FLASH| ಮೆಡಿಕಲ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿದ ರಾಜ್ಯ ಸರ್ಕಾರ

0
137
Tap to know MORE!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಪಾಸಿಟಿವಿಟಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರೋ ಕಾರಣ, ಅನ್ ಲಾಕ್ 3.0 ಜಾರಿಗೊಳಿಸಲಾಗಿದೆ. ಇದೀಗ ಮುಂದುವರೆದು, ರಾಜ್ಯ ಸರ್ಕಾರವು ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ಗಳಿಗೆ ಸಂಬಂಧಿಸಿದಂತೆ ಮೆಡಿಕಲ್ ಕಾಲೇಜ್ ಗಳನ್ನು ತೆರೆಯಲು ಅನುಮತಿಸಿ ಆದೇಶಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದು, ಕೊರೋನಾ ಸೋಂಕಿನ ಪಾಸಿಟಿವಿಟಿ ದರಗಳ ಇಳಿಕೆಯ ಬಿನ್ನಲೆಯಲ್ಲಿ ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ( ಮೆಡಿಕಲ್, ಡೆಂಟಲ್ ಕಾಲೇಜ್, ಆಯುಷ್ ಕಾಲೇಜು ಮತ್ತು ಇನ್ಸಿಟಿಟ್ಯೂಷನ್ನ್, ನರ್ಸಿಂಗ್ ಕಾಲೇಜು ಮತ್ತು ಹೆಲ್ತ್ ಕೇರ್ ಅಕಾಡೆಮಿಕ್ ಇನ್ಟಿಟ್ಯೂಷನ್, ಕಾಲೇಜು ಇತರೆ) ಸಂಸ್ಥೆಗಳು ಕೂಡಲೇ ತೆರೆಯಲು ಈ ಕೆಳಗಿನ ಷರತ್ತುಗಳೊಂದಿಗೆ ಅನುಮತಿಸಿದ್ದಾರೆ.

VTU ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಪ್ರಕಟ | ಜುಲೈ 27 ರಿಂದ ಪರೀಕ್ಷೆ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

  • ಕಾಲೇಜುಗಳಿಗೆ ಆಗಮಿಸುವಂತ ವಿದ್ಯಾರ್ಥಿಗಳು, ಟೀಚಿಂಗ್ ಸ್ಟಾಫ್, ನಾನ್ ಟೀಚಿಂಗ್ ಸ್ಟಾಪ್ ಅಲ್ಲದೇ ಇತರೆ ಸಿಬ್ಬಂದಿಗಳು ಕನಿಷ್ಠ ಪಕ್ಷ ಒಂದು ಡೋಸ್ ಕೊರೋನಾ ಲಸಿಕೆ ಪಡೆದಿರಬೇಕು.
  • ಹೀಗೆ ತೆರೆಯುವಂತ ಕಾಲೇಜು, ಇನ್ಟಿಟ್ಯೂಟ್ ಗಳು ಕಡ್ಡಾಯವಾಗಿ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು.

ಈ ಮೇಲ್ಕಂಡ ಷರತ್ತುಗಳೊಂದಿಗೆ ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ಕಾಲೇಜುಗಳನ್ನು ತೆರೆಯೋದಕ್ಕೆ ಅನುಮತಿಸಲಾಗಿದೆ. ಒಂದು ವೇಳೆ ಕೊರೋನಾ ಸೋಂಕಿನ ಮಾರ್ಗಸೂಚಿ ಕ್ರಮಗಳನ್ನು ಪಾಲಿಸದೇ ಇದ್ದಲ್ಲಿ, ಅಂತಹ ಕಾಲೇಜು, ಇನ್ಟಿಟ್ಯೂಷನ್ ವಿರುದ್ಥ ಕೊರೋನಾ ಸೋಂಕಿನ ನಿಯಂತ್ರಣ ಕಾನೂನು ಕ್ರಮ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ರಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಐಪಿಸಿ ಸೆಕ್ಷನ್ 188 ರಡಿಯಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here