ಆರ್ಥಿಕ ಸಂಕಷ್ಟ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

0
116
Tap to know MORE!

ಚಾಮರಾಜನಗರ: ತಾಲ್ಲೂಕಿನ ಎಚ್.ಮೂಕಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಮಹದೇವಪ್ಪ (46), ಅವರ  ಪತ್ನಿ ಮಂಗಳಮ್ಮ (40) ವರ್ಷ, ಮಕ್ಕಳಾದ ಜ್ಯೋತಿ (14) ವರ್ಷ, ಶ್ರುತಿ (12) ಮೃತಪಟ್ಟವರು. ಮಹಾದೇವಪ್ಪ ಅವರಿಗೆ 20 ದಿನಗಳ ಹಿಂದೆ ಕೋವಿಡ್ ದೃಢಪಟ್ಟು, ಚೇತರಿಸಿಕೊಂಡಿದ್ದರು. ಕೋವಿಡ್ ಹಾಗೂ ಲಾಕ್ ಡೌನ್ ಕಾರಣದಿಂದ ಕುಟುಂಬ ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿತ್ತು ಎಂದು ತಿಳಿದು ಬಂದಿದೆ.

ಹೈಡ್ರೋಜನ್ ಬಲೂನ್ ಕಟ್ಟಿ ನಾಯಿಯನ್ನು ಹಾರಿಸಿದ ಯುಟ್ಯೂಬರ್‌ನ ಬಂಧನ

ಕೂಲಿ‌ ಕಾರ್ಮಿಕರಾಗಿದ್ದ ಮಹಾದೇವಪ್ಪ ಅವರಿಗೆ ಒಂದೂವರೆ ಎಕರೆ ಜಮೀನು ಇತ್ತು. ಮಳೆ ಆಶ್ರಿತ ಕೃಷಿ ಮಾಡಿಕೊಂಡಿದ್ದರು. ಮಹಾದೇವಪ್ಪ ಅವರು ಮಂಗಳವಾರ ನಂಜನಗೂಡು ತಾಲ್ಲೂಕಿನಲ್ಲಿರುವ ಹಿರಿಯ ಮಗಳೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಾರೆ. ಗ್ರಾಮದ ಕುಮಾರ್ ಎಂಬುವವರೊಂದಿಗೂ ಮಾತನಾಡಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬುಧವಾರ ಬೆಳಿಗ್ಗೆ ಗ್ರಾಮದವರೊಬ್ಬರು ಕೂಲಿ ಕೆಲಸಕ್ಕೆ ಕರೆಯಲು ಹೋದಾಗ ಬಾಗಿಲು ತೆರೆದಿರಲಿಲ್ಲ. ಮನೆಯಿಂದ ಯಾವುದೇ ಸದ್ದು ಕೇಳದೇ ಇದ್ದಾಗ ಮನೆಯ ಮೇಲೆ ಹತ್ತಿ ಹೆಂಚು ಸರಿಸಿ‌ನೋಡಿದಾಗ ನಾಲ್ವರೂ ನೇಣು ಹಾಕಿಕೊಂಡಿದ್ದು ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here