ಕೋಲ್ಕತಾದ ನಿವಾಸದಲ್ಲಿ, 35 ವರ್ಷದ ಬಾಲಿವುಡ್ ನಟಿ ಆರ್ಯಾ ಬ್ಯಾನರ್ಜಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದಿವಂಗತ ನಟಿ ಪಂಡಿತ್ ನಿಖಿಲ್ ಬ್ಯಾನರ್ಜಿ ಅವರ ಪುತ್ರಿಯಾಗಿರುವ ಆರ್ಯಾ 2010ರಲ್ಲಿ ದಿಬಾಕರ್ ಬ್ಯಾನರ್ಜಿ ಅವರ ‘ಲವ್ ಸೆಕ್ಸ್ ಔರ್ ದೋಖಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. 2011ರಲ್ಲಿ ‘ದಿ ಡರ್ಟಿ ಪಿಕ್ಚರ್’ನಲ್ಲಿ ನಟಿಸಿದ್ದರು.
ಪೊಲೀಸರ ತನಿಖೆಯ ಪ್ರಕಾರ ನಟಿಯ ದೇಹದಲ್ಲಿ ಯಾವುದೇ ಗುರುತು ಕಂಡುಬಂದಿಲ್ಲ. ಆರ್ಯಾ ಅವರು ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮುಖ ಕೆಳಗಾಗಿ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಪೊಲೀಸರು ಬಾಗಿಲು ಒಡೆದು ಒಳಹೋದಾಗ ರಕ್ತ ಕಲೆಗಳು ನೆಲದಲ್ಲಿ ಕಂಡುಬಂದಿತ್ತು.