ತೋಕೂರು: ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ “ಆರೋಗ್ಯವಂತ ಶಿಶು ಪ್ರದರ್ಶನ” ಕಾರ್ಯಕ್ರಮ

0
176
Tap to know MORE!

ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ಇದರ ಸಂಯೋಜನೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು ಹಳೆಯಂಗಡಿ ಇದರ ಸಹಕಾರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವು ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿತು.

ಕೆಮ್ರಾಲ್ ನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಸಹಾಯಕಿ ಮಾರ್ಗರೇಟ್ ಸುದರ್ಶಿನಿ ಇವರ ಉಪಸ್ಥಿತಿಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಶ್ರೀ ಸಂತೋಷ್ ಕುಮಾರ್ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಯಶೋದ ದೇವಾಡಿಗ, ಶ್ರೀಮತಿ ಲತಾ,ಕಂಬಳ ಮಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಪುಷ್ಪಲತ, ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಶ್ರೀ ಜಗದೀಶ್ ಕುಲಾಲ್, ಕೋಶಾಧಿಕಾರಿ ಶ್ರೀ ಸಂಪತ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಬೇಕಲ್, ಕ್ರೀಡಾ ಕಾರ್ಯದರ್ಶಿ ಶಶಿಧರ ಆಚಾರ್ಯ, ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳ ಕೇಶವ ದೇವಾಡಿಗ, ಸದಸ್ಯೆಯರಾದ ಶ್ರೀಮತಿ ಶೈಲಾ ನವೀನ್ ಶೆಟ್ಟಿಗಾರ್,ಶ್ರೀಮತಿ ಹೇಮ ನಾಗಪ್ಪ ಮತ್ತು ಮಕ್ಕಳ ಪೋಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಆರೋಗ್ಯವಂತ ಶಿಶು ಪ್ರದರ್ಶನದಲ್ಲಿ ಬಹುಮಾನ ಪಡೆದವರು

ಪ್ರಥಮ : ಶ್ರೀಮತಿ ಜಯಶ್ರೀ ದಾಮೋದರ ದಂಪತಿಗಳ ಪುತ್ರ ಮನ್ವಿತ್ ಕುಲಾಲ್
ದ್ವಿತೀಯ : ಶ್ರೀಮತಿ ಸುಶ್ಮಿತ ವರುಣ್ ಕುಮಾರ್ ದಂಪತಿಗಳ ಪುತ್ರ ಚಿರಾಗ್
ತೃತೀಯ : ಶ್ರೀಮತಿ ಸುಜಾತ ಕುಮಾರಿ ಶಂಕರ್ ಕುಲಾಲ್ ದಂಪತಿಗಳ ಪುತ್ರ ಚಿಂಚನ್ ಪಡೆದರು.

ಬಹುಮಾನ ಪಡೆದ ಶಿಶುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here