ಆರ್‌ಸಿಬಿ ತಂಡದ ಅಧಿಕೃತ ಹಾಡು ಬಿಡುಗಡೆ

0
185
Tap to know MORE!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿ ಪ್ರಾರಂಭವಾಗುವ ಒಂದು ದಿನ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಶುಕ್ರವಾರ ತಮ್ಮ ತಂಡದ ಅಧಿಕೃತ ಹಾಡೊಂದನ್ನು ಬಿಡುಗಡೆ ಮಾಡಿದೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಅಧಿಕೃತವಾಗಿ ಹಂಚಿಕೊಂಡ ತಂಡ, “ಆರ್ಸಿಬಿಯ ಅಧಿಕೃತ ಹಾಡು ಇಲ್ಲಿದೆ! ಮತ್ತು ಇದು ವಿಶ್ವದ ಅತ್ಯುತ್ತಮ ಅಭಿಮಾನಿಗಳಿಗೆ ಸಮರ್ಪಿತವಾಗಿದೆ” ಎಂದು ಬರೆದಿದ್ದಾರೆ.

ಈ ಬಾರಿ ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಯುಎಇ ಅಂಗಣದಲ್ಲಿ ಪ್ರಮುಖವಾಗಿ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಯೀಜಿಸಲಾಗುತ್ತದೆ. ಹೀಗಾಗಿ ಪಂದ್ಯದ ವೇಳೆ ಪ್ರೇಕ್ಷಕರು ಇಲ್ಲದ ಕೊರತೆಯನ್ನು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ಚಾಲೆಂಜರ್ಸ್‌ ರೋಮಾಂಚನ ನೀಡುವಂತಹ ತನ್ನ ನೂತ ಹಾಡನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ವಿಶೇಷ ಎಂಬಂತೆ ಕನ್ನಡದಲ್ಲಿ ‘ಏನೇ ಬಾರಿ.. ಎಂತೇ ಇರಲಿ..’ ಎಂದು ಶುರುವಾಗುವ ಹಾಡಿನ ಮೊದಲ ಸಾಲುಗಳನ್ನು ಎಬಿ ಡಿವಿಲಿಯರ್ಸ್‌ ಹಾಡುತ್ತಿರುವುದನ್ನು ಕಾಣಬಹುದು. ಆದರೆ, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿರುವುದು ಅತಿಯಾದ ಹಿಂದಿ ಬಳಕೆ. ಆರಂಭದಲ್ಲಿ ಒಂದೇ ಒಂದು ಸಾಲನ್ನು ಬಿಟ್ಟರೆ ಹಾಡಿನ ಸಂಪೂರ್ಣ ಸಾಹಿತ್ಯ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿದೆ. ಇದಕ್ಕೆ ಕರ್ನಾಟಕ ರಣಜಿ ತಂಡದ ಮಾಜಿ ನಾಯಕ ದೊಡ್ಡ ಗಣೇಶ್ ಕೂಡ ಅಸಮಾಧಾನ ಹೊರಹಾಕಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದಾಗಿದ್ದು, ವಿರಾಟ್‌ ಕೊಹ್ಲಿ ಸಾರಥ್ಯದಲ್ಲಿ ಸೆ.21ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಪಾಯಕಾರಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ತನ್ನ ಅಭಿಯಾನ ಆರಂಭಿಸಿದೆ.

LEAVE A REPLY

Please enter your comment!
Please enter your name here