯಲ್ಲಿತ್ತು. ಹಿಂದೆ ಚಿನ್ನ , ಬೆಳ್ಳಿ ಅಲ್ಲದೇ ಕಂಚು ಹಾಗೂ ತಾಮ್ರವನ್ನು ಆಭರಣಗಳನ್ನಾಗಿ ಧರಿಸುವುದು ವಾಡಿಕೆಯಲ್ಲಿತ್ತು.

ಈ ಆಭರಣಗಳನ್ನು ಧರಿಸುವುದರ ಹಿನ್ನೆಲೆ ಹೀಗಿದೆ. ಹಿಂದೆ ಹಿರಿಯರು :- “ಸೊಂಟದಿಂದ ಮೇಲ್ಭಾಗಕ್ಕೆ ಚಿನ್ನವನ್ನು ಧರಿಸಿದರೆ, ಸೊಂಟದಿಂದ ಕೆಳಭಾಗಕ್ಕೆ ಬೆಳ್ಳಿಯನ್ನು ಧರಿಸಬೇಕೆಂಬ ನಾಣ್ಣುಡಿಯೇ ಮಾಡಿದ್ದರು. ಇದರರ್ಥ ಚಿನ್ನವು ದೇಹದ ತಾಪಮಾನವನ್ನು ಕಾಪಾಡುವಲ್ಲಿ ಹಾಗೂ ಬೆಳ್ಳಿಯು ಭೂಮಿಯ ಶಕ್ತಿಯೊಂದಿಗೆ ಪ್ರತಿಕ್ರಿಯಿಸಿ ತಂಪಾಗಿರಿಸಿ, ಶರೀರದ ಸಮತೋಲನವನ್ನು ಕಾಪಾಡಲು ಸಹಾಯಕವಾಗಿದೆ.

ಇನ್ನೂ ಚಿಕ್ಕವರಿದ್ದಾಗಲೇ ಅಂದರೆ, ಒಂದು ವರ್ಷ ಪೂರ್ತಿಯಾಗುವುದರಲ್ಲೇ ಕಿವಿ ಚುಚ್ಚಿಸುವುದನ್ನು ಕಾಣುತ್ತೇವೆ. ಕಿವಿಯಲ್ಲಿರುವ ನರ; ಮೆದುಳು ಹಾಗೂ ಕಣ್ಣಿಗೆ ಕೂಡಿರುವುದರಿಂದ ದೃಷ್ಟಿ ದೋಷವನ್ನು ದೂರ ಮಾಡುವುದರಲ್ಲಿ ಸಹಾಯಕವಾಗಿದೆ. ಹಾಗೆಯೇ ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಮೂಗುತಿ ಅಥವಾ ಮೂಗು ಬೊಟ್ಟು ಧರಿಸುವುದರಿಂದ ಅಂದರೆ ಮೂಗಿನ ಎಡಭಾಗವು, ಗರ್ಭಕೋಶಕ್ಕೆ ನೇರ ಸಂಪರ್ಕವಿರುವುದರಿಂದ ಪ್ರಸವದ ಸಂದರ್ಭದಲ್ಲಿ ಸುಲಭವಾಗಿ ಹೆರಿಗೆಯಾಗಲು ಸಹಾಯ ಮಾಡುತ್ತದೆಂದು ಆರ್ಯುವೇದದಲ್ಲಿ ತಿಳಿಸಲಾಗಿದೆ.
ಹಾಗೆಯೇ ಗಾಜಿನ ಬಳೆಗಳನ್ನು ಧರಿಸುವುದರಿಂದ ನಮ್ಮಲ್ಲಿರುವ ಋಣಾತ್ಮಕ ಚಿಂತನೆಗಳನ್ನು (negative energy) ದೂರವಿಡುತ್ತದೆ.ಇನ್ನೂ ಕಾಲ್ಗೆಜ್ಜೆ ಹಾಕುವುದರಿಂದ ಕಾಲಿನ ನರಗಳು ಬೆಳ್ಳಿಯೊಂದಿಗೆ ಪ್ರತಿಕ್ರಿಯಿಸಿ ಧನಾತ್ಮಕ ಶಕ್ತಿಯನ್ನು (posivte vibes) ಹಾಗೂ ಕಾಲುಂಗುರ ಹಾಕುವುದರಿಂದ ಭೂಶಕ್ತಿಯೊಂದಿಗೆ ಸೇರಿ , ಋತುಚಕ್ರದ ಸಮತೋಲನ ಮತ್ತು ಗರ್ಭಕೋಶದ ತೊಂದರೆಗಳನ್ನು ದೂರವಿಡುವಲ್ಲಿ ಸಹಾಯಕವಾಗಿದೆ. ಜೋತಿಷ್ಯ ಶಾಸ್ತ್ರದಲ್ಲಿ ಈ ಮುತ್ತು, ರತ್ನ , ಹವಳ, ಪಚ್ಚೆ ಮುಂತಾದ ಉಂಗುರವನ್ನು ಆಯಾಯ ಬೆರಳಿನಲ್ಲಿ ಧರಿಸಬೇಕೆಂದು ಹೇಳುತ್ತಾರೆ. ಇದರ ಹಿನ್ನೆಲೆಯೇನೆಂದರೆ:- ಆಯಾಯ ಕೈ ಬೆರುಳುಗಳು ನವಗ್ರಹಗಳಿಗೆ (ಹಿಂದಿನ ಸಂಚಿಕೆ “ಕೈ ಬೆರಳಿನ ಚಮತ್ಕಾರ”ದಲ್ಲಿ ಹೇಳಿದಂತೆ ದೇಹ ಪಂಚಭೂತಗಳಿಂದ ಮಾಡಲ್ಪಟ್ಟಿದೆ) ಸಂಬಂಧಿಸಿದುವುದರಿಂದ ಅದು ಮೆದುಳಿಗೆ ಧನಾತ್ಮಕ ಚಿಂತನೆಗಳನ್ನು ಹಾಗೂ ಶಕ್ತಿಯನ್ನು ಕೊಟ್ಟು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.
ಆಭರಣಗಳ ಪಟ್ಟಿ ಹಾಗೂ ಉಪಯೋಗಗಳನ್ನು ಹೇಳುತ್ತಾ ಹೋದರೆ ಅದು ಹತ್ತು ಹಲವಾರು. ಹಿರೀಕರ ಆಚರಣೆ, ಸಂಪ್ರದಾಯಗಳು ಹಾಗೂ ಅದರ ನೆಲೆಗಟ್ಟು ಎಷ್ಟು ಅರ್ಥಪೂರ್ಣವಲ್ಲವೇ??

ಜಪ
ಕುಂದಾಪುರ

LEAVE A REPLY

Please enter your comment!
Please enter your name here